ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ ಸ್ಮಶಾನ ನೆನಪಾಗುತ್ತದೆ.
ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ ನನ್ನ ಕತ್ತಿ, ಗುರಾಣಿ ತುಕ್ಕು ಹಿಡಿದಿವೆ. ಗಾಂಧಿ ನೋಟಿನ ಹಿಂದೆ ಬಿದ್ದ ನನಗೆ ಅದಕ್ಕಂಟಿದ ಬೆವರು, ರಕ್ತ, ವೀರ್ಯ ಮಿಶ್ರಣದ ಹೊಚ್ಚ ಹೊಸ ವಾಸನೆ. ತೊಳೆದರೂ ಅಳಿಯದ ಕಲೆಗಳ ಕಂಡು ಈ ಬಣ್ಣದ ಹಾಳೆಗೆ ಬೆನ್ನು ಮಾಡುತ್ತೇನೆ.
ನಿದ್ರೆಗೆಟ್ಟು ರಾತ್ರಿ ಪೂರಾ ಬರೀ ಬೆತ್ತಲೆ ಕಣ್ಣುಗಳೇ ಈಗೀಗ ರೆಪ್ಪೆಗಳೂ ಪಟಪಟಿಸುತ್ತಿಲ್ಲ ಕತ್ತಲೆಗೆ ದೃಷ್ಟಿಯಿಲ್ಲವಲ್ಲ.! ಬೆನ್ನ ಹಿಂದೆ ಕಣ್ಣು ಮೂಡಿ ಚೂರಿ ಹಾಕಿದವರೂ ಸಿಸಿಟಿವಿ ಅಡಿಯಲ್ಲಿ. ಅವರಿಗೇ ತೋರಿಸಿ ಎದೆಗಿರಿಯುವ ತಾಕತ್ತಿಲ್ಲ ನನಗೆ ಕುಳಿತಲ್ಲೇ ಕೆಮ್ಮುತ್ತೇನೆ. ನಾನೂ ಸಾಯಲು ಅಂಜುತ್ತೇನೆ.
ಇತ್ತೀಚಿಗೆ ಬೀಳುವ ಕನಸುಗಳಿಗೆ ಬಣ್ಣಗಳೇ ಇಲ್ಲ, ಇದ್ದರೂ ನೆರಳಿನ ಪ್ರಭಾವಕ್ಕೆ ಒಳಗಾಗುತ್ತಿವೆ. ಒಡೆದ ಕನ್ನಡಿಯ ಚೂರುಗಳಲ್ಲಿ ಒಡೆದ ಮುಖಗಳಂತೆ ಅವು ಚದುರಿ ಛಿದ್ರ, ಛಿದ್ರ.. ಸಟಕ್ಕನೆ ಎದ್ದು ಜಿದ್ದಿಗೆ ಬಿದ್ದು ಗಂಡಸು ಎಂದು ದಾಖಲಿಸಲು ಕಾಯುತ್ತೇನೆ, ಗುರುತಿನ ಉಂಗುರವೂ, ರಾಜಮುದ್ರೆಯೂ ಯಾರ ಬಳಿಯೂ ಸಿಕ್ಕುತ್ತಿಲ್ಲ.
ಸೋತು ಹೋಗಿದ್ದೇನೆ ಎನ್ನಲು ಈ ನಾಲಿಗೆಗೆ ಸೊಕ್ಕು. ಅಳಲು ಸಾಕಷ್ಟು ಕಣ್ಣೀರೆ ಇಲ್ಲ ಧ್ವನಿಯೂ ಈಗೀಗ ಅಸ್ಪಷ್ಟ. ಇರುವಷ್ಟು ದಿನ ಗುಡ್ಡೆ ಹಾಕುವುದರಲ್ಲೇ ಕಳೆದೆ ಗುಂಡಿ ತೋಡಿ ಮುಚ್ಚುವ ಗಳಿಗೆ ಬಂದಾಗ ಗುಂಡಿಗೆ ಬಿರಿಯುವಷ್ಟು ಅಳುವವರಿಲ್ಲ. ಬೇಲಿ ಹಾಕಿದ ಜಾಗ, ಮುರಿದ ಮಂಚದ ಕಾಲು, ಅರಮನೆಯ ತೊಲೆಗಂಬ, ಉದುರಿದ ಉಂಗುರಗಳು, ರೇಷ್ಮೆ ವಸ್ತ್ರಗಳು ಇಡುವಷ್ಟು ಜಾಗವಿಲ್ಲ.
