ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
ಲಂಡನ್ (ವಿಶ್ವಕನ್ನಡಿಗ ನ್ಯೂಸ್):ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟನ್ ನ್ಯಾಯಾಲಯ ಡಾ|ಬಿಆರ್ ಶೆಟ್ಟಿಯ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.ವಂಚನೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಎನ್ಎಂಸಿ ಸಂಸ್ಥಾಪಕರಾದ ಡಾಕ್ಟರ್ ಬಿ ಆರ್ ಶೆಟ್ಟಿ ಹಾಗೂ ಮಾಜಿ ಸಿಇಒ ಪ್ರಶಾಂತ್ ಮಂಗಟ್ ಸಹಿತ ಹಲವರ ಜಗತ್ತಿನ ಯಾವ ಮೂಲೆಯಲ್ಲಿಯೂ ಇರುವ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.
ಕೋಟ್ಯಾಂತರ ರೂಪಾಯಿ ವಂಚನೆ ಆರೋಪವನ್ನ ಹೊರಿಸಿರುವ ಎಡಿಸಿಬಿ ಬ್ಯಾಂಕ್ ದೂರನ್ನ ಆಲಿಸುತ್ತಿರುವ ಲಂಡನ್ ಕೋರ್ಟ್ ಆದೇಶವನ್ನು ನೀಡಿದೆ.
ಡಾ.ಬಿಆರ್ ಶೆಟ್ಟಿಯವರನ್ನು ಬಂಧಿಸುವ ಸನಿಹಕ್ಕೆ ಈ ಆದೇಶ ಕಾರಣವಾಗುತ್ತದಾ ಎಂಬುದನ್ನು ಕಾದುನೋಡಬೇಕಾಗಿದೆ.
ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಗೂಡಿನಬಳಿ ಕಾಂಗ್ರೆಸ್ ಘಟಕದ ವತಿಯಿಂದ ನೂತನವಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಲುಕ್ಮಾನ್ ಬಂಟ್ವಾಳ ಹಾಗೂ ಇತರ ಪದಾಧಿಕಾರಿಗಳಿಗೆ ಗೂಡಿನಬಳಿ ಕಾಂಗ್ರೆಸ್ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅದರಂತೆ ಸೇರಿದ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ನೂತನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಲುಕ್ಮಾನ್ ಬಂಟ್ವಾಳ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ಜೋರಾ ಮತ್ತು ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಝ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಂದಾವರ ಹಾಗೂ ಯುವ ಕಾಂಗ್ರೆಸ್ ಮುಖಂಡ ಪರ್ವೇಝ್ ಜಿಕೆ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲುಕ್ಮಾನ್ ಬಂಟ್ವಾಳ ಅವರು ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸುವ ಬಗ್ಗೆ ಕಾರ್ಯಕರ್ತರು ಮುಂದಡಿಯಿಡಬೇಕೆಂದು ಹೇಳಿದ್ದಲ್ಲದೆ ಕೋಮುವಾದಿ ಚಿಂತನೆಗಳಿಗೆ ಸಡ್ಡು ಹೊಡೆಯುವ ಮೂಲಕ ಕಾಂಗ್ರೆಸ್ ಜಾತ್ಯಾತೀತ ಸಿಧ್ಧಾಂತವನ್ನು ಎತ್ತಿ ಹಿಡಿಯಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ನಂತರದಲ್ಲಿ ರಮನಾಥ ರೈ ಗೂಡಿನಬಳಿ ಕಛೇರಿಗೆ ಭೇಟಿ ನೀಡಿ ಪ್ರಸ್ತುತ ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಗೂಡಿನಬಳಿಯ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ವಿಟ್ಲ ವಲಯದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ಇದರ ಕಾರ್ಯಕರ್ತರ ನಿಯೋಗವು ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿ ಶ್ರೀಯುತ, ವಿನೋದ್ ಕುಮಾರ್ ರೆಡ್ಡಿಯವರನ್ನು ಅಭಿನಂದಿಸಿತು.
ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ಇದರ ವಿಟ್ಲ ವಲಯದ ಅಧ್ಯಕ್ಷರಾದ ಶ್ರೀ ಎಮ್. ಎ. ರಹಿಮಾನ್ ನೇತೃತ್ವದಲ್ಲಿ ತೆರಳಿದ ತಂಡವು ಇತ್ತೀಚಿನ ದಿನಗಳಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಕೆಲವು ಕಳ್ಳತನ ಪ್ರಕರಣಗಳ ನೈಜ ಅಪರಾಧಿಗಳನ್ನು ಕ್ಷಿಪ್ರವಾಗಿ ಬಂಧಿಸಿದ ಮತ್ತು ಕೇವಲ ಪ್ರೇಮ ಪ್ರಕರಣವನ್ನು ಮರೆ ಮಾಚಿಸುವ ತಂತ್ರಕ್ಕಾಗಿ, ಕಳ್ಳತನದ ಸುಳ್ಳು ಮೊಕದ್ದಮೆ ಹೂಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಪ್ರಹಸನಗಳ ಹಿನ್ನೆಲೆಯನ್ನೂ ಯಶಸ್ವಿಯಾಗಿ ಭೇದಿಸಿದ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಲ್ಲದೆ, ವಿನೋದ್ ಕುಮಾರ್ ರೆಡ್ಡಿಯವರ ಕರ್ತವ್ಯ ನಿಷ್ಠೆ ಹಾಗೂ ಯಾವುದೇ ಪ್ರಕರಣಗಳನ್ನು ಯಾವುದೇ ರೀತಿಯ ಬಾಹ್ಯ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸುವಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಪೂರ್ಣ ಬೆಂಬಲವನ್ನು ನೀಡುವ ಮತ್ತು ತಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಸಾರ್ವಜನಿಕ ಸಹಕಾರ ಒದಗಿಸುವಲ್ಲಿ ಪಕ್ಷದ ವತಿಯಿಂದಲೂ, ಕಾರ್ಯೋನ್ಮುಖರಾಗುವೆಂಬ ಭರವಸೆಯನ್ನು ನೀಡಿರುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ವಿಟ್ಲ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು. ನಿಯೋಗದಲ್ಲಿ ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಇಸಾಕ್ ನೀರ್ಕಜೆ ಮತ್ತು ಇತರ ಕಾರ್ಯಕರ್ತರು ಉಪಸ್ಥಿತಿಯಿದ್ದರು.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ ವಸೂಲಿ ಸಂಬಂಧಿ ಕಾನೂನುಗಳು ಇಂದು ಆಡಳಿತ ವರ್ಗದ ಮೂಲಕವೇ (ಸರಕಾರದಿಂದಲೇ) ಸ್ಪಷ್ಟ ಉಲ್ಲಂಘನೆಯಾಗುತ್ತಿರುವುದು ದುರದೃಷ್ಟಕರ ಎಂಬುವುನಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಮ್. ಎಸ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಿರುವರು.
ಕಾನೂನು ಪ್ರಕಾರ, ಹೆದ್ದಾರಿಯಲ್ಲಿರುವ ಶುಲ್ಕ ಪಡೆಯುವ ಕೇಂದ್ರಗಳ ಮಧ್ಯೆ ಕನಿಷ್ಠ 60 ಕಿ.ಮೀ.ಅಂತರವನ್ನು ಇಟ್ಟುಕೊಳ್ಳಬೇಕು. ಇದು ನಿರ್ಧಿಷ್ಟ ಪ್ರದೇಶದಲ್ಲಿರುವ ಯಾವುದೇ ರಸ್ತೆಗಳಲ್ಲಿ ಪಾವತಿಸುವ ಪ್ರತ್ಯೇಕ ರಹದಾರಿ ಸುಂಕಕ್ಕೆ ಅನ್ವಯವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಡಿಯಲ್ಲಿಯೂ ಇದನ್ನೇ ಕಾಣಬಹುದಾಗಿದ್ದರೂ, ಇಂದು ನವಯುಗ ನಿರ್ಮಾಣ್ ಸಂಸ್ಥೆಯವರ ಕಾಮಗಾರಿ ಮುಗಿದು ವರ್ಷಗಳೇ ಸಂದಿದ್ದರೂ ಸರಕಾರದ ಪೂರ್ಣ ಅನುಮತಿಯೊಂದಿಗೆ ಇಂದಿಗೂ ಕೂಡಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಪ್ರಯಾಣಿಕರಿಂದ ದುಬಾರಿ ಶುಲ್ಕವನ್ನು ದೋಚುವ ಪರಿಪಾಠವು ಮುಂದುವರಿದಿದೆ. ಇವರ ಅತಿ ಶೋಷಣೆಯ ವಿರುದ್ಧ ಕೆಲವೊಮ್ಮೆ ಸಾರ್ವಜನಿಕರು ಎಚ್ಚತ್ತುಕೊಂಡಾಗ ಮಾತ್ರ ನಮ್ಮ ಸಂಸದರು ಇದನ್ನು ಖಂಡಿಸುವ ಪ್ರಹಸನವನ್ನು ಮಾಡಿ ಪತ್ರಿಕಾ ಹೇಳಿಕೆಯ ಪರಿಹಾರವನ್ನು ಕೊಡುವ ಮೂಲಕ ಮುಗಿಸುವ ತಂತ್ರವನ್ನು ಕಂಡು ಜನರಿಗೆ ಸಾಕಾಗಿ ಹೋಗಿದೆ, ಸಂಸದರು ಹಾಗೆಂದು ಹೇಳಿದ ಮಾತ್ರಕ್ಕೆ ಅಲ್ಲಿನ ಸರಕಾರಿ ಪ್ರಾಯೋಜಿತ ಹಗಲು ದರೋಡೆ ಸ್ಥಗಿತವಾಗಿರುವುದಿಲ್ಲ. ಕೆಲವೊಮ್ಮೆ ಹೇಳಿಕೆ ಪ್ರಕಟವಾದ ದಿನಗಳಲ್ಲಿ ಬಲಾತ್ಕಾರದ ವಸೂಲಿಗೆ ಒಂದಿಷ್ಟು ಸಡಿಲಿಕೆಯನ್ನು ಮಾಡಿ ಮತ್ತೆ ಇವರ ಸಾರ್ವಜನಿಕ ಲೂಟಿಗೆ ಅವ್ಯಾಹತವಾಗಿ ಶುರು ಇಡುತ್ತಾರೆ.
