ವಿಶ್ವ ಕನ್ನಡಿಗ ನ್ಯೂಸ್
(www.vknews.com) : ಕಾಲೇಜಿಗೆ ಹೋಗಲು ಬೆಳಗಿನ ಬಸ್ಸಿಗೆ ತಯಾರಿ ನಡೆಸುವ ವೇಳೆ ಏನೋ ಸಮಯದ ಕೊರತೆಯಿಂದ ಪರ್ಸನ್ನು ಮನೆಯಲ್ಲಿ ಮರೆತುಬಿಟ್ಟೆ. ಪುಸ್ತಕವನ್ನು ಚೀಲದಲ್ಲಿ ತುಂಬಿಸಿ ವೇಗವಾಗಿ ಮಾರ್ಗಕ್ಕೆ ಲಗ್ಗೆ ಇಟ್ಟಾಗ ಪುಣ್ಯಕ್ಕೆ 7ಗಂಟೆಯ ಕುಂಟಾರ್ ಸಿಕ್ಕಿತು. ಕಾಕಿ ಹಾಕಿದ ಕಂಡಕ್ಟರ್ ಟಿಕೆಟ್ ಕೇಳಿದಾಗ “ಪಾಸ್” ಅಂತ ಹೇಳಿ ಚೀಲಕ್ಕೆ ಕೈ ಹಾಕಿದಾಗ ಕಂಡಕ್ಟರ್ ಮುಂದೆ ನಡೆದರು. ಅಂತೂ ಕೊನೆಗೆ ಕಾಲೇಜಿಗೆ ತಲುಪಿದನು.
ಮಧ್ಯಾಹ್ನದ ಉಪಹಾರ 30ರೂ ಕೊಟ್ಟು ಯಾವತ್ತು ಗೂಗಲ್ ಪೇ ಮಾಡಿ ತಿನ್ನುವುದರಿಂದ ಪರ್ಸ್ ಮನೆಯಲ್ಲಿ ಮರೆತು ಬಿಟ್ಟದ್ದನ್ನು ನೆನಪಿಸಲಿಲ್ಲ. ಹೀಗೆ ಲ್ಯಾಬ್ ತರಗತಿ ಮುಗಿಸಿ ಸಂಜೆ ಮನೆಗೆ ಹಿಂತಿರುಗುವಾಗ ಐದುವರೆಯಾಗಿತ್ತು. ಓಡೋಡಿ ಬಂದು ಬಸ್ ಹತ್ತಿ ಕುಳಿತು ಕೊಂಡಾಗ ಮತ್ತೊಮ್ಮೆ ಖಾಕಿ ಮಾಮ ಬಂದು ಟಿಕೆಟ್ ಕೇಳಿದ “ಪಾಸ್” ಅಂತ ಹೇಳಿ ಜೇಬಿಗೆ ಕೈ ಹಾಕುವಾಗ ಪರ್ಸ್ ಮನೆಯಲ್ಲಿ ಬಿಟ್ಟಂತಹ ಸಂದರ್ಭವನ್ನು ಜ್ಞಾಪಕಕ್ಕೆ ಬಂತು. ಬಸ್ ಹೊರಡಲು ಕೇವಲ ಎರಡು ನಿಮಿಷ ಮಾತ್ರ ಬಾಕಿ. ಕೈಯಲ್ಲಿ ಏನೂ ಇಲ್ಲ. ಎಟಿಎಂಗೆ ಹೋಗಿ ಹಣ ತೆಗೆದುಕೊಂಡು ಬರೋಣ ಅಂದರೆ ಸಮಯವೂ ಇಲ್ಲ. ಊರಿಗಿರುವ ಕೊನೆಯ ಬಸ್ಸು ಆದ್ದರಿಂದ ಮತ್ತೊಂದು ಬಸ್ಸಲ್ಲಿ ಬಂದು ಊರುಸೇರಲು ಅಸಾಧ್ಯ. ಹೀಗೆ ಮನಸ್ಸು ಗಲಿಬಿಲಿಗೊಂಡು ಗಾಬರಿಯಾದಾಗ ಹಣೆಗೆ ಅಡ್ಡನಾಮ ಹಾಕಿದ ಮಧ್ಯವಯಸ್ಸಿನ ಮಹಿಳೆಯೊಬ್ಬಳು “ಪುಟ್ಟ ನೋ ಟೆನ್ಶನ್” ಬೇಗ ಟಿಕೆಟ್ ಮಾಡು ಅಂತ ಹೇಳಿಬಿಟ್ಟರು.
ಅವರ ಮನೋಜ್ಞವಾದ ಸ್ವರದಲ್ಲಿ ಅಮ್ಮನ ವಾತ್ಸಲ್ಯ ಅಡಗಿತ್ತು.ಟಿಕೆಟ್ ಮಾಡಿ ಉಳಿದ ಹಣವನ್ನು ಅವರಿಗೆ ಕೊಟ್ಟು ಗೂಗಲ್ ಪೇ ಮಾಡೋಣ ಅಂತ ಹೇಳಿದಾಗ “ಬೇಡ ಪುಟ್ಟ ಇರ್ಲಿ ಬಿಡು ಅಂತ ಹೇಳಿದ” ಎಷ್ಟು ಒತ್ತಾಯ ಮಾಡಿದರೂ ಹಣವನ್ನು ಸ್ವೀಕರಿಸಲಿಲ್ಲ. ತದನಂತರದಲ್ಲಿ ಅವರ ಬಗ್ಗೆ ವಿಚಾರಿಸಿದಾಗ ಈಶ್ವರಮಂಗಲದ ಒಬ್ಬ ಮಹಿಳೆ ಯಾಗಿದ್ದಳು ಹೆಸರನ್ನು ನಾನಂತೂ ಕೇಳಲಿಲ್ಲ. ಹೀಗೆ ಬಸ್ ಪ್ರಯಾಣ ಮಾಡಲು ಹೊರಟಾಗ ಬಸ್ಸಿನಲ್ಲಿನ ನನ್ನ ದೈನಂದಿನ ಹವ್ಯಾಸವಾದ ಹೆಡ್ ಫೋನನ್ನು ಕಿವಿಗೆ ಹಾಕಿ ವಾಟ್ಸಪ್ ನಲ್ಲಿ ಸ್ಟೇಟಸ್ ನೋಡುವಾಗ ಅದರಲ್ಲಿ ಒಬ್ಬ ವ್ಯಕ್ತಿಯ ಸ್ಟೇಟಸ್ ಪರಿಚಯದ ಯುವಕರೆಲ್ಲರೂ ಹಾಕಿಕೊಂಡಿದ್ದರು. ಅದರಲ್ಲಿನ ಮುಖ್ಯ ವಿಷಯ “ನೀ ತಂಟ್ರೆ ಬಾ ತಾಂಟ್” ಅಂತಹ ಪ್ರಚೋದನಕಾರಿ ಸ್ಟೇಟಸ್ಗೆ ಪ್ರತಿಯಾಗಿ ಇನ್ನೊಂದು ಸಮುದಾಯದ ಯುವಕರು ಲೇವಡಿ ಮಾಡುತ್ತಾ ಮತ್ತೊಂದು ಸ್ಟೇಟಸ್ ಅನ್ನು ಕೂಡ ಹಾಕಿಕೊಂಡಿದ್ದರು.