ಕಫನ್ನಿಗೆ ಕಿಸೆಯೇ ಇಲ್ಲ..! ಅಲ್ಲಿ ಮತ್ತೆ ಯಾರೋ ಗೊಣಗುತ್ತಿದ್ದಾರೆ “ಬೇಗ ಇಳಿಸಿ, ಮುಚ್ಚಿಬಿಡಿ, ಉಣ್ಣಲು ಸಮಯವಾಯಿತು”
ಸಾವನ್ ಕೆ ಸಿಂಧನೂರು 9902858592
ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಟೀಕಿಸಿದ್ದಾರೆ. ಹಣಕಾಸು ಸಚಿವರಿಗೆ ಅರ್ಥಶಾಸ್ತ್ರದಲ್ಲಿ ಜ್ಞಾನವಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದರು. ಬೆಳವಣಿಗೆ ಕುಂಠಿತವಾಗಿದ್ದರೂ ದೇಶದ ಆರ್ಥಿಕತೆಯು ಕುಸಿತದಲ್ಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ನಿನ್ನೆ ಹೇಳಿದ್ದಾರೆ.
ಇಂದಿನ ದೇಶದ ನಿಜವಾದ ಬೆಳವಣಿಗೆಯ ದರ ಏನೆಂದು ಹಣಕಾಸು ಸಚಿವರಿಗೆ ತಿಳಿದಿದೆಯೇ? ಇದು ಶೇಕಡಾ 4.8 ಕ್ಕೆ ಇಳಿದಿದೆ ಎಂದು ಸಚಿವರು ಹೇಳುತ್ತಾರೆ. ಆದರೆ ನಾನು 1.5% ಎಂದು ಹೇಳುತ್ತೇನೆ. ಸಚಿವರಿಗೆ ತಿಳಿದಿಲ್ಲದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಮೈಕ್ ಅಧಿಕಾರಿಗಳು ಕೈಯಲ್ಲಿರುವುದನ್ನು ನೋಡಬಹುದು ಎಂದು ಸ್ವಾಮಿ ಹೇಳಿದರು.
ದೇಶವು ಬೇಡಿಕೆಯ ಕೊರತೆಯನ್ನು ಎದುರಿಸುತ್ತಿದೆ, ಪೂರೈಕೆ ಕೊರತೆಯಲ್ಲ. ಆದರೆ ಹಣಕಾಸು ಸಚಿವರು ಮಾಡುತ್ತಿರುವುದು ಕಾರ್ಪೊರೇಟ್ಗಳಿಗೆ ತೆರಿಗೆ ವಿಧಿಸುವುದು ಮತ್ತು ಕಾರ್ಪೊರೇಟ್ಗಳ ಲಭ್ಯತೆಯನ್ನು ಹೆಚ್ಚಿಸುವುದು. ಕಾರಣ ಹಣಕಾಸು ಸಚಿವರಿಗೆ ಅರ್ಥಶಾಸ್ತ್ರ ತಿಳಿದಿಲ್ಲ. ಪ್ರಧಾನಮಂತ್ರಿಯ ಸಲಹೆಗಾರರು ಕೂಡ ಸತ್ಯ ಹೇಳಲು ಹೆದರುತ್ತಾರೆ. ನರೇಂದ್ರ ಮೋದಿಯವರು ತಮ್ಮನ್ನು ವಿರೋಧಿಸುವವರನ್ನು ಬಯಸುವುದಿಲ್ಲ ಎಂದು ಸ್ವಾಮಿ ಆರೋಪಿಸಿದರು.
ಒಮಾನ್(ವಿಶ್ವಕನ್ನಡಿಗ ನ್ಯೂಸ್): ಒಮಾನ್ ನಿಝ್ವ ಝೋನ್ ವತಿಯಿಂದ ನವೆಂಬರ್ 28 ಶುಕ್ರವಾರ ಜುಮಾ ನಮಾಜಿನ ನಂತರ ಫರ್ಕ್ ಮಜಿಲಿಸ್ ನಲ್ಲಿ ಹಬೀಬ್ ನಮ್ಮ ಜೊತೆಗಿರಲಿ ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಫರೆನ್ಸ್, ಇಹ್ಸಾನ್ ಫೂಟ್ ಪ್ರಿಂಟ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಬಹಳ ಯಶಸ್ವಿಯಾಗಿ ನಡೆಯಿತು.
ಕೆಸಿಎಫ್ ನಿಜ್ವಾ ಝೋನ್ ಅಧ್ಯಕ್ಷರಾದ ಕಲಂದರ್ ಬಾಷಾ ತೀರ್ಥಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ಸಯ್ಯದ್ ಮೊಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ ಯವರ ದುವಾ ದೊಂದಿಗೆ ಚಾಲನೆ ಗೊಂಡ ಕಾರ್ಯಕ್ರಮ ಸಂಘಟನಾಧ್ಯಕ್ಷರು ಕೆಸಿಎಫ್ ನಿಜ್ವಾ ಝೋನ್ ಕಬೀರ್ ಮಿಸ್ಬಾಹಿ ಯಲ್ಲರನ್ನು ಸ್ವಾಗತಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಇಬ್ರಾಹಿಂ ಸಖಾಫಿ ದಾವಣಗೆರೆ ಇವರು ನೆರವೇರಿಸಿದರು.
ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಝ್ ಎಚ್. ಐ. ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಇವರು ಹುಬ್ಬುರಸೂಲ್ (ಸ.ಅ) ಮತ್ತು ಇಹ್ಸಾನ್ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಇಸ್ಲಾಮಿಕ್ ದ ಅವಾ ಕ್ರಾಂತಿಯನ್ನು ನಡೆಸಿದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆ ವಿವರಿಸಿದರು ಹಾಗೂ ಇದೇ ಸಂದರ್ಭದಲ್ಲಿ ಸಯ್ಯದ್ ಮೊಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ, ಸುಫ್ಯಾನ್ ಸಖಾಫಿ, ಇಬ್ರಾಹಿಂ ಸಖಾಫಿ ದಾವಣಗೆರೆ, ಅಬ್ದುರ್ರಹ್ಮಾನ್ ಸಖಾಫಿ ಅವರನ್ನು ಝೋನ್ ವತಿಯಿಂದ ಸನ್ಮಾನಿಸಲಾಯಿತು.
ಉತ್ತರ ಕರ್ನಾಟಕ ದಲ್ಲಿ ಪ್ರವಾಹ ದಿಂದ ಸಿಲುಕಿ ತಮ್ಮ ಆಸ್ತಿ ಯನ್ನು ಕಳೆದು ಕೊಂಡ 2 ಕುಟುಂಬಸ್ತರ ಮದುಮಕ್ಕಳ ಮದುವೆಯ ಬಟ್ಟೆಯ ಖರ್ಚು ಹಾಗೂ ಮನೆ ಸಾಮಗ್ರಿ ಗಳನ್ನು ಸುಮಾರು 90.000 ಸಾವಿರ ರೂಪಾಯಿ ನಿಜ್ವಾ ಝೋನ್ ನೀಡುವುದಾಗಿ ವಾಗ್ದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕೆಸಿಎಫ್ ಒಮಾನ್ ಅಧ್ಯಕ್ಷರು ಜನಾಬ್ ಅಯ್ಯುಬ್ ಕೋಡಿ, ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷರು ಸಯ್ಯಿದ್ ಆಬಿದ್ ತಂಗಳ್, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಪಲ್ಲತಡ್ಕ, ಶಿಕ್ಷಣ ಕಾರ್ಯದರ್ಶಿ ಖಾಸಿಂ ಪೊಯ್ಯತಬೈಲ್, ಇಹ್ಸಾನ್ ಅಧ್ಯಕ್ಷರು ಇಬ್ರಾಹಿಂ ಹಾಜಿ ಆತ್ರಾಡಿ, ಇಹ್ಸಾನ್ ಕಾರ್ಯದರ್ಶಿ ಇರ್ಫಾನ್ ಪುತ್ತೂರ್, ಇಹ್ಸಾನ್ ಕರ್ನಾಟಕ ಕೆಸಿಎಫ್ ಒಮಾನ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಂದರ್ ಬಾವ ಮುಸ್ಲಿಯಾರ್ ಪರಪ್ಪು ,ಕಾರ್ಯಕಾರಿ ಸಮೀತಿಯ ಸದಸ್ಯರಾದ ಹನೀಫ್ ಸಅದಿ,ಝುಬೈರ್ ಸಅದಿ, ಅಬ್ಬಾಸ್ ಮರಕ್ಕಡ, ಹಾರಿಸ್ ಕೊಳಕೇರಿ, ಖಾಸಿಂ ಹಾಜಿ ಅಳಕೆಮಜಲ್, ಮಸ್ಕತ್ ಝೋನ್ ನೇತಾರರಾದಂತಹ ಮೊಹಮ್ಮದ್ ಸಾಗರ್, ಅಬ್ದುಲ್ಲತೀಫ್ ತೋಡಾರ್ ಬಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ನಿಜ್ವಾ ಝೋನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಫರ್ಕ್ ಸೆಕ್ಟರ್ ಹಾಗೂ ಅಲ್ ಹುದಾ ನಿಜ್ವಾ, ಐಸಿಎಫ್ ನಿಜ್ವಾ ಸೆಂಟರ್, ಆರ್ ಎಸ್ ಸಿ ನಿಜ್ವಾ ಕಾರ್ಯಕರ್ತರು ಉಪಸ್ಥಿತರಿದ್ದರು. ಕಲಂದರ್ ಬಾವ ವಂದಿಸಿ ಕಾರ್ಯಕ್ರಮ ವನ್ನು ನಿರೂಪಿಸಿದರು.
ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ಅನ್ಯ ಭಾಷೆಗಳ ಪ್ರಭಾವ ಹೊಂದಿರುವ ನಾಡಿನ ಗಡಿ ಪ್ರದೇಶದಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು.