ಇಂದು ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶದ ತಲಪಾಡಿಯಲ್ಲಿ ಇವರ ಜೇಬು ತುಂಬಿಸಿ ಮುಂದುವರಿದರೆ ಅರವತ್ತು ಕಿ.ಮೀ. ಅಂತರದಲ್ಲಿ ಮೂರು ಬಾರಿ ಎಂಬಂತೆ ಸುರತ್ಕಲ್ ನಲ್ಲಿ ಮುಂದುವರಿದು ಉಡುಪಿಯಲ್ಲಿ ಹಣವನ್ನು ನೀಡಬೇಕಾಗುವ ಜನಸಾಮಾನ್ಯರ ದಯನೀಯತೆಯನ್ನು ಕೇಳುವವರು ಇಲ್ಲವಾಗಿದೆ. ಇತ್ತ ಕಡೆಯಿಂದ ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲುವಿನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮುಂದುವರಿಸಿದವನು ಪಂಪ್ ವೆಲ್ ನಿಂದ ಹೆದ್ದಾರಿಯ ಯಾವ ರಸ್ತೆ ಹಿಡಿದರೂ ಇಪ್ಪತ್ತು ಕಿ.ಮೀ. ಸಾಗುವ ಮೊದಲೇ ಮತ್ತೆ ಹಣ ತೆರಬೇಕು. ಆದುದರಿಂದ ಇಷ್ಟೊಂದು ಕಾನೂನುಬಾಹಿರ ವಸೂಲಿ ಕೇಂದ್ರಗಳನ್ನು ತೆರವುಗೊಳಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಲು ಮುಂದಡಿಯಿಡದಿದ್ದಲ್ಲಿ, ಸಾರ್ವಜನಿಕ ಹಿತಾಸಕ್ತಿಗಾಗಿ ನಮ್ಮ ಪಕ್ಷದ ವತಿಯಿಂದ ಎಲ್ಲಾ ಸಮಾನ ಮನಸ್ಕ ಪಕ್ಷಗಳು ಮತ್ತು ಸಂಘಟನೆಗಳ ಜೊತೆ ಸೇರಿ ಐಕ್ಯ ವೇದಿಕೆಯಲ್ಲಿ ಹೋರಾಡಲಿರುವುದಾಗಿ ಅವರು ಈ ಸಂಧರ್ಭದಲ್ಲಿ ತಿಳಿಸಿದರು.
ಬೆಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ನೂತನ ರಾಜ್ಯ ಸಂಚಾಲಕರಾಗಿ ಸಮಾಜಸೇವಕ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವೈ ಸಯೀದ್ ಅಹ್ಮದ್ ಅವರ ಶಿಫಾರಸಿನ ಮೇಲೆ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನದೀಂ ಜಾವೆದ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅನುಮೋದಿಸಿರುತ್ತಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಮುಸ್ತಫಾ ಅಬ್ದುಲ್ಲರು ತನಗೆ ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕ ಯುಟಿ ಖಾದರ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೂ ರಾಜ್ಯಾದ್ಯಂತ ವಿವಿಧ ಯೋಜನೆಗಳೊಂದಿಗೆ ಪಕ್ಷ ಸಂಘಟಿಸಲು ಶಕ್ತಿ ಮೀರಿ ಶ್ರಮಿಸುವೆನು ಎಂದರು.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಮತ್ತು ಪ್ರಸಕ್ತ ನಿರಂತರ ಏರುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕವು ಇಂದು ಸಂಜೆ 4:00 ಕ್ಕೆ ಮಂಗಳೂರು ಹಂಪನಕಟ್ಟೆಯ ಮಿನಿ ವಿಧಾನಸೌಧ ಎದುರಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ ರಾಝ್ ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನು ಜರಗಿಸಿತು. ಸುಮಾರು ಇನ್ನೂರಕ್ಕೂ ಮಿಕ್ಕಿ ಪ್ರತಿಭಟನಾ ನಿರತರನ್ನು ಹೊಂದಿದ್ದ ಈ ಸಭೆಯಲ್ಲಿ, ಮಾತನಾಡಿದ FITU ರಾಜ್ಯ ಕಾರ್ಯದರ್ಶಿ ದಿವಾಕರ್ ಬೋಳೂರು, ಕೇಂದ್ರ ಸರಕಾರ ತೈಲ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವುದನ್ನು ನಿಲ್ಲಿಸಲಿ ಎಂದರು. ಫ್ರೆಟರ್ನಿಟಿ ಮೂವ್ಮೆಂಟ್ ಜಿಲ್ಲಾ ಕಾರ್ಯದರ್ಶಿಯವರಾದ ಮೊಹಮ್ಮದ್ ಸಯ್ಯಾಫ್ ರವರು ಇಂದು ಸರಕಾರದ ಜನ ವಿರೋಧಿ ನೀತಿಯನ್ನು ವಿಮರ್ಶಿಸಿದರೆ ಪಾಕಿಸ್ತಾನದವನಾಗುತ್ತಾನೆ ಎಂಬುವುದಾಗಿ ಸರಕಾರದ ವಕ್ತಾರರ ಮತ್ತು ಅವರ ಚೇಲಾ ಮಾಧ್ಯಮಗಳು ನೀಡುವ ಹೇಳಿಕೆಗಳನ್ನು ಲೇವಡಿ ಮಾಡಿದರು, WPI, ಜಿಲ್ಲಾ ಉಪಾಧ್ಯಕ್ಷೆ ಮರ್ಯಮ್ ಶಹೀರರವರು,ಬಡಜನತೆನ್ನು ಭಾಧಿಸುವ ತೈಲ ಬೆಲೆಯೇರಿಕೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಲು ಮುಂದಾಗಬೇಕೆಂದು ಹೇಳಿದರು. WPI ಜಿಲ್ಲಾ ವಕ್ತಾರ ಅರಫಾ ಮಂಚಿಯವರು, ಕೇಂದ್ರ ಸರ್ಕಾರದ ವಿವಿಧ ರೀತಿಯ ಜನಮರುಳು ಗೊಳಿಸುವ ತಂತ್ರಗಳನ್ನು ವಿವರಿಸಿದರು. WPI ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಖಾದರ್ ಕುಕ್ಕಾಜೆಯವರು ಮಾತಾನಾಡಿ, ಸರಕಾರದ ವೈಫಲ್ಯದ ಬಗ್ಗೆ ಹೇಳಿದರೆ, ಕಾಂಗ್ರೆಸ್ ಪಕ್ಷದಿಂದ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ, ಹೌದು, ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಬೆಲೆಯೇರಿಕೆಯಂತಹ, ಸರಕಾರದ ಯಾವುದೇ ಜನವಿರೋಧಿ ನೀತಿಗೆದುರಾಗಿ ಏನು ಮಾಡದೆ ಇದರ ಬಗ್ಗೆ ವಿರೋಧ ಪಕ್ಷಗಳು ಮೌನ ಪ್ರೇಕ್ಷಕವಾಗಿ ತೆಪ್ಪಗೆ ಕುಳಿತಿರುವ ಕಾರಣದಿಂದಲೇ ನಮ್ಮ ಇಂದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆಯೆಂದರು ಸರಕಾರದ ಈ ಜನ ವಿರೋಧಿ ನೀತಿಯನ್ನು ವಿರೋಧಿಸಿ ರಂಗಕ್ಕಿಳಿಯುವುದು ನಮಗೆ ಅನಿವಾರ್ಯವಾಗಿರುವುದರಿಂದಾಗಿ ಇದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆಯೆಂದವರು ತಿಳಿಸಿದರು. WPI ರಾಜ್ಯ ಉಪಾಧ್ಯಕ್ಷರಾಗಿರುವ ಶ್ರೀಕಾಂತ್ ಸಾಲ್ಯಾನ್ ರವರು, ಕೇಂದ್ರ ಸರ್ಕಾರವು ಜನಸಾಮಾನ್ಯರ ಜೇಬಿನಿಂದ ಲೂಟಿ ಮಾಡಿದ ಹಣವನ್ನು ಬ್ರಹತ್ ಉದ್ಯಮಿಗಳಿಗೆ ಪಾವತಿಸುತ್ತಿದೆಯೆಂದು ತಮ್ಮ ಭಾಷಣದಲ್ಲಿ ವಿವರಿಸಿದರು. ಕೊನೆಯಲ್ಲಿ ಮಾತನಾಡಿದ WPI ದ. ಕ. ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ರಾಝ್ ರವರು ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಇಂದಿನ ಬೆಲೆಯಲ್ಲಿ ನಮ್ಮ ನೆರೆ ದೇಶಗಳಲ್ಲಿ (ನೇಪಾಳ, ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನ) ಮಾರುತ್ತಿರುವ ದರವನ್ನು ಹೋಲಿಸಿದರೆ ಇಂದು ನಮ್ಮಲ್ಲಿ ಲೀಟರ್ ಒಂದಕ್ಕೆ 40 ರೂಪಾಯಿಗಿಂತ ಹೆಚ್ಚು ಪಡೆಯುವ ಹಾಗಿಲ್ಲವೆಂದರಲ್ಲದೆ ಕೇಂದ್ರ ಸರ್ಕಾರವು ತೈಲ ಮಾರಾಟ ವನ್ನು ಜಿ. ಎಸ್. ಟಿ. ವ್ಯಾಪ್ತಿಗೆ ತರಲಿ ಎಂದು ಅಗ್ರಹಿಸಿದರು.
