ಮದೀನಾ(www. Vknews.in): ಪ್ರಪಂಚದ ಎರಡು ಪವಿತ್ರ ಮಸೀದಿಗಳಲ್ಲೊಂದಾದ ಮದೀನಾದ ಮಸ್ಜಿದುನ್ನಬವಿಯಲ್ಲಿ ನಮಾಝ್ ನಿರ್ವಹಿಸಲು ಇನ್ನು ಮುಂದೆ ಪರ್ಮಿಟ್ ಅಗತ್ಯವಿಲ್ಲ. ಕರೋನಾ ಕಾರಣದಿಂದಾಗಿ ಸುಮಾರು ಒಂದೂವರೆ ವರ್ಷಗಳಿಂದ ಜಾರಿಗೆಯಲ್ಲಿರುವ ನಿಯಂತ್ರಣವನ್ನು ಸೌದಿ ಹಜ್ ಹಾಗೂ ಉಮ್ರಾ ಸಚಿವಾಲಯವು ತೆಗೆದು ಹಾಕಿದೆ. ಈ ಮೂಲಕ ಪ್ರವಾದಿ ಮಸೀದಿಯಲ್ಲಿ ಲೋಕ ಮುಸಲ್ಮಾನರಿಗೆ ನಮಾಝ್ ನಿರವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ತವಕ್ಕಲ್ನಾ ಅ್ಯಪ್ ನಲ್ಲಿ ಇಮ್ಯೂನ್ ಸ್ಟೇಟಸ್ ಹೊಂದಿರುವವರು ಯಾವುದೇ ಸಮಯದಲ್ಲಿ ಮಸ್ಜಿದುನ್ನಬವಿಯಲ್ಲಿ ನಮಾಝ್ ನಿರ್ವಹಿಸಬಹುದಾಗಿದೆ. ಆದರೆ ಪ್ರವಾದಿಯವರ ರೌಲಾ ಶರೀಫ್ ಸಂದರ್ಶನಕ್ಕಿರುವ ನಿಯಂತ್ರಣವನ್ನು ಮುಂದುವರಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.