ಪಟ್ಟಣದಲ್ಲಿ ಬುಧವಾರ ರಾತ್ರಿ ಕರ್ನಾಟಕ ವಿಜಯ ಸೇನೆ ತಾಲ್ಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ ಮಾತು ಯಾವುದೇ ಇದ್ದರೂ, ರಾಜ್ಯ ಭಾಷೆಯಾದ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಕನ್ನಡ ಜನಮನದ ಕನ್ನಡಿಯಾಗಬೇಕು ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್, ಮಾಜಿ ನಿರ್ದೇಶಕ ಎನ್.ಜಿ.ಬ್ಯಾಟಪ್ಪ ನಾಡು ನುಡಿಯ ಬಗ್ಗೆ ಮಾತನಾಡಿದರು. ಇದಕ್ಕೂ ಮೊದಲು ತಹಶೀಲ್ದಾರ್ ಸುಜಾತ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಣ್ಣ, ತೆಂಗಿನ ನಾರು ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ವೆಂಕಟೇಶ್, ಕರ್ನಾಟಕ ವಿಜಯ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ಸಂತೋಷ್, ಪುರಸಭಾ ಸದಸ್ಯರಾದ ಭಾಸ್ಕರ್, ಅಜಯ್ಸಿಂಗ್, ನಾಗರಾಜ್, ಹರೀಶ್, ಮುಖಂಡರಾದ ಸುಬ್ರಮಣಿ, ವಿಶ್ವನಾಥ್ ಇದ್ದರು.
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕ್ರೀಡಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಹಲವಾರು ಉದ್ದೇಶಗಳನ್ನಿಟ್ಟು ರಾಜ್ಯಮಟ್ಟದಲ್ಲಿ ಸ್ಥಾಪನೆಗೊಂಡ ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸುಳ್ಯ ಜಿಲ್ಲಾ ಘಟಕವನ್ನು ನ.29 ರಂದು ಅಸ್ತಿತ್ವಕ್ಕೆ ತರಲಾಯಿತು.
ನಗರದ ಮೆಕ್ಸಿಕೊ ಸಭಾಂಗಣದಲ್ಲಿ ಯುನೈಟೆಡ್ ಎಂಪವರ್ಮೆಂಟ್ ಎಸೋಸಿಯೇಶನ್ ಸುಳ್ಯ ಜಿಲ್ಲಾ ಘಟಕದ ಅದ್ಯಕ್ಷರಾಗಿ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಯಾದ ಎಂ ಫ್ರೆಂಡ್ಸ್ ಸದಸ್ಯರು,ಪ್ರಮುಖ ಸಂಘಟಕರು, ನ್ಯೂ ಫ್ಲಾಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಬೆಳ್ಳಾರೆ ಮತ್ತು ಜೈ ಭಾರತ್ ಸ್ಪೋರ್ಟ್ಸ್ ಕ್ಲಬ್ ಬೆಳ್ಳಾರೆ ಇದರ ಸಕ್ರೀಯ ಸದಸ್ಯರೂ, ಬರಹಗಾರರೂ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯರೂ ಆಗಿರುವ ಅನ್ಸಾರ್ ಬೆಳ್ಳಾರೆ ಯವರನ್ನು ಸುಳ್ಯ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಗೊಳ್ತಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಧ್ಯೇಯ ಉದ್ದೇಶದ ಸಂಪೂರ್ಣ ಮಾಹಿತಿಯನ್ನು ನೀಡಿದರು. ರಾಜ್ಯ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಪ್ರಸ್ತಾವಿಕ ಮಾತನಾಡಿದರು.
ಸುಳ್ಯ ಸಮಿತಿ ರಚನೆ ಉಸ್ತುವಾರಿ,ಸಿರಾಜ್,ಇಕ್ಬಾಲ್ ಹಸನ್,ಪಾರೂಕ್ ಪುತ್ತೂರು, ಶರೀಫ್ ಪುತ್ತೂರು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ಘಟಕಕ್ಕೆ ಅಧ್ಯಕ್ಷರಾಗಿ ಅನ್ಸಾರ್ ಬೆಳ್ಳಾರೆ, ಉಪಾಧ್ಯಕ್ಷರಾಗಿ ಆರ್ ಬಿ ಬಶೀರ್,ರಶೀದ್ ಜಟ್ಟಿಪಳ್ಳ ಕೋಶಾಧಿಕಾರಿಯಾಗಿ ಹಂಝ ಕಾತೂನ್ ,ಪ್ರ, ಕಾರ್ಯದರ್ಶಿ ಯಾಗಿ ಕಲಂದರ್ ಎಲಿಮಲೆ, ಜೊತೆ ಕಾರ್ಯದರ್ಶಿ ಶಫೀಕ್ ಕೊಂಯಿಗಾಜೆ, ಬಶೀರ್ ಬೆಳ್ಳಾರೆಯವರನ್ನು ನೇಮಿಸಲಾಯಿತು.