ಆಗ ನಾನು ತಲೆಗೆ ಅಡ್ಡನಾಮ ಹಾಕಿ ನನ್ನ ಪಕ್ಕದಲ್ಲಿ ಕುಳಿತು ಕೊಂಡಿರುವ ನಿಷ್ಕಲ್ಮಶ ರಹಿತ ಮನಸ್ಸಿನ ಆ ಮಹಿಳೆಯ ಮುಖ ನೋಡಿ ನಾನು ನನ್ನಲ್ಲಿ ಹೇಳಿಕೊಂಡೆ ಯಾವ ಧರ್ಮವು ಇನ್ನೊಬ್ಬರಿಗೆ ಕೆಡುಕನ್ನು ಬಯಸುವುದಿಲ್ಲ. ಕೇವಲ ಭೌತಿಕ ಲಾಭಕ್ಕೆ ಬೇಕಾಗಿ ಎಲುಬಿಲ್ಲದ ನಾಲಿಗೆಯನ್ನು ನಿಯಂತ್ರಿಸಲಾಗದ ಸಮುದಾಯದ ಒಳಿತಿಗೆ ನಮ್ಮ ಜಾಗೃತಿ ಎಂಬ ನೆಪದಲ್ಲಿ ಮುಗ್ಧ ಯುವಕರನ್ನು ಪ್ರಚೋದನಾಕಾರಿ ಮಾತಿ ನಿಂದ ದಾರಿ ತಪ್ಪಿಸುತ್ತಿರುವ ಅನೈಜ ಮಾತುಗಾರರ ಮಾತಿಗೆ ಕಿವಿಗೊಡದಿದ್ದರೆ ನಮ್ಮ ಸುಂದರ ಭಾರತ ಮಣ್ಣಿನಲ್ಲಿ ಕೋಮುವಾದಕ್ಕೆ ಧಾರ್ಮಿಕ ಗಲಭೆಗಳಿಗೆ ಶಾಶ್ವತವಾಗಿ ಇತಿಶ್ರೀಯನ್ನು ಹೇಳಬಹುದು.
ಸಹದ್ ಕರ್ನೂರು
ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಇದರ ವತಿಯಿಂದ 2ನೇ ವರ್ಷದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ
ಅಬುಧಾಬಿ (www.vknews.com) : ಹೆಮ್ಮೆಯ ಯುಎಇ ಕನ್ನಡಿಗರು ತಂಡದವರು ಆನ್ ಲೈನ್ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ – 2021 ನ್ನು ಇದೆ ತಿಂಗಳ ದಿನಾಂಕ 26ರಂದು ಸಂಜೆ 5 ಗಂಟೆಗೆ ಆಯೋಜಿಸಿಕೊಂಡಿದ್ದಾರೆ.
ಕನ್ನಡ ನಾಡಿನಿಂದ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಯುಎಗೆ ಕೆಲಸ ಅರಸಿ ಸಂದರ್ಶನ ವೀಸಾದಲ್ಲಿ ಬಂದ ಕನ್ನಡಿಗರಿಗೂ ಮತ್ತು ಇಲ್ಲೇ ಕೆಲಸದಲ್ಲಿ ಇದ್ದು ಇರುವ ಕೆಲಸ ಬದಲಾವಣೆ ಮಾಡಿ ಬೇರೊಂದು ಒಳ್ಳೆಯ ಕಂಪನಿಯಲ್ಲಿ ಸೇರಿಕೂಳ್ಳಲು ನೋಡುತ್ತಿರುವ ಅನಿವಾಸಿ ಕನ್ನಡಿಗರಿಗಾಗಿ ಇಂಟರ್ವ್ಯೂ ಅಟೆಂಡ್ ಮಾಡುವ ಬಗ್ಗೆ ಮಾಹಿತಿ, ಯಾವ ರೀತಿಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಕೆಲಸ ಹುಡುಕಬೇಕು, ಸಿ ವಿ ಹೇಗೆ ಇರಬೇಕು ಮುಂತಾದುವುಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಲು ನುರಿತ ತಜ್ಞ ಮಾರ್ಗದರ್ಶಕರಿಂದ ಗೈಡೆನ್ಸ್ ಕ್ಲಾಸ್ ಮತ್ತು ಕೆಲಸ ಹುಡುಕುತ್ತಿರುವ ಕನ್ನಡಿಗರನ್ನು ಕೆಲವು ಕಂಪನಿಗಳ ಮುಖ್ಯಸ್ಥರು ಬಂದು ಕೆಲಸಕ್ಕೆ ನೇಮಕಾತಿ ಪ್ರಕ್ರಿಯೆಯ ಉದ್ಯೋಗ ಮೇಳ ಮುಂತಾದ ವಿಷಯಗಳಿಗೆ ಉಚಿತವಾಗಿ ವೇದಿಕೆ ಒದಗಿಸಿದ್ದು ಕೆಲಸ ಹುಡುಕುತ್ತಿರುವ ಕನ್ನಡಿಗರು ಬಂದು ಸದುಪಯೋಗ ಪಡೆದುಕೊಳ್ಳಬೇಕಾಗಿ ತಂಡದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು , ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿಗಳಾದ ಸೆಂಥಿಲ್ ಬೆಂಗಳೂರು, ಹಾಗು ಪ್ರಧಾನ ಸಂಚಾಲಕರಾದ ರಫೀಕಲಿ ಕೊಡಗು ವಿನಂತಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ ಶ್ರೀಯುತ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರು ಮೋಟಿವೇಷನಲ್ ಮಾತುಗಾರರು ಆದ ಶ್ರೀಯುತ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀಮತಿ ರಾಧಾ ಜೀವನ್ ಅವರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮ್ಯ ಕನ್ನಡಿಗರು ತಂಡದ ಜಾಬ್ ವಿಭಾಗದ ಸಂಚಾಲಕರಾದ ಶ್ರೀಯುತ ನವೀನ್ ಅವರು ನೆರವಹಿಸಲಿದ್ದಾರೆ.
ಕಾರ್ಯಕ್ರಮದ ಆಹ್ವಾನಕ್ಕಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರಮುಖ ಸಮಿತಿ ಸದಸ್ಯರುಗಳಾದ ಶ್ರೀಮತಿ ಮಮತಾ ಶಾರ್ಜಾ , ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು , ಶ್ರೀಮತಿ ಹಾದಿಯ ಮಂಡ್ಯ, ಶ್ರೀಮತಿ ಪಲ್ಲವಿ ದಾವಣಗೆರೆ, ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ ,ಶ್ರೀಮತಿ ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಅಬುಧಾಬಿ (www.vknews.com) : ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಮತ್ತು ಕುವೈತ್ ದೇಶಗಳಿಗೆ ತೆರಳುತ್ತಿದ್ದರು, ಆದರೆ ಕಳೆದ ಹಲವು ದಿನಗಳಿಂದ ವಿಶ್ವಾದ್ಯಂತ ಕೋರೋಣ ಆರ್ಭಟ ಹೆಚ್ಚಿದ್ದರಿಂದ ಸೌದಿ ಮತ್ತು ಕುವೈತ್ ದೇಶಗಳು ದುಬೈಯಿಂದ ಸಹ ವಾಯು ಮಾರ್ಗ ಮತ್ತು ಗಡಿಗಳನ್ನು ಮುಚ್ಚಿ ಪ್ರಯಾಣ ನಿರ್ಬಂಧ ಹೇರಿದ್ದರಿಂದ ಸಾವಿರಾರು ಅನಿವಾಸಿಗಳು ದುಬೈಯಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಪಟ್ಟರು .
ಇವರ ಸಂಕಷ್ಟವನ್ನು ಮನಗಂಡ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಸಂಕಷ್ಟಕ್ಕೆ ಒಳಪಟ್ಟ ಅನಿವಾಸಿ ಸೌದಿ ಕುವೈತ್ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಹಾಯಕ್ಕೆ ನಿಲ್ಲಬೇಕೆಂದು ಟ್ವಿಟ್ಟರ್ ಅಭಿಯಾನವನ್ನು ಕೆಲವು ದಿನಗಳ ಹಿಂದೆ ನಡೆಸಿದ್ದು ಈ ಟ್ವಿಟ್ಟರ್ ಅಭಿಯಾನವನ್ನು ದುಬೈಯಲ್ಲಿರುವ ರಾಯಭಾರಿ ಕಚೇರಿ ಗಮನಿಸಿದ್ದಲ್ಲದೆ ಇಲ್ಲಿನ ಸ್ಥಳೀಯ ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ರಾಯಭಾರಿ ಕಚೇರಿ ಅಧಿಕೃತರು ವರದಿಯಲ್ಲಿ ಉಲ್ಲೇಖಿಸಿದ್ದರು.
ಸೌದಿ ಅರೇಬಿಯಾ ಮತ್ತು ಕುವೈತ್ ತೆರಳಲು ದುಬೈಗೆ ಬಂದು ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರಿಗೆ ಭಾರತಕ್ಕೆ ಮರಳಲು ಕಾನ್ಸುಲೇಟ್ ವತಿಯಿಂದ ನೀಡುತ್ತಿರುವ ಉಚಿತ ವಿಮಾನ ಟಿಕೆಟ್ ಸೌಲಭ್ಯದ ಕನ್ನಡಿಗರ ಅರ್ಜಿಯನ್ನು ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಸಂಘದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಂಘದ ಸಲಹಾ ಸಮಿತಿ ಸದಸ್ಯರಾದ ರಾಘವೇಂದ್ರ ಅವರು ರಾಯಭಾರಿ ಕಚೇರಿ ಅಧಿಕೃತರಿಗೆ ಹಸ್ತಾಂತರಿಸಿದರು ಮತ್ತು ಶೀಘ್ರದಲ್ಲಿ ಯೋಗ್ಯ ಅರ್ಜಿದಾರರಿಗೆ ಟಿಕೆಟ್ ನೀಡಲಾಗುದು ಎಂದು ರಾಯಭಾರಿ ಕಚೇರಿ ಅಧಿಕೃತರು ತಿಳಿಸಿದರು.
ಮುಲ್ಕಿ (www.vknews.com) : ಸಂಪೂರ್ಣ ಸಾಕ್ಷರತೆಯ ಕೇರಳ ರಾಜ್ಯ ಮಾತ್ರವಲ್ಲದೇ ಇಡೀ ಮಾನವ ಕುಲವೇ ನಾಚಿ ತಲೆತಗ್ಗಿಸುವಂತೆ ಮಾಡಿದ ಕೆಲ ಮಲಯಾಳಿ ಯುವಕ ಯುವತಿಯರ ಮಲ ತಿನ್ನುವ (ಬೇಝಿನ್ ಕೇಕ್) ವೀಡಿಯೋವೊಂದು ವೈರಲ್ ಆಗಿದ್ದು ಇದು ಮಾನವೀಯ ಭಾವನೆಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಅಣಕಿಸುವ ಘನ ಘೋರ ಹೀನ ಕೃತ್ಯವಾಗಿದೆ. ತಿನ್ನುವ ಆಹಾರವನ್ನು ಈ ರೀತಿ ಚಿತ್ರಿಸಿ ತಮಾಷೆ ಮಾಡಿ ವೈರಲ್ ಮಾಡಿದ್ದು ಯುವ ಜನತೆಯ ನೈತಿಕ ಅದಃಪತನ ಎಲ್ಲಿವರೇಗೆ ಬಂದು ಮುಟ್ಟಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಮುಲ್ಕಿ ಶಾಪಿ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ಕುರ್ಆನ್ ಮತ್ತು ಹದೀಸಿನ ಶ್ರೇಷ್ಟತೆಯನ್ನು ಹೇಳುತ್ತಾ ಇಸ್ಲಾಮಿನ ವಾಕ್ತಾರರೆಂದು ಅಭಿಮಾನ ಪಡುವ ನಾವು ಅದ್ಯಾವುದೂ ಇಲ್ಲದ ಇತರ ಧರ್ಮೀಯರಿಗಿಂತ ನೈತಿಕವಾಗಿ ಅದಪತನ ಹೊಂದಿದ್ದೇವೆಯೇ ಎಂದು ಆತ್ಮಾವಲೋಕನ ನಡೆಸಲು ಇದು ಸಕಾಲವಾಗಿದೆ ಎಂದ ಅವರು ನಾವು ಇತರರಿಗಿಂತ ಉತ್ತಮರಾಗಿದ್ದೇವೆಂದು ಆತ್ಮರತಿ ನಡೆಸುವ ಬದಲು ನಮ್ಮ ನಡವಳಿಕೆಯನ್ನು ಸರಿಪಡಿಸಲು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸ ಬೇಕಾದ ತುರ್ತು ಸಂಧರ್ಭದಲ್ಲಿ ನಾವಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಇತರ ಧರ್ಮೀಯರ ಮುಂದೆ ಮಾತ್ರವಲ್ಲ ಮೃಗಗಳ ಎದುರಲ್ಲಿ ಕೂಡಾ ನಾಚಿ ತಲೆ ತಗ್ಗಿಸ ಬೇಕಾದ ಕೃತ್ಯಗಳನ್ನು ಇಸ್ಲಾಮಿನ ಸುಂದರವಾದ ಹೆಸರನ್ನಿಟ್ಟು ಮಾಡುತ್ತಿರುವುದು ನಾವು ಕಷ್ಟ ಪಟ್ಟು ನಡೆಸುತ್ತಿರುವ ಧಾರ್ಮಿಕ ಪ್ರಚಾರಗಳನ್ನೇ ಅಣಕಿಸುವ ರೀತಿಯಲ್ಲಿದೆ ಎಂದು ಅವರು ಕಿಡಿಕಾರಿದರು.