ಇಂದಿನ ಪ್ರತಿಭಟನಾ ಸಭೆಯಲ್ಲಿ W.P.I.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ಮತ್ತು ಪಕ್ಷದ ಎಲ್ಲಾ ವಲಯ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಮತ್ತು ಅನೇಕ ಕಾರ್ಯಕರ್ತರುಗಳು ಭಾಗವಹಿಸಿದ್ದರು ಸಭೆಯನ್ನು ನಿರೂಪಣೆ ಮಾಡಿದ ಮುನೀರ್ ಪದ್ರಂಗಿ ಕೊನೆಯಲ್ಲಿ ಧನ್ಯವಾದವಿತ್ತರು. ಶಾಂತಿಗೀತೆಯೊಂದಿಗೆ, ಕಾರ್ಯಕ್ರಮವನ್ನು ಮುಗಿಸಿ, ಪ್ರಸಕ್ತ ತೈಲ ದರವನ್ನು ಇಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿಯನ್ನು ನೀಡಲಾಯಿತು.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಮತ್ತು ಪ್ರಸಕ್ತ ನಿರಂತರ ಏರುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕವು ಫೆಬ್ರವರಿ 5 ರ ಶುಕ್ರವಾರ ಸಂಜೆ 4:00 ಕ್ಕೆ ಮಂಗಳೂರು ಹಂಪನಕಟ್ಟೆಯ ಮಿನಿ ವಿಧಾನಸೌಧ ಎದುರಿನಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ ರಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ತಮ್ಮ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಕೇಂದ್ರ ಸರಕಾರ ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಹಾಗೂ ಇದರ ಬಗ್ಗೆ ವಿರೋಧ ಪಕ್ಷಗಳು ಮೌನ ಪ್ರೇಕ್ಷಕವಾಗಿರುವ ಕಾರಣ, ಕೇಂದ್ರ ಸರಕಾರದ ಈ ಜನ ವಿರೋಧಿ ನೀತಿಯನ್ನು ವಿರೋಧಿಸಿ ರಂಗಕ್ಕಿಳಿಯುವುದು ನಮಗೆ ಅನಿವಾರ್ಯವಾಗಿರುವುದರಿಂದಾಗಿ ಇದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅದರಂತೆ ಫೆಬ್ರವರಿ 5 ಶುಕ್ರವಾರ ಸಂಜೆ 4: 00 ಗಂಟೆಗೆ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಆದ್ದರಿಂದ ತಾವೆಲ್ಲರೂ ಬೃಹತ್ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಈ ಸಂಧರ್ಭದಲ್ಲಿ, ಸಾರ್ವಜನಿಕರನ್ನು ಕೋರಿಕೊಂಡಿರುವರು.
ಬೆಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರಕಾರ ಹೇರಿರುವ 2021 ರ ಹೊಸ ಬಜೆಟ್ ತಳಸ್ತರದ ಜನಗಳ ಆರ್ಥಿಕ ಸಂಕಷ್ಟದ ಗಾಯದ ಮೇಲೆ ಉಪ್ಪು ಇಟ್ಟಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ವಿನೂತನ ಬಜೆಟ್ ಕೃಷಿ ಮತ್ತು ಕೃಷಿಯೇತರ ಕಾರ್ಮಿಕ ವರ್ಗದ ಬಡವರನ್ನಲ್ಲದೆ ಒಟ್ಟು ರೈತಾಪಿ ಜನಗಳನ್ನು ಹಂತ ಹಂತವಾಗಿ ಮುಗಿಸುವ “ಸ್ಲೋ ಪಾಯಿಸನ್” ಬಜೆಟ್ ಆಗಿದೆಯೆಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ಇದರ ಕರ್ನಾಟಕ ರಾಜ್ಯಾದ್ಯಕ್ಷರಾದ ಶ್ರೀಮಾನ್ ಸುಲೈಮಾನ್ ಕಲ್ಲರ್ಪೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕೇಂದ್ರ ಸರಕಾರವು ಈ ಬಜೆಟ್ ನಲ್ಲಿ ಭಾರತದ ಆಹಾರ ನಿಗಮ ಸಂಸ್ಥೆ FCI ಗೆ ಬಜೆಟ್ ಕಡಿತ ಮಾಡಲಾಗಿದೆ. ಇದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಕೊಡುವುದನ್ನು ತಪ್ಪಿಸುವ ಮತ್ತು ಶೇಕಡಾ 82ರಷ್ಟಿರುವ ಬಡವರ್ಗದ ಜನರಿಗೆ ಆಹಾರ ನೀಡುವುದನ್ನು ಸುಲಭವಾಗಿ ಮುಗಿಸುವ ತಂತ್ರ ಅಡಕವಾಗಿದೆ. ಇವರ ಹೊಸ ಕೃಷಿ ಮಸೂದೆಗೆ ವಿರುದ್ಧವಾಗಿ ಬೀದಿಗಿಳಿದ ಅಸಹಾಯಕ ರೈತ ವರ್ಗಕ್ಕೆ ಸಾಂತ್ವನದ ಬಜೆಟ್ ನೀಡುವ ಬದಲು ಇದು ಒಂದು ರೀತಿಯಲ್ಲಿ ಹಗೆತನ ತೀರಿಸುವ ‘ರೈತವಿರೋಧಿ ಬಜೆಟ್’ ಆಗಿದೆಯೆಂದಲ್ಲದೆ, ವಿತ್ತ ಸಚಿವೆಯರು ಈ ಹಿಂದೆ, ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಮಾತ್ರವಲ್ಲದೆ ಇದೊಂದು ಬಗೆಯ “ಆತ್ಮ ಬರ್ಬಾದ್” ವಿನಾಶಕಾರಿ ಬಜೆಟ್ ಕೂಡಾ ಆಗಿದ್ದು ಇದರ ವಿರುದ್ಧವೂ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಜನವಿರೋಧಿ ನೀತಿಗಳಿಗೆದುರಾಗಿ, ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಜನಾಂದೋಲನ ರೂಪಿಸಲಿದ್ದೇವೆಯೆಂದು ಈ ಸಂಧರ್ಭದಲ್ಲಿ ಅವರು ಹೇಳಿದರು.