ಕ್ರೀಡಾ ಕನ್ವವಿನರಾಗಿ ಝಾಕೀರ್ ಡಿ ಎಂ,ಕ್ರೀಡಾ ಕಾರ್ಯದರ್ಶಿ ಉಸ್ಮಾನ್ ಜಯನಗರ,ಬಾತೀಶ ಗಾಂಧಿನಗರ,ಕ್ರಿಕೆಟ್ ಸಂಯೋಜಕರಾಗಿ ಅನ್ಸಾಫ್ ಬೆಳ್ಳಾರೆ,ವಾಲಿಬಾಲ್ ತಾಜುದ್ದೀನ್ ಅಜ್ಜಾವರ, ಪುಟ್ಬಾಲ್ ಮುನಾಫರ್,ಫರೀದ್ ಶಿಲ್ಪಾ, ಕಬ್ಬಡಿ ಸಿರಾಜುದ್ದೀನ್ ಪೈಚಾರ್,ಸಂಶುದ್ದೀನ್ ಕೆ.ಎಂ, ಶಟ್ಲ್ ಬ್ಯಾಡ್ಮಿಂಟನ್ ಅಬ್ದುಲ್ ಖಾದರ್ ಜನಪ್ರಿಯ ಇವರನ್ನು ನೇಮಿಸಿದರೆ, ಇತರ ಕ್ರೀಡೆಗಳಿಗೆ ರಫೀಕ್ ಬಿಎಂಎ, ಯಹ್ಯಾ ಬೆಳ್ಳಾರೆ,ನಾಸೀರ್ ಬಾರ್ಪಣೆ ರವರನ್ನುಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ತಾಜುದ್ದೀನ್ ಸ್ವಾಗತಿಸಿ ಶರೀಫ್ ಕಂಠಿ ವಂದಿಸಿದರು, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಸೀಬ್ ಮತ್ತು ಬೌಷರ್ ಝೋನ್ ಗಳ ಜಂಟಿ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಅರ್ರಿಬಾತ್-19 ಇಹ್ಸಾನ್ ನ ಹೆಜ್ಜೆ ಗುರುತುಗಳು ಎಂಬ ವಿಶೇಷ ಕಾರ್ಯಕ್ರಮವು ಇತ್ತೀಚೆಗೆ ಸೀಬ್ ವೇವ್ಸ್ ರೆಸ್ಟೋರೆಂಟ್ ಅಲ್ ಹೇಲ್ ನಲ್ಲಿ ನಡೆಯಿತು.
ತಾಜುಲ್ ಉಲಮಾ (ಖ.ಸಿ) ರವರ ಮೌಲೂದ್ ಪಾರಾಯಣ ಕಾರ್ಯಕ್ರಮಕ್ಕೆ ಝುಬೈರ್ ಸಅದಿ ಪಾಟ್ರಕೋಡಿ ನೇತೃತ್ವ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕೆ.ಸಿ.ಎಫ್ ಐ.ಎನ್.ಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಹನೀಫ್ ಸಅದಿ ಕುಡ್ತಮುಗೇರು ತಾಜುಲ್ ಉಲಮಾ (ಖ.ಸಿ) ಅನುಸ್ಮರಣಾ ಪ್ರಭಾಷಣ ನಡೆಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಹಾಫಿಳ್ ಸುಫ್ಯಾನ್ ಸಖಾಫಿ ಇಹ್ಸಾನ್ ನ ಹೆಜ್ಜೆ ಗುರುತುಗಳು ಮತ್ತು ಮಾದರೀ ಕಾರ್ಯಕರ್ತ ಎಂಬ ವಿಷಯದಲ್ಲಿ ಮಾತನಾಡಿದ ಅವರು ಕಾರ್ಯಕರ್ತನಲ್ಲಿರಬೇಕಾದ ಗುಣ ನಡತೆಗಳ ಬಗ್ಗೆ ವಿವರಿಸಿದರು. ಕೆ.ಸಿ.ಎಫ್ ಮತ್ತು ಎಸ್ಸೆಸ್ಸೆಫ್ ಜಂಟಿಯಾಗಿ ಇಹ್ಸಾನ್ಎಂಬ ಹೆಸರಿನಲ್ಲಿ ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ನಡೆಸುತ್ತಿರುವ ದಅವಾ ಚಟುವಟಿಕೆಗಳು ಮತ್ತು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಇಕ್ಬಾಲ್ ಮದನಿ ಚೆನ್ನಾರ್ ಬುರ್ದಾ ಆಲಾಪನೆ ನಡೆಸಿದರು. ಎಸ್.ವೈ.ಎಸ್ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು.