ಮಾನವ ಜೀವನದಲ್ಲಿ ತಪ್ಪುಗಳು ಉಂಟಾಗುವುದು ಸಹಜ. ಆದರೆ ಆ ಪಾಪ ಕೃತ್ಯಗಳಿಗೂ ಒಂದು ಪರಿಧಿ ,ಕಾರಣ ಇರುತ್ತದೆ. ಬದುಕಿನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲಂಬಿಸಿ ಕೆಲವು ತಪ್ಪುಗಳು ಉಂಟಾಗುತ್ತದೆ. ಆದರೆ ಆ ಕೂಡಲೇ ಅದಕ್ಕೆ ಪಾಶ್ಚಾತಾಪ ಪಟ್ಟು ಒಳಿತಿಗೆ ಮರಳಿದರೆ ಒಂದು ವೇಳೆ ದೇವನು ಅದನ್ನು ಮನ್ನಿಸಿಯಾನು.
ಅದೇ ವೇಳೆ ತಮಗೆ ಯಾವುದೇ ರೀತಿಯಲ್ಲೂ ಒಂದು ಚೂರು ಕೂಡಾ ಪ್ರಯೋಜನ ಇಲ್ಲದ ಮತ್ತು ಅನಾಗರಿಕ ರೀತಿಯಲ್ಲಿ ವರ್ತಿಸಿ ಮಾನವೀಯ ನಾಗರಿಕತೆಯ ಸಂಕಲ್ಪವನ್ನೇ ಗೇಲಿ ಮಾಡುವ ರೀತಿಯಲ್ಲಿರುವ ಇಂತಹ ವರ್ತನೆಗಳನ್ನು ಎಸಗುವುದು ಅಲ್ಲಾಹನ ಕೋಪ ಎರಗುವ ಕೃತ್ಯವಾಗಿದೆ ಎಂದು ಎಚ್ಚರಿಕೆ ನೀಡಿದ ಖತೀಬರು ಮಲತಿಂದು ಖುಷಿಪಡುವ ಮಲಯಾಳಿಗಿಂತ ಬೀದಿ ಬದಿಯಲ್ಲಿ ಮಲ ವಿಸರ್ಜಿಸುವ ತಮಿಳನೇ ಲೇಸು ಎಂದು ವ್ಯಂಗ್ಯವಾಡಿದರು.
ಗುಣ ಇಲ್ಲದವ ಹಣವಂತನಾದರೆ ಏನಾಗಬಹುದು ಎಂಬುದಕ್ಕೆ ಮುಸ್ಲಿಂ ಸಮಾಜದ ಇಂದಿನ ಕೆಲವು ವಿವಾಹ ಸಂಭ್ರಮಗಳೇ ಸಾಕ್ಷಿ ಎಂದು ಹೇಳಿದ ಅವರು, ನಿಮಗೆ ಬಡತನ ಉಂಟಾಗುವುದನ್ನು ನಾನು ಭಯಪಡುದಿಲ್ಲ. ಆದರೆ ದೇವ ಭಯವಿಲ್ಲದವನು ಹಣವಂತಾನಾಗುವುದನ್ನು ನಾನು ಭಯಪಡುತ್ತೇನೆ ಎಂಬ ಪ್ರವಾದಿ ಸ ಅ ರವರ ವಚನವನ್ನು ಉಲ್ಲೇಖಿಸಿದರು.
ಮರಣದ ನೆನಪು ಜನರಿಂದ ಮಾಯವಾಗುತ್ತಿರುವುದೇ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದ ಅವರು ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳನ್ನು ಪಡೆದುಕೊಂಡು ಅವನ ಆದೇಶಗಳನ್ನು ಮಾತ್ರ ಧಿಕ್ಕರಿಸಿ ನಡೆದರೆ ಇಹ ಪರದಲ್ಲಿ ಪರಾಜಯವು ಕಟ್ಟಿಟ್ಟ ಬುತ್ತಿ ಎಂದರಲ್ಲದೇ ನಾಡಿನ ಕಾನೂನನ್ನು ಉಲ್ಲಂಘಿಸಿದರೆ ಯಾವ ರೀತಿ ಜನರ ಬದುಕು ದುಸ್ತರವಾಗುತ್ತದೋ ಅದೇ ರೀತಿ ದೈವಿಕ ಕಾನೂನನ್ನು ಮೀರಿದರೆ ಮನುಷ್ಯ ನೈತಿಕವಾಗಿ ಅದಃಪತನ ಗೊಂಡು ಜೀವನವೇ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.
ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ತಮಾಷೆ ಮಿತಿ ಮೀರಿದರೆ ಕೆಲವೊಮ್ಮೆ ಯಾವೆಲ್ಲಾ ಪರಿಣಾಮಗಳಾಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಪುತ್ತೂರು ಮೂಲದ ಯುವಕನೊಬ್ಬ ಅಬುಧಾಬಿಯಲ್ಲಿ 7 ಕೋಟಿ ರೂ ಲಾಟರಿ ವಿಜೇತನಾಗಿದ್ದಾನೆ ಎನ್ನುವ ಸಂದೇಶವೊಂದು ಫೆ.4ರಿಂದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈಲರ್ ಕೂಡಾ ಆಗಿತ್ತು. ಅಬುಧಾಬಿ ಡ್ಯೂಟಿ ಫ್ರೀ ಲಾಟರಿಯಲ್ಲಿ ಬರೆಪ್ಪಾಡಿ ಸಮೀಪದ ಕೂರತ್ ನಿವಾಸಿ ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಎಂಬ ಯುವಕನಿಗೆ ರೂ. 7 ಕೋಟಿ ರೂ.ಗಳ ಲಾಟರಿ ಡ್ರಾ ಆಗಿದೆ ಎನ್ನುವ ಪೋರ್ಟಲ್ ನ್ಯೂಸ್ ಒಂದರ ಸ್ಕ್ರೀನ್ ಶಾಟ್ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯೂ ನಡೆದಿತ್ತು. ಹಲವರು ಸಫ್ವಾನ್ ಅವರಿಗೆ ಅಭಿನಂದನೆ ಸಲ್ಲಿಸಿ ಸಂದೇಶವನ್ನು ಹರಿಯಬಿಟ್ಟಿದ್ದರು. ಇದು ಸತ್ಯವೆಂದೇ ಬಹುತೇಕರು ನಂಬಿದ್ದರು. ಆದರೆ ಇದರ ನೈಜತೆ ಇದೀಗ ಬಯಲಾಗಿದೆ.