ಬೈರಿಕಟ್ಟೆ,ವಿಟ್ಲ (ವಿಶ್ವಕನ್ನಡಿಗ ನ್ಯೂಸ್): ಬೈರಿಕಟ್ಟೆಯ ಹೊಸಮನೆ ಫೆನ್ಸ್ ಕ್ರೀಡಾಂಗಣದಲ್ಲಿ ಬಿಕೆ ಫೆನ್ಸ್ ಹಾಗು ಗೆಳೆಯರ ಬಳಗ ಬೈರಿಕಟ್ಟೆ ವತಿಯಿಂದ ನಡೆದ ಬೈರಿಕಟ್ಟೆ ಪ್ರೀಮಿಯರ್ ಲೀಗ್ (ಬಿಪಿಎಲ್)-2021 ಸೀಸನ್-1 ನ ಮುಕುಟವನ್ನು ಅಮೋಘ ಆಟದ ಮೂಲಕ ಕಾಡುಮನೆ ಸ್ಟ್ರೈಕರ್ಸ್ ತಮ್ಮದಾಗಿಸಿಕೊಂಡಿತು.ರಿಯಲ್ ಬೈರಿಕಟ್ಟೆಯನ್ಸ್,ಕಟ್ಟೆ ನೈಟ್ ರೈಡರ್ಸ್,ಕಾಡುಮನೆ ಸ್ಟ್ರೈಕರ್ಸ್ ಹಾಗು ಲೆಜಂಡರಿ ದೇಲಂತಬೆಟ್ಟು ಹೀಗೆ ನಿಗದಿತ ನಾಲ್ಕು ತಂಡಗಳ ಪ್ರೀಮಿಯರ್ ಲೀಗ್ ಗೆ ಹರಾಜು ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆಗೊಳಿಸಲಾಗಿತ್ತು.ಮೂರು ದಿನಗಳ ಕಾಲ ರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಲೀಗ್ ಪಂದ್ಯಾಟದಲ್ಲಿ ಲೆಜಂಡರಿ ದೇಲಂತಬೆಟ್ಟು ಹಾಗು ಕಾಡುಮನೆ ಸ್ಟ್ರೈಕರ್ಸ್ ಪೈಪೋಟಿಯ ಅಂಕದೊಂದಿಗೆ ಅಂತಿಮ ಹಣಾಹಣಿಗೆ ಆಯ್ಕೆಯಾಗಿತ್ತು.ಅಂತಿಮ ಪಂದ್ಯದಲ್ಲಿ ಕಾಡುಮನೆ ಸ್ಟ್ರೈಕರ್ಸ್ ತಂಡ ಐದು ಓವರ್ ಗಳಲ್ಲಿ 25 ರನ್ ಗಳ ಗುರಿಯನ್ನು ನೀಡಿತ್ತು.ಗುರಿಯನ್ನು ಬೆನ್ನಟ್ಟಿದ ಲೆಜಂಡರಿ ದೇಲಂತಬೆಟ್ಟು ಕಾಡುಮನೆ ಸ್ಟ್ರೈಕರ್ಸ್ ತಂಡದ ಅಮೋಘ ದಾಳಿಗೆ 19 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.ಈ ಮೂಲಕ ಕಾಡುಮನೆ ಸ್ಟ್ರೈಕರ್ಸ್ ಅರ್ಹವಾಗಿ ಬಿಪಿಎಲ್ ಸೀಸನ್-೧ ಚಾಂಪಿಯನ್ ಶಿಪ್ ಅನ್ನು ತನ್ನದಾಗಿಸಿತು.
ಫೆನ್ಸ್ ಕ್ರೀಡಾಂಗಣದ ನಿರ್ಮಾಣದ ರೂವಾರಿ ಫರಾಝ್ ಬೈರಿಕಟ್ಟೆ ಇವರನ್ನು ಬಿಕೆ ಫೆನ್ಸ್ ಹಾಗು ಗೆಳೆಯರ ಬಳಗ ಸನ್ಮಾನ ನಡೆಸಿತು.ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮರಾಗಿ ಕಾಡುಮನೆ ಸ್ಟ್ರೈಕರ್ಸ್ ನಾಯಕ ಝಿಯಾದ್ ಕಾಡುಮನೆ ತಮ್ಮದಾಗಿಸಿದರು.ಸರಣಿಯ ಮನೋಹರವಾದ ಸಿಕ್ಸರ್ ಬಾರಿಸಿದ ಗೌರವಕ್ಕೆ ಲೆಜೆಂಡರಿ ದೇಲಂತಬೆಟ್ಟು ನಾಯಕರಾದ ಅನ್ಸಾರ್ ಶೇಖಮಲೆ ಭಾಜನರಾದರು.ಉತ್ತಮ ದಾಂಡಿಗರಾಗಿ ಕಾಡುಮನೆ ಸ್ಟ್ರೈಕರ್ಸ್ ನ ಆರಿಫ್ ಕಾಡುಮನೆ,ಉತ್ತಮ ಬೌಲರ್ ಆಗಿ ಇಮ್ತಿಯಾಝ್ ಬೊಬ್ಬೆಕೇರಿ,ಸರಣೆ ಶ್ರೇಷ್ಟ ಪ್ರಶಸ್ತಿಗೆ ಝಿಯಾದ್ ಕಾಡುಮನೆ ಆಯ್ಕೆಯಾದರು.ಪಂದ್ಯಾವಳಿಯುದ್ದಕ್ಕೂ ತೀರ್ಪುಗಾರಿಕೆ ನೀಡಿದ ಮಹಮ್ಮದ್ ಕಾನತ್ತಡ್ಕ,ವೀಕ್ಷಕ ವಿವರಣೆ ನೀಡಿದ ಚಂದ್ರಶೇಖರ ಮಾಸ್ಟರ್,ಕ್ರೀಡಾಂಗಣದ ನಿರ್ಮಾಣಕ್ಕೆ ಸಹಕಾರ ನೀಡಿದ ಶೇಖರ್ ಕುಡಿಯರಮೂಲೆ ರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ವಿಜೇತ ತಂಡಗಳಿಗೆ ಎಸ್.ಆರ್ ಇಂಜಿನಿಯರಿಂಗ್ ಸೌದಿ ಅರೇಬಿಯಾ, ಚಾಂಪಿಯನ್ ಹಾಗು ರನ್ನರ್ಸ್ ತಂಡಗಳಿಗೆ ನಗದು ಬಹುಮಾನವನ್ನು ಘೋಷಿಸಿದರು.