ಕೆ.ಸಿ.ಎಫ್ ಬೌಷರ್ ಝೋನ್ ಅಧ್ಯಕ್ಷರಾದ ಹನೀಫ್ ಮನ್ನಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಕೆ.ಸಿ.ಎಫ್ ಐ.ಎನ್.ಸಿ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ, ಪ್ರ.ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಸಂಘಟನಾ ವಿಭಾಗದ ಸಯ್ಯಿದ್ ಆಬಿದ್ ತಂಙಳ್, ಇಬ್ರಾಹಿಂ ಹಾಜಿ ಅತ್ರಾಡಿ, ಸೀಬ್ ಝೋನ್ ಅಧ್ಯಕ್ಷರಾದ ಜಸೀಮ್ ಅಹ್ಮದ್ ಕೊಪ್ಪ, ಮಾಜಿ ಅಧ್ಯಕ್ಷರಾದ ಝಕೀರ್ ಹುಸೈನ್ ಅಗರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆ.ಸಿ.ಎಫ್ ಸೀಬ್ ಝೋನ್ ಪ್ರ.ಕಾರ್ಯದರ್ಶಿ ಹನೀಫ್ ಕೆ.ಸಿ ರೋಡ್ ಸ್ವಾಗತಿಸಿ, ಇಹ್ಸಾನ್ ಕನ್ವೀನರ್ ಖಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.
ಜಪಾನ್(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕೊರಿಯಾ ಜಪಾನ್ನ ಪ್ರಧಾನಿ ಶಿಂಜೊ ಅಬೆ ಅವರನ್ನು “ನಿಷ್ಕಪಟ” ಮತ್ತು “ರಾಜಕೀಯ ಕುಬ್ಜ” ಎಂದು ಬ್ರಾಂಡ್ ಮಾಡಿದೆ, ತನ್ನ ಇತ್ತೀಚಿನ ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ತಪ್ಪಾಗಿ ಬರೆದಿದೆ ಎಂದು ಆರೋಪಿಸಿದೆ.
ಗುರುವಾರ ಎರಡು ಸ್ಪೋಟಕಗಳನ್ನು ಹಾರಿಸಿದ ನಂತರ “ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪುನರಾವರ್ತಿತ ಉಡಾವಣೆ” ಗಾಗಿ ಶ್ರೀ ಅಬೆ ಉತ್ತರವನ್ನು ಖಂಡಿಸಿದರು.
ಆದರೆ ಉತ್ತರವು “ಸೂಪರ್-ದೊಡ್ಡ ಮಲ್ಟಿಪಲ್-ರಾಕೆಟ್ ಲಾಂಚರ್” ಅನ್ನು ಪರೀಕ್ಷಿಸುತ್ತಿದೆ ಎಂದು ಒತ್ತಾಯಿಸಿತು.
ಹೈದರಾಬಾದ್ (ತೆಲಂಗಾಣ)(ವಿಶ್ವಕನ್ನಡಿಗ ನ್ಯೂಸ್): ಸಹಾಯಕ್ಕಾಗಿ ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಭಾರತದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ – 100 ಅನ್ನು ಡಯಲ್ ಮಾಡುತ್ತಾರೆ, ಆದರೆ ಹಲವು ಬಾರಿ ಉತ್ತರ ಸಿಗುತ್ತಿಲ್ಲ ಎಂದು ಮಹಿಳಾ ಕಾರ್ಯಕರ್ತೆ ಸಂಧ್ಯಾ ರಾಣಿ ಶನಿವಾರ ಹೇಳಿದ್ದಾರೆ.
ವೈದ್ಯೆ ಪ್ರೀಯಾಂಕ ರೆಡ್ಡಿಯವರ ಸುಟ್ಟ ಶವವು ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಶಡ್ನಗರ ಹೊರವಲಯದಲ್ಲಿ ಗುರುವಾರ ಪತ್ತೆಯಾದ, ವಿಷಯದಲ್ಲಿ ಹಲವರು ಪ್ರತಿಕ್ರಯಿಸಿದರು.