ಕೇರಳದ ವ್ಯಕ್ತಿಯೊಬ್ಬರಿಗೆ ಒಲಿದ ಲಾಟರಿ ಬಗ್ಗೆ ವೆಬ್ ತಾಣವೊಂದರಲ್ಲಿ ನ್ಯೂಸ್ ಬಂದಿತ್ತು. ಅಲ್ಲಿಗೆ ಸಫ್ವಾನ್ ಅವರ ಫೋಟೋವನ್ನು ಎಡಿಟ್ ಈ ರೀತಿ ತಿರುಚಿ ಸಂದೇಶವನ್ನು ಹರಿಯಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ರೀತಿ ಎಡಿಟ್ ಮಾಡಿದವರು ಯಾರು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಸಫ್ವಾನ್ ಬಳಗದಲ್ಲಿದ್ದ ಗೆಳೆಯರೇ ಅನ್ಯ ಉದ್ದೇಶಗಳಿಲ್ಲದೇ ಕೇವಲ ತಮಾಷೆಗಾಗಿ ಈ ರೀತಿ ಮಾಡಿರಬಹುದು ಎನ್ನುವ ಸಂಶಯ ಕೂಡಾ ಉಂಟಾಗಿದೆ.
ನನಗೆ ಲಾಟರಿ ಒಲಿದಿಲ್ಲ-ಸಫ್ವಾನ್ ಸ್ಪಷ್ಟನೆ : ಈ ಬಗ್ಗೆ `ವಿಶ್ವ ಕನ್ನಡಿಗ ನ್ಯೂಸ್’ ಜೊತೆ ಸ್ವತಃ ಸಫ್ವಾನ್ ಕೂರತ್ ಅವರು ಮಾತನಾಡಿ ನಾನು ಯಾವುದೇ ಲಾಟರಿ ವಿಜೇತನಾಗಿಲ್ಲ. ಎಲ್ಲವೂ ಸುಳ್ಳು ಸುದ್ದಿಗಳು. ನನ್ನ ಫೋಟೋ ಎಡಿಟ್ ಮಾಡಿ ಯಾರೋ ಮಾಡಿರುವ ಕೃತ್ಯ ಇದಾಗಿದ್ದು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ನಾನು ಲಾಟರಿ ವಿಜೇತನಾಗಿದ್ದೇನೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಬಳಿಕ ನೂರಾರು ಕರೆಗಳು, ಸಂದೇಶಗಳು ನನಗೆ ಬರುತ್ತಿದೆ. ವಾಸ್ತವದಲ್ಲಿ ನಾನು ಇದರಿಂದಾಗಿ ಗೊಂದಲ ಮತ್ತು ನೋವಿಗೊಳಗಾಗಿದ್ದೇನೆ. ತಮಾಷೆಗಾಗಿ ಯಾರೋ ಮಾಡಿರುವ ಈ ಪೋಸ್ಟ್ನಿಂದ ನನಗೆ ಬಹಳ ಕಿರಿಕಿರಿಯಾಗಿದೆ. ನನಗೆ ರೂ.೭ ಕೋಟಿ ಲಾಟರಿ ಬಂದಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಇದನ್ನು ಯಾರು ಕೂಡಾ ನಂಬಬಾರದು ಎಂದು ಸಫ್ವಾನ್ ಕೂರತ್ ಮನವಿ ಮಾಡಿದ್ದಾರೆ.
ತಮಾಷೆ ತಂದ ಫಜೀತಿ…! : ತಮಾಷೆಗಾಗಿ ಯಾರೋ ಮಾಡಿದ ಎಡಿಟ್ ಒಂದು ವ್ಯಾಪಕ ವೈರಲ್ ಆಗಿ ಸಫ್ವಾನ್ ಕೂರತ್ ಎಂಬವರು ಪೇಚಿಗೆ ಸಿಲುಕಿರುವುದು ವಿಪರ್ಯಾಸವಾಗಿದೆ. ಲಾಟರಿ ಬಂದಿದೆ ಎನ್ನುವ ಸಂದೇಶ ಹರಿದಾಡಿದ್ದೇ ತಡ ಇದುವರೆಗೂ ಸಂಪರ್ಕ ಇಲ್ಲದ ಅನೇಕರು ಸಫ್ವಾನ್ ಅವರನ್ನು ಸಂಪರ್ಕಿಸಿ ಸಾಲ ಕೇಳಿದ್ದರು ಎನ್ನುವುದು ಇನ್ನೊಂದು ವಿಶೇಷ. ಅನಿವಾಸಿ ಉದ್ಯೋಗಿಯಾಗಿರುವ ಸಫ್ವಾನ್ ಅವರಿಗೆ ರೂ.೭ ಕೋಟಿ ಒಲಿದಿದೆ ಎನ್ನುವ ವಿಚಾರ ಊರೆಲ್ಲಾ ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ ಸಫ್ವಾನ್ ಅವರ ಸಂಬಂಧಿಕರು, ಗೆಳೆಯರು ಅವರಿಗೆ ನಿರಂತರ ಸಂದೇಶಗಳನ್ನು ಕಳಿಸಿ ವಿಚಾರಿಸಿದ್ದರು. ಅಂತೂ ತಮಾಷೆಗಾಗಿ ಮಾಡಿದ ಸಂದೇಶವೊಂದು ಸಫ್ವಾನ್ ಅವರನ್ನು ಸದ್ಯದ ಮಟ್ಟಿಗೆ ಸಮಸ್ಯೆಗೆ ದೂಡಿರುವುದಂತೂ ಸುಳ್ಳಲ್ಲ.