ಸಮಾರೋಪ ಸಮಾರಂಭದ ನಿರೂಪಣೆಯನ್ನು ಆಶಿಕ್ ಮಿಯಾ ಆವಳ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಸದಸ್ಯರಾದ ಪಿಬಿ ಮೊಯಿದಿನ್,ಮಾಜಿ ಸದಸ್ಯರಾದ ಹಮೀದ್ ಡಿ,ಗೆಳೆಯರ ಬಳಗದ ಅಧ್ಯಕ್ಷರಾದ ಚಂದ್ರಶೇಖರ್ ಮಾಸ್ಟರ್,ಖಜಾಂಜಿ ಮಾರ್ಸಲ್ ಡಿಸೋಜ,ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ಇಂಬುಚ್ಚ,ಸಿರಾಜ್ ಮದಕ ಮೊದಲಾದವರು ಉಪಸ್ಥಿತರಿದ್ದರು.ಝಡ್ ಮ್ಯಾಕ್ಸ್ ಲೈವ್ ಪಂದ್ಯದ ನೇರ ಪ್ರಸಾರ ನೀಡಿದರು.
ಬಹರೈನ್(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಬಹರೈನ್ ಇದರ 20ನೇ ವಾರ್ಷಿಕ ಮಹಾ ಸಭೆಯು ಝೂಮ್ ಆನ್ಲೈನ್ ಮುಖಾಂತರ ಬಹು. ಅಬ್ದುಲ್ ಮಜೀದ್ ಸಅದಿ ಉಸ್ತಾದರ ಅದ್ಯಕ್ಷತೆಯಲ್ಲಿ, ಉಸ್ತಾದರ ದುಆದೊಂದಿಗೆ ನಡೆಯಿತು.
ಜನಾಬ್ ಸಿದ್ದೀಖ್ ಸುಳ್ಯರವರು ಸಭೆಯಲ್ಲಿ ಹಾಜರಾದವರಿಗೆ ಸ್ವಾಗತವನ್ನ ಕೋರಿದರು. ಸಭೆಯ ಉದ್ಗಾಟನೆಯನ್ನ DKSC ಬಹರೈನ್ ಅಭಿವೃದ್ಧಿ ಸಮಿತಿ ಚೇರ್ಮಾನ್ ಹಾಜಿ ಮಹಮ್ಮದ್ ಸೀದಿಯವರು ನಿರ್ವಹಿಸಿದರು. 2019 ವಾರ್ಷಿಕ ಮಹಾಸಭೆ ವರದಿಯನ್ನ ಕಾರ್ಯದರ್ಶಿ ಜನಾಬ್ ನೌಶಾದ್ ಉಳ್ಳಾಳ್ ರವರು ವಾಚಿಸಿದರು. 2020 ವಾರ್ಷಿಕ ವರದಿಯನ್ನ ಪ್ರದಾನ ಕಾರ್ಯದರ್ಶಿ ಜನಾಬ್ ಸಿದ್ದೀಖ್ ಸುಳ್ಯ ಮಂಡಿಸಿದರು. ನಂತರ 2020 ವಾರ್ಷಿಕ ಲೆಕ್ಕ ಪತ್ರವನ್ನ ಜೊತೆ ಕಾರ್ಯದರ್ಶಿ ಜನಾಬ್ ಕಬೀರ್ ಕೈಕಂಬ ಮಂಡಿಸಿದಾಗ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಅದ್ಯಕ್ಷರು ಮಾತಾಡಿ DKSC ಅಭಿವೃದ್ದಿಗೋಸ್ಕರ ದುಡಿದವರಿಗೆ ದುಆ ಮಾಡಿ, ಮುಂದಕ್ಕೆ ಆಯ್ಕೆಯಾಗುವ ಸಮಿತಿ ಇದಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಯತ್ನಸಬೇಕೆಂದು ಕೇಳಿಕೊಂಡರು. ನಂತರ ಕೇಂದ್ರ ಸಮಿತಿ ಕಾರ್ಯದ್ಯಕ್ಷರಾದ ಸಯ್ಯದ್ ಮುಹಮ್ಮದ್ ತಂಙಳ್ ಉಚ್ಛಿಲರವರು ಆನ್ಲೈನ್ ಮೂಲಕ ನಸೀಹತ್ ಹಾಗೂ ದುಆ ಮಾಡಿದರು.