“ಅವಳು ಪೊಲೀಸರನ್ನು ಕರೆದಿದ್ದರೆ, ಅವಳನ್ನು ಉಳಿಸಬಹುದಿತ್ತು.- ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ”
ಪಶುವೈದ್ಯಕೀಯ ವೈದ್ಯರು ಪೊಲೀಸರನ್ನು ಕರೆಸಬೇಕಾಗಿತ್ತು ಎಂಬ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಣಿ ಎಎನ್ಐಗೆ ಹೀಗೆ ಹೇಳಿದರು: ತುರ್ತು ಸಹಾಯಕ್ಕಾಗಿ 100 ಅನ್ನು ಡಯಲ್ ಮಾಡಿದ ಆದರೆ ಪ್ರತಿಕ್ರಿಯೆಯನ್ನು ಪಡೆಯದ ಅನೇಕ ಮಹಿಳೆಯರು ಇದ್ದಾರೆ. ಏಕೆ ಕ್ರಮ ಕೈಗೊಂಡಿಲ್ಲ ತಪ್ಪಿತಸ್ಥರ ವಿರುದ್ಧ? ”
“ಈ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ನಮಗೆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ಮಹಿಳಾ ಪಶುವೈದ್ಯಕೀಯ ವೈದ್ಯರ ಕ್ರೂರ ಹತ್ಯೆಯ ನಂತರ, ಸಾಕಷ್ಟು ಆಪಾದನೆ ನಡೆಯುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವ ಅಲಿ ಶುಕ್ರವಾರ ಎಎನ್ಐಗೆ ಹೀಗೆ ಹೇಳಿದ್ದಾರೆ: “ಈ ಘಟನೆಯಿಂದ ನಾವು ದುಃಖಿತರಾಗಿದ್ದೇವೆ. ತೆಲಂಗಾಣ ಪೊಲೀಸರು ಎಚ್ಚರಿಕೆ ಮತ್ತು ಅಪರಾಧವನ್ನು ನಿಯಂತ್ರಿಸುವಲ್ಲಿ ಸಮರ್ಥರಾಗಿದ್ದಾರೆ. ಶಿಕ್ಷಣ ಪಡೆದಿದ್ದರೂ ಸಹ, ಅವಳು ತನ್ನ ಸಹೋದರಿಯನ್ನು ಕರೆದು ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಡಯಲ್ ಮಾಡದಿರುವುದು ದುರದೃಷ್ಟಕರ – 100. ಅವಳು ಪೊಲೀಸರನ್ನು ಕರೆದಿದ್ದರೆ, ಅವಳನ್ನು ಉಳಿಸಬಹುದಿತ್ತು.
ಮಹಿಳೆಯರ ಮೇಲಿನ ಅಪರಾಧ ವರದಿಯಾದಾಗಲೆಲ್ಲಾ ಜನರು ಬಲಿಪಶುವನ್ನು ಒಂದಲ್ಲ ಒಂದು ರೀತಿಯಲ್ಲಿ ದೂಷಿಸಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದರು. “ಮಹಿಳೆಯರು ರಾತ್ರಿಯಲ್ಲಿ ಏಕೆ ಹೊರಗೆ ಹೋಗುತ್ತಿದ್ದಾರೆ? ಅವರು ಬೈಕುಗಳನ್ನು ಏಕೆ ಓಡಿಸುತ್ತಿದ್ದಾರೆ? ಎಲ್ಲಾ ರೀತಿಯ ಪ್ರಶ್ನೆಗಳು ಬರುತ್ತವೆ” ಎಂದು ಅವರು ಹೇಳಿದರು.
ಜೈಪುರ(ವಿಶ್ವಕನ್ನಡಿಗ ನ್ಯೂಸ್): ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ತಾಯಿ ಕೆಲಸದಲ್ಲಿದ್ದಾಗ ತಂದೆ ತನ್ನ ಮೂವರು ಮಕ್ಕಳನ್ನು ನೇಣಿಗೇರಿಸಿ ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಮುಕುತ್ ಬಿಹಾರಿ ಅವರ ಪ್ರಕಾರ: ಆಲ್ಕೊಹಾಲ್ಯುಕ್ತನಾಗಿದ್ದ ನಾಥುರಾಮ್ ಬಂಜಾರ ತನ್ನ ಮೂವರು ಮಕ್ಕಳಾದ ಸೀಮಾ (7), ಮನೀಷಾ (5) ಮತ್ತು ವಿಶಾಲ್ (3) ರನ್ನು ಶುಕ್ರವಾರ ತನ್ನ ಸ್ವಂತ ಮನೆಯಲ್ಲಿ ಗಲ್ಲಿಗೇರಿಸಿ ಪರಾರಿಯಾಗಿದ್ದಾನೆ.
ತಾಯಿ ಚುಕಾ ದೇವಿ ತನ್ನ ಮೂರು ಮಕ್ಕಳನ್ನು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದನ್ನು ಕಂಡು ಕೆಲಸ ಮುಗಿಸಿ ಸಂಜೆ ಮನೆಗೆ ತಲುಪಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟಹೀನ ತಾಯಿಯ ಕೂಗು ನೆರೆಹೊರೆಯವರನ್ನು ಮನೆಗೆ ಕರೆತಂದರು, ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಹುಡುಕಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ. ನಾಥುರಾಮ್ ಅನ್ನು ಹಿಡಿದಿಟ್ಟುಕೊಂಡರೆ, ಈ ಘೋರ ಅಪರಾಧದ ಕಾರಣವನ್ನು ನಾವು ತಿಳಿದುಕೊಳ್ಳುತ್ತೇವೆ” ಎಂದು ಎಸ್ಎಚ್ಒ ಹೇಳಿದರು.
ದುಬೈ(ವಿಶ್ವಕನ್ನಡಿಗ ನ್ಯೂಸ್): ಸೌದಿ ಅರೇಬಿಯಾದ ಭೇಟಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ದುಬೈ ಎಕ್ಸ್ಪೋ 2020 ಸೈಟ್ನ ಪ್ರವಾಸಕ್ಕೆ ದುಬೈ ಕ್ರೌನ್ ಪ್ರಿನ್ಸ್ ಮತ್ತು ದುಬೈ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಗುರುವಾರ ಕರೆದೊಯ್ದಿದ್ದಾರೆ.