ಮಂಗಳೂರು (www.vknews.com) ; ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರು , ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ, ಎಸ್ ಎಸ್ ಎಪ್ ದೀರ್ಘ ಕಾಲ ವಿವಿಧ ಘಟಕಗಳ ನಾಯಕರು, ಹಝ್ರತ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ , ವಿವಿಧ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು, ಅಪ್ಪಟ ಸಮಾಜ ಸೇವಕ ಹಗಲಿರುಳು ಜನರ ಸೇವೆಯಲ್ಲಿ ಗುರುತಿಸಲ್ಪಡುವ ಹಾಗೂ ಎಲ್ಲಾ ಸಾದಾತುಗಳ,ಉಲಮಾ ಗಳ,ಸಾಮಾಜಿಕ ನಾಯಕರ ಎಲ್ಲಾ ರಾಜಕೀಯ ನಾಯಕರ, ಎಲ್ಲಾ ಸರಕಾರಿ ಅಧಿಕಾರಿಗಳ ನಿಕಟ ಸಂಪರ್ಕವನ್ನು ಹೊಂದಿರುವ, ಕೊರೋನ ಸಂದರ್ಭದಲ್ಲಿ ಲಾಕಡೌನ್ ದಾಗ ಮಂಗಳೂರು ಆಸುಪಾಸು ಬಿಕ್ಷುಕರಿಗೆ, ಆಸ್ಪತ್ರೆ ಯಲ್ಲಿ ರುವ ರೋಗಿಗಳಿಗೆ ಹಲವು ತಿಂಗಳಲ್ಲಿ ಆಹಾರ ವ್ಯವಸ್ಥೆ, ರಂಝಾನ್ ಸಂದರ್ಭದಲ್ಲಿ ಎಲ್ಲಾ ಆಸ್ಪತ್ರೆ ಯಲ್ಲಿ ಬಹುತೇಕ ಮಂದಿಗೆ ಇಪ್ತಾರ್ ವ್ಯವಸ್ಥೆ, ಕೆಸಿಎಪ್ 14 ಚಾರ್ಟಡ್ ವಿಮಾನದಲ್ಲಿ ಆಗಮಿಸಿದ ಸುಮಾರು 2000 ಸಾವಿರದಷ್ಷು ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ಸಂದರ್ಭದಲ್ಲಿ ವಿವಿಧ ನಿರಂತರ ಸಹಕಾರಗಳು, ಲಾಕಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯ ಗಳಿಗೂ, ಅಂತರಾಷ್ಟ್ರೀಯ ಮಟ್ಟಕ್ಕೂ ಚೈನ್ ಲಿಂಕ್ ಮೂಲಕ ಔಷಧ ಪೂರೈಕೆ ಯಲ್ಲಿ ಪ್ರಮುಖ ಪಾತ್ರ ವಹಿಸಿ ಹಲವರ ಮನಗೆದ್ದ ಜಿಲ್ಲೆಯ ಪ್ರಮುಖ ಆಪತ್ಬಾಂದವ ಅಶ್ರಫ್ ಕಿನಾರ ಕುದ್ರೋಳಿ ಮಂಗಳೂರು ಇವರ ಸೇವೆ ಯ ಗುರುತಿಸಿ ನಗರದ ಪ್ರಮುಖ ಉದ್ಯಮಿ ಹಲವು ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷ ರು ಅದ ಎಸ್ ಎಮ್ ರಷೀದ್ ಹಾಜಿ ನೇತ್ರತ್ವ ದ ಸಮಿತಿಯಿಂದ ನಗರದ ಓಷಿಯನ್ ಪಾರ್ ಲರ್ ಹೋಟೆಲ್ ನಲ್ಲಿ ಬುಧವಾರ ವಾರ ಸಾಯಂಕಾಲ ಕೋವಿಡ್ 19 ವಾರಿಯರ್ಸ್ ಸೇನಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಹಲವಾರು ಲೇಖನಗಳನ್ನು ಬರೆದಂತಹ ಅಂಕಣಕಾರ- ಲೇಖಕ ಹೊಳೆನರಸೀಪುರ ಮಂಜುನಾಥ ಅವರು ನಮ್ಮನ್ನಗಲಿದ್ದಾರೆ.
’ಭದ್ರತಾ ಲೋಕದಲ್ಲಿ’ ಹಾಗು ಅರಬ್ಬರ ನಾಡಿನ ಭದ್ರತಾ ಲೋಕದಲ್ಲಿ ಎಂಬ ಎರಡು ಕೃತಿಗಳನ್ನು ಬರೆದಿರುವ ಇವರ ಅಗಲಿಕೆಯು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ ಸಂತಾಪ ಸೂಚಿಸುತ್ತದೆ.
ಗ್ರೌಂಡ್ ರಿಪೋರ್ಟ್ : ಎಸ್.ಎ.ರಹಿಮಾನ್ ಮಿತ್ತೂರು,
ದುಬೈ(www.vknews.in): ಇಂದು ರಾತ್ರಿ 9 ರಿಂದ ಯುಎಇ ಸೇರಿದಂತೆ 20 ರಾಷ್ಟ್ರಗಳಿಂದ ಸೌದಿಗೆ ಪ್ರವೇಶ ನಿರ್ಬಂಧಿಸಿ ಸೌದಿ ಸರಕಾರ ಆದೇಶ ಹೊರಡಿಸಿದ ನಂತರ, ಯುಎಇ ಮೂಲಕ ಸೌದಿಗೆ ತೆರಳಲು ಸಿದ್ಧರಾಗಿ ದುಬೈಯಲ್ಲಿ ಕ್ವಾರೆಂಟೈನ್ ನಲ್ಲಿರುವ ನೂರಾರು ಕವ್ನಡಿಗರು ಸೇರಿದಂತೆ ಸಾವಿರಾರು ಅನಿವಾಸಿಗಳ ಭವಿಷ್ಯವು ಅನಿಶ್ಚಿತತೆಯಲ್ಲಿದೆ.