ಸೆಂಟ್ರಲ್ ಕಮಿಟಿ ಅದ್ಯಕ್ಷರಾದ ಸಯ್ಯದ್ ಆಟಕೋಯ ತಂಙಳ್ ರವರು ಸಭೆಗೆ ಹಾಜರಾಗಿ ನಸೀಹತ್ ಹಾಗೂ ಕಾರ್ಯಕತರಿಗೆ ದುಆ ಮಾಡಿ ಕೇಂದ್ರ ಸಮಿತಿಗೆ ಉಪಾದ್ಯಕ್ಷರಾಗಿ ಹಾಜಿ ಮಹಮ್ಮದ್ ಸೀದಿಯವರನ್ನ ಆಯ್ಕೆ ಮಾಡಿದ ವಿಷಯವನ್ನ ಸಭೆಯಲ್ಲಿ ಪ್ರಸ್ತಾಪಿಸಿದರು. ತದನಂತರ ಹಳೇ ಕಮಿಟಿಯನ್ನ ವಿಸರ್ಜಿಸಿ ಅಂದಿನ ರಿಟರ್ನಿಂಗ್ ಆಫೀಸರ್, ಝೈನುದ್ದಿನ್ ಹಾಜಿ ಮುಕ್ವೆಯವರಿಗೆ ಹಸ್ತಾಂತರಿಸಲಾಯಿತು.
ಅವರು ಸಮಿತಿಯನ್ನ ಆಯ್ಕೆ ಮಾಡುವ ನಿಯಮಗಳನ್ನ ವಿವರಿಸಿದರು ಸಭೆಯು ಹಳೇ ಸಮಿತಿಯನ್ನೇ ಮುಂದುವರಿಸಲು ಅಭಿಪ್ರಾಯಪಟ್ಟಿತು. ಆ ಪ್ರಕಾರ ರಿಟರ್ನಿಂಗ್ ಆಫೀಸರ್ ಎಲ್ಲರ ಒಪ್ಪಿಗೆ ಮೇರೆಗೆ ಹಳೆಯ ಸಮಿತಿಯನ್ನ ಆಯ್ಕೆ ಮಾಡಿದರು.
2021-2022ರ ಸಾಲಿನ ನೂತನ ಸಾರಥಿಗಳು: ಅದ್ಯಕ್ಷರು : ಅಬ್ದುಲ್ ಮಜೀದ್ ಸಅದಿ ಉಪಾದ್ಯಕ್ಷರು : ಲತೀಪ್ ಕಾಪು , ಅಬ್ದುಲ್ಲ ಅಲವಿ , ಇಸಾಕ್. ಪ್ರದಾನ ಕಾರ್ಯದರ್ಶಿ : ಸಿದ್ದೀಖ್ ಸುಳ್ಯ ಕಾರ್ಯದರ್ಶಿ : ನೌಶಾದ್ ಉಳ್ಳಾಳ್ ಜೊತೆ ಕಾರ್ಯದರ್ಶಿ : ಕಬೀರ್ ಪಕ್ಷಿಕರೆ ಖಜಾಂಜಿ: ಸತ್ತಾರ್ ಮಂಜೆಸ್ವರ್ ಮುಖ್ಯ ಸಲಹೆಗಾರರು: ಶರೀಫ್ ಮಲಾರ್ ಸಲಹೆಗಾರರು: ಮಹಮ್ಮದ್ ಸೀದಿ, ಫಝಲ್ ಸುರತ್ಕಲ್
ಕಾರ್ಯಕಾರಿ ಸದಸ್ಯರು: ಹಂಝ ಪತ್ತೆರಿ ಮುಟ್ಟು ಕಾಸಿಂ ಮೊಹಿದಿನ್ ಕೆ.ಮ್. ಲತಿಫ್ ಸಜಿಪ ಅಬ್ಬಾಸ್ ಮಂಚೂರ್ ಹಾರಿಸ್ ಒಕ್ಕೆತ್ತೂರ್ ಹಸೈನಾರ್ ಪೆರ್ಲ ಅಶ್ರಫ್ ಸುನಾರ
ಎಲ್ಲಾ ಘಟಕದ ಅದ್ಯಕ್ಷರುಗಳು ನೂತನ ಕಮಿಟಿಗೆ ಅಭಿನಂದನೆಯನ್ನ ಸಲ್ಲಿಸಿದರು. ಕೊನೆಯಲ್ಲಿ ಜನಾಬ್ ಅಶ್ರಫ್ ಸುನಾರ ದನ್ಯವಾದವನ್ನ ಸಲ್ಲಿಸಿ 3 ಸ್ವಲಾತಿನೊಂದಿಗೆ ಸಭೆಯನ್ನ ಮುಕ್ತಾಯ ಗೊಳಿಸಲಾಯಿತು.
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.