ಎಕ್ಸ್ಪೋ 2020 ಸೈಟ್ಗೆ ಪ್ರಿನ್ಸ್ ಮೊಹಮ್ಮದ್ ಅವರ ಭೇಟಿ ಈ ಪ್ರಮುಖ ಜಾಗತಿಕ ಕಾರ್ಯಕ್ರಮವನ್ನು ಬೆಂಬಲಿಸುವಲ್ಲಿ ಸೌದಿ ಅರೇಬಿಯಾದ ತೀವ್ರ ಆಸಕ್ತಿಯನ್ನು ತೋರಿಸುತ್ತದೆ ಎಂದು ಶೇಖ್ ಹಮ್ದಾನ್ ಹೇಳಿದ್ದಾರೆ.
ತಮ್ಮ ಪ್ರವಾಸದ ಮೊದಲ ಹಂತದಲ್ಲಿ, ಶೇಖ್ ಹಮ್ದಾನ್ ಮತ್ತು ಪ್ರಿನ್ಸ್ ಮೊಹಮ್ಮದ್ ಅವರು ಎಕ್ಸ್ಪೋದ ಮೂಲಮಾದರಿಯನ್ನು ವೀಕ್ಷಿಸಿದರು.
ಶೇಖ್ ಹಮ್ದಾನ್ ಮತ್ತು ಪ್ರಿನ್ಸ್ ಮೊಹಮ್ಮದ್ ಅವರು ಎಕ್ಸ್ಪೋದ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾದ ಅಲ್ ವಾಸ್ಲ್ ಪ್ಲಾಜಾದಲ್ಲಿ ನಿಲ್ಲಿಸಿ, ನಂತರ ಯುಎಇ ಪೆವಿಲಿಯನ್ಗೆ ಭೇಟಿ ನೀಡಿದರು, ಇದನ್ನು ಹಾರಾಟದಲ್ಲಿ ಫಾಲ್ಕನ್ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ಎಕ್ಸ್ಪೋ 2020 ದುಬೈನಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ಶೇಖ್ ಹಮ್ದಾನ್ ಮತ್ತು ರಾಜಕುಮಾರ ಮೊಹಮ್ಮದ್ ಅವರು ಸೌದಿ ಪೆವಿಲಿಯನ್ಗೆ ಭೇಟಿ ನೀಡಿದರು, ಇದು ಜಗತ್ತಿಗೆ ಸಾಮ್ರಾಜ್ಯದ ಸಂದೇಶವನ್ನು ಮತ್ತು ಎಲ್ಲರಿಗೂ ಉತ್ತಮ ಭವಿಷ್ಯಕ್ಕಾಗಿ ಅದರ ಮುಕ್ತತೆಯನ್ನು ಎತ್ತಿ ತೋರಿಸುತ್ತದೆ. ವಿಶ್ವದಾದ್ಯಂತದ 25 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿರುವ ಭವ್ಯವಾದ ಜಾಗತಿಕ ಸಮಾರಂಭದಲ್ಲಿ ಸೌದಿ ಪೆವಿಲಿಯನ್ ನಿರ್ಮಾಣದ ಹಂತಗಳನ್ನು ತೋರಿಸುವ ಕಿರು ವೀಡಿಯೊವನ್ನು ಅವರು ವೀಕ್ಷಿಸಿದರು.
ಭೇಟಿಯ ಕೊನೆಯಲ್ಲಿ, ಶೇಖ್ ಹಮ್ದಾನ್ ಮತ್ತು ರಾಜಕುಮಾರ ಮೊಹಮ್ಮದ್ ಅವರು ಎಕ್ಸ್ಪೋ ಸೈಟ್ನ ಸ್ಮರಣಾರ್ಥ ಚಿತ್ರಗಳನ್ನು ತೆಗೆದರು.
168 ವರ್ಷಗಳ ಇತಿಹಾಸದಲ್ಲಿ ಮಧ್ಯಪ್ರಾಚ್ಯದಲ್ಲಿ ಮೊದಲ ಬಾರಿಗೆ ಎಕ್ಸ್ಪೋ ನಡೆಯುತ್ತಿದೆ.
ಎಕ್ಸ್ಪೋ 2020 ಅಕ್ಟೋಬರ್ 20 ರಿಂದ 2021 ರ ಏಪ್ರಿಲ್ 10 ರವರೆಗೆ 195 ದೇಶಗಳ ಭಾಗವಹಿಸುವಿಕೆಯೊಂದಿಗೆ ನಡೆಯಲಿದೆ.
ಇಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ.
– ಸಂಪಾದಕೀಯ ಮಂಡಳಿ
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.