ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕುಂಪಲದ ನಿವಾಸಿ ಮೋಹನ್ ನಾಯಕ್ ರವರ ಮಗಳು ಯಶಿಕಾ ನಾಯಕ್ ಇಂದು ಜೀವನ್ಮರಣದ ನಡುವೆ ಸಿಲುಕಿ ಮಂಗಳೂರಿನ ಎ. ಜೆ ಹಾಸ್ಪಿಟಲ್ ನಲ್ಲಿ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆಗಾಗಿ ತಡವರಿಸಿದರೂ, ಆರ್ಥಿಕವಾಗಿ ಹಿಂದುಳಿದರಿಂದ ಇವರಿಗೆ ಯಾವುದೇ ರೀತಿಯ ಮುನ್ನಡೆಗೆ ಅವಕಾಶ ಇಲ್ಲ.
ವಿವರ : ಯಾಶಿಕಾ ಎಂಬ ಮಗುವಿಗೆ ಒಂದನೇ ವಯಸ್ಸಿನಲ್ಲಿ ತನ್ನ ತಲೆಗೆ ಸ್ಟೀಲ್ ಪೈಪ್ ಅಳವಡಿಸುವುದರ ಮೂಲಕ ಚಿಕಿತ್ಸೆ ನಡೆಸಲಾಗಿತ್ತು, ಆದರೆ ಇಂದು ಆ ಮಗುವಿಗೆ ಸುಮಾರು 8 ವರ್ಷ, ಈಗ ಆ ಪೈಪ್ ಸೋರಿಕೆಯಾಗಿ ಅದರ ನೀರು ಸಂಪೂರ್ಣವಾಗಿ ಮೆದುಳಿಗೆ ತಗುಲಿದೆ, ಮಗುವಿನ ಚಲನವಲನ ಎಲ್ಲ ನಿಂತಿದೆ. ಆದ್ದರಿಂದ ವೆನಲಾಕ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಗುವನ್ನು ಎ.ಜೆ ಹಾಸ್ಪಿಟಲ್ ಗೆ ಹಸ್ತಾಂತರಿಸಲಾಗಿದೆ.
ಆದರೆ ಇಲ್ಲಿ ಶಸ್ತ್ರಚಿಕಿತ್ಸೆಗೆ ಸುಮಾರು 5 ರಿಂದ 6 ಲಕ್ಷದವರೆಗೆ ಖರ್ಚಿದೆ,. ಆದ್ಧರಿಂದ ಈ ಮಗು ಮುಂದಿನಂತೆ ಎಲ್ಲರೊಂದಿಗೆ ಬೆರೆಯಲಿ ಎನ್ನುವ ಆಶಯ ನಮ್ಮದಾಗಲಿ.. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ನಿಟ್ಟಿನಲ್ಲಿ ತಮ್ಮಂಥ ಧಾನಿಗಳ ಸಣ್ಣ ನೆರವು ಕೂಡ ಈ ಮಗುವಿನ ಚಿಕಿತ್ಸೆಗೆ ಸಹಕಾರಿಯಾಗಬಹುದು. ಎಲ್ಲರು ಆದಷ್ಟು ಬೇಗ ಸ್ಪಂದಿಸಿ ಮಗುವಿನ ಶಸ್ತ್ರ ಚಿಕಿತ್ಸೆ ಕೂಡಲೇ ಆಗಬೇಕಿದೆ.
ವಿಶ್ವ ಕನ್ನಡಿಗ ನ್ಯೂಸ್ ಒಂಬತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ “ವಿಕೆ ನ್ಯೂಸ್ ಸಾಂತ್ವನ”ದ ಅಡಿಯಲ್ಲಿ ಈ ಮಗುವಿಗೆ ನಮ್ಮಿಂದಾಗುವ ಚಿಕ್ಕ ನೆರವನ್ನು ನೀಡಲು ತೀರ್ಮಾನಿಸಿದ್ದೇವೆ, ನಮ್ಮ ಓದುಗ ಅಭಿಮಾನಿಗಳು ತಮ್ಮಿಂದಾಗುವ ಸಹಾಯವನ್ನು ತಿಳಿಸಿ ಸಹಕರಿಸಬೇಕಾಗಿ ವಿನಂತಿ. ವಾಟ್ಸ್ ಆಪ್ : +971 50 4730110
ಹೆಚ್ಚಿನ ವಿವರಗಳಿಗೆ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿರಿ : 9901559411
ತಾವು ನೇರವಾಗಿ ಈ ಮಗುವಿನ ತಾಯಿಯ ಖಾತೆಗೆ ತಮ್ಮ ಸಹಾಯಧನವನ್ನು ಕಳುಹಿಸುವುದಿದ್ದಲ್ಲಿ ಈ ಕೆಳಗಿನ ಖಾತೆಗೆ ಜಮಾ ಮಾಡಬೇಕಾಗಿ ವಿನಂತಿ.
A/C No: 114900101015855 Name:SHARADA Branch :THOKKOTTU Bank : CORPORATION BANK IFSC:CORP0001149 MICR:575017032
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.