ಭಾರತದಿಂದ ಸೌದಿಗೆ ನೇರ ವಿಮಾನಯಾನ ನಿಷೇಧವಿರುವ ಕಾರಣ ಅನೇಕ ಮಂದಿ ಭಾರತೀಯರು ದುಬೈ ಮಾರ್ಗವಾಗಿ ಸೌದಿಗೆ ತೆರಳುತ್ತಿದ್ದರು. ಇವರಿಗೆ ಸೌದಿ ಅರೇಬಿಯಾ ಪ್ರವೇಶಿಸುವ ಮುನ್ನ ದುಬೈಯಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿತ್ತು. ಈಗಾಗಲೇ ಕೆಲವರು 10 ದಿನಗಳ ಕ್ವಾರೆಂಟೈನ್ ಕಳೆದು ಇನ್ನು ಕೆಲವೇ ದಿನಗಳಲ್ಲಿ ಸೌದಿಗೆ ಪ್ರಯಾಣಿಸುವ ಪ್ರಯತ್ನಕ್ಕೆ ಈ ಹೊಸ ನಿರ್ಬಂಧವು ತಣ್ಣೀರೆರಚಿದೆ. 15 ದಿನಗಳ ಪ್ಯಾಕೇಜ್ ನಲ್ಲಿ ದುಬೈಗೆ ತೆರಳಿದ ಅನೇಕರಿಗೆ ಈ ಅವಧಿಯಲ್ಲಿ ತಮ್ಮ ತಮ್ಮ ರೂಮುಗಳನ್ನು ತೊರೆಯಬೇಕಾಗಿದೆ. ಮೊದಲೇ ಒಂದು ವರ್ಷ ಕಾಲ ಉದ್ಯೋಗವಿಲ್ಲದೇ ತಾಯ್ನಾಡಿನಲ್ಲಿ ಕಷ್ಟಪಟ್ಟು ಸಾಲ ಮಾಡಿ ದುಬೈಗೆ ಬಂದ ಅನಿವಾಸಿಗಳು ಮುಂದೆ ತಮ್ಮ ವಾಸ ಹಾಗೂ ಆಹಾರಕ್ಕಾಗಿ ಇತರರನ್ನು ಅವಲಂಭಿಸಬೇಕಾದ ಅಥವಾ ಸಾಮಾಜಿಕ ಸಂಘಟನೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸೌದಿ ಅರೇಬಿಯಾ ವಿಧಿಸಿರುವ ಈ ಪ್ರಯಾಣ ನಿರ್ಬಂಧವು ತಾತ್ಕಾಲಿಕ ಎನ್ನಲಾಗುತ್ತಿದ್ದರೂ, ರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ದೈನಂದಿನ ಕೊವಿಡ್ ಪ್ರಕರಣಗಳನ್ನು ಗಮನಿಸಿದರೆ ಈ ಪ್ರಯಾಣ ನಿರ್ಬಂಧವು ಮತ್ತೆ ಕೆಲವು ದಿನಗಳು ಮುಂದುವರಿಯುವುದರಲ್ಲಿ ಸಂಶಯವಿಲ್ಲ. ಅದಲ್ಲದೇ ಎರಡನೇ ಹಂತದ ಕೊವಿಡ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಫೆಬ್ರವರಿ 5,6 ಹಾಗೂ 7ರಂದು ಸೌದಿ ಅರೇಬಿಯಾದ್ಯಂತ ಲಾಕ್ ಡೌನ್ ಮಾಡಲು ಸೌದಿ ಆರೋಗ್ಯ ಇಲಾಖೆಯು ಆಂತರಿಕ ಸಚಿವಾವಕ್ಕೆ ಶಿಫಾರಸ್ಸು ಮಾಡಿದೆ. ಒಂದು ವೇಳೆ ಈ ನಿರ್ಣಯಕ್ಕೆ ಸೌದಿ ಆಂತರಿಕ ಸಚಿವಾಲಯವು ಸಮ್ಮತಿ ಸೂಚಿಸಿದಲ್ಲಿ ಸೌದಿ ಅರೇಬಿಯಾದಲ್ಲಿ ಮತ್ಕೊಮ್ಮೆ ಲಾಕ್ ಡೌನ್ ಸನ್ನಿಹಿತವಾಗಬಹುದು.
ಮನಾಮ (www.vknews.com) : ಪ್ರವಾಸಿ ಭಾರತೀಯ ಸಮ್ಮಾನ್ ಪುರಸ್ಕಾರ ವಿಜೇತ ಶ್ರೀ ಕೆ.ಜೆ. ಬಾಬುರಾಜ್ ಅವರಿಗೆ ಇಂಡಿಯನ್ ಸೋಷಿಯಲ್ ಫೋರಂ ನಿಂದ ಅಭಿನಂದನೆ ಸಲ್ಲಿಸಲಾಯಿತು.
ಪ್ರಮುಖ ಉದ್ಯಮಿ B.K.G. HOLDING ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಪ್ರವಾಸಿ ಭಾರತೀಯ ಸಮ್ಮಾನ ಪುರಸ್ಕಾರ ಪಡೆದ ಶ್ರೀ ಕೆ ಜೆ ಬಾಬುರಾಜನ್ ಅವರಿಗೆ ಇಂಡಿಯನ್ ಸೋಷಿಯಲ್ ಫೋರಂ ರಾಷ್ಟ್ರೀಯ ಸಮಿತಿ ಸದಸ್ಯರು ಅಬಿನಂದಿಸಿದರು.
ಬಹರೈನ್ ಪ್ರವಾಸಿಗರ ನಡುವೆ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ , ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂದಾಳುತ್ವ ವಹಿಸುತ್ತಿರುವ , ಲೋಕೋಪಕಾರಿ ಕ್ಷೇತ್ರದಲ್ಲಿ ಸರಿಸಾಟಿಯಿಲ್ಲದ ಕೆಲಸಕ್ಕೆ ಮುಂದಾಳುತ್ವ ವಹಿಸುವ ಶ್ರೀ ಬಾಬುರಾಜನ್ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ ಪುರಸ್ಕಾರ ಲಭಿಸಿರುವುದು ತುಂಬಾ ಸಂತೋಷದ ವಿಷಯ ಎಂದು ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಅಧ್ಯಕ್ಷರಾದ ಅಬ್ದುಲ್ ಜವಾದ್ ಪಾಷಾ ತಿಳಿಸಿದರು.
ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಿ, ಉಪಾಧ್ಯಕ್ಷ ಅಬ್ದುಲ್ ರಷೀದ್ ಮತ್ತು ಕೇಂದ್ರ ಸಮಿತಿ ಸದಸ್ಯರು ಹಾಗೂ ಕರ್ನಾಟಕ ಘಟಕದ ಅಧ್ಯಕ್ಷ ಇರ್ಫಾನ್ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.
ದೋಹಾ, ಕತಾರ್ (www.vknews.com) : ಕನ್ನಡದ ಹೆಮ್ಮೆ – ಕಣ್ಣರಳಿಸಿ ನೋಡೊಮ್ಮೆ, ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ನೂತನ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಮಾಡಲಾಗಿದೆ.
ಕಾತರದಿ ಕಾಯುತ್ತಿದ್ದ ಕನ್ನಡಿಗರಿಗೊಂದು ಸಿಹಿ ಸುದ್ದಿ. ಕರ್ನಾಟಕದ ಉಡುಪಿ ಜಿಲ್ಲೆ ಬೈಂದೂರ್ ತಾಲೂಕಿಗೆ ಸಮೀಪದ ತಗ್ಗರ್ಸೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಅವಿರತ ಸೇವೆ ಸಲ್ಲಿರುತ್ತಿದ್ದಾರೆ ಅವರು ಪ್ರತಿಷ್ಠಿತ “ಐ.ಸಿ.ಸಿ ಕತಾರ್ ನ (ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನ ) 2021 – 22 ರ ಸಾಲಿನ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶೀಯುತರು ಅನೇಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡದ್ದಲ್ಲದೆ, ಕರ್ನಾಟಕ ಸಂಘ ಕತಾರ್ ನ ಉಪಾಧ್ಯಕ್ಷರಾಗಿ, ಐ ಸಿ ಬಿ ಫ್ ನ ಸಹ ಕಾರ್ಯದರ್ಶಿಯಾಗಿ ಅನೇಕ ಭಾರತೀಯರ ಮೆಚ್ಚುಗೆ ಗಳಿಸಿದ್ದಾರೆ. ಕೋವಿಡ್ -19 ತನ್ನ ರುದ್ರ ತಾಂಡವವಾಡುತ್ತಿದ್ದ ವೇಳೆಯಲ್ಲಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತನ್ನ ಜೀವದ ಹಂಗು ತೊರೆದು ಅನೇಕ ಭಾರತೀಯರಿಗೆ ಸಕಾಲ ನೆರವನ್ನು ನೀಡಿರುವುದು ಜನರ ಪ್ರಶಂಶೆಯನ್ನು ಗಳಿಸಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ, ಕತಾರಿನ ಭಾರತೀಯ ರಾಯಭಾರ ಕಛೇರಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ “ಡಿಜಿಪೋಲ್” ಮೂಲಕ ಭಾರತೀಯ ವಲಸಿಗ ಸಮುದಾಯದ ಸರ್ವೋಚ್ಚ ಅಂಗಸಂಸ್ಥೆಯ ಚುನಾವಣೆ ನಡೆಸಲಾಯಿತು. ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯಲ್ಲಿ ಹಸ್ತಚಾಲಿತ ಮತದಾನ ಮತ್ತು ಸಾಮೂಹಿಕ ಒಟ್ಟುಗೂಡಿಸುವಿಕೆಯನ್ನು ತಪ್ಪಿಸಲು ಇದನ್ನು ಕೈಗೆತ್ತಿಕೊಳ್ಳಲಾಯಿತು . ಚುನಾವಣಾ ಪ್ರಕ್ರಿಯೆಯು ದೋಷರಹಿತವಾಗಿದ್ದು, 95% ಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಹಾಗೂ ಭಾಗವಹಿಸುವಿಕೆಯೊಂದಿಗೆ ದೊಡ್ಡ ಯಶಸ್ಸನ್ನು ಕಂಡಿತು. ನ್ಯಾಯಯುತವಾಗಿ ಚುನಾವಣೆಗಳನ್ನು ನಡೆಸುವಲ್ಲಿ ಭಾರತೀಯ ರಾಯಭಾರ ಕಚೇರಿಯು ಉತ್ತಮವಾಗಿ ನಿರ್ವಹಿಸಿದ ಕೆಲಸಕ್ಕೆ ಸರ್ವಾಂಗೀಣ ಅಂಗೀಕಾರ ಮತ್ತು ಮೆಚ್ಚುಗೆ ವ್ಯಕ್ತಪಡಿಸಿತು. ಸಮಯದ ಮುಕ್ತಾಯದ ನಂತರ 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ಘೋಷಿಸಲಾಯಿತು.
ಸರ್ವೋಚ್ಚ ಸಂಸ್ಥೆಗಳಲ್ಲೊಂದಾದ, ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನ (ಐಸಿಸಿ) ನೂತನ ಅಧ್ಯಕ್ಷರಾಗಿ ಶ್ರೀ ಪಿ.ಎನ್. ಬಾಬುರಾಜನ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿತು. ಭಾರತದ ರಾಯಭಾರ ಕಛೇರಿಯ ಸಮಾಲೋಚನೆ ಮತ್ತು ಅನುಮೋದನೆಯ ನಂತರ, ಜನವರಿ 27, 2021 ರಂದು, ಮೊದಲ ಐಸಿಸಿ ನಿರ್ವಹಣಾ ಸಮಿತಿ ಸಭೆ ನಡೆಸಿ ನಿಯೋಜಿತ ಸ್ಥಾನಗಳನ್ನು ಘೋಷಿಸಲಾಯಿತು. ಉಪಾಧ್ಯಕ್ಷರಾಗಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೃಷ್ಣಕುಮಾರ್ ಬಂಧಕವಿ, ಕಾರ್ಯದರ್ಶಿಯಾಗಿ ಶ್ರೀ ಸುಧೀರ್ ಗುಪ್ತಾ, ಹಣಕಾಸು ಮುಖ್ಯಸ್ಥರಾಗಿ ಶ್ರೀ ಅರ್ಷದ್ ಅಲಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಶ್ರೀ ಅನೀಶ್ ಜಾರ್ಜ್ ಮ್ಯಾಥ್ಯೂ, ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥೆಯಾಗಿ ಶ್ರೀಮತಿ ಶ್ವೇತಾ ಕೋಷ್ಟಿ , ಚಟುವಟಿಕೆ ಮತ್ತು ಶಿಕ್ಷಣ ಸಂಯೋಜಕರಾಗಿ ಶ್ರೀಮತಿ ಕಮಲಾ ಧನ್ಸಿಂಗ್ ಠಾಕೂರ್, ಒಳಾಂಗಣ ಚಟುವಟಿಕೆಗಳ ಮುಖ್ಯಸ್ಥರಾಗಿ ಶ್ರೀ ಮೋಹನ್ ಕುಮಾರ್, ಸಲಹೆಗಾರ ಮತ್ತು ಬಾಹ್ಯ ಕಾರ್ಯಕ್ರಮಗಳ ಮುಖ್ಯಸ್ಥರಾಗಿ ಶ್ರೀ ಅಫ್ಸಲ್ ಅಬ್ದುಲ್ ಮಜೀದ್, ಸಂಬಂಧ ಮತ್ತು ಸದಸ್ಯತ್ವದ ಮುಖ್ಯಸ್ಥರಾಗಿ ಶ್ರೀ ಸಜೀವ್ ಸತ್ಯಶೀಲನ್ ಆಯ್ಕೆ ಆದರು. ವ್ಯವಸ್ಥಾಪನಾ ಸಮಿತಿಯ ಹಂಚಿಕೆಗಳನ್ನು ವಿವಿಧ ಸಾಂಸ್ಥಿಕ ಹುದ್ದೆಗಳಲ್ಲಿ ಹಿನ್ನೆಲೆ ಮತ್ತು ಅನುಭವದ ಆಧಾರದ ಮೇಲೆ ಪರಿಗಣಿಸಲಾಯಿತು.
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.