ಅತ್ಯಂತ ನ್ಯಾಯಯುತವಾಗಿ ಸುದ್ದಿಗಳನ್ನು ಮುದ್ರಿಸುವ ಮೂಲಕ ಎಲ್ಲಾ ವರ್ಗದ ಕನ್ನಡ ಓದುಗ ಅಭಿಮಾನಿಗಳನ್ನು ಸಂಪಾದಿಸಿರುವ “ವಿಕೆ ನ್ಯೂಸ್” – ಎಸ್ಸಾರ್ಜೆ ಮಾಡನ್ನೂರ್

ಸುಮಾರು ಒಂಬತ್ತು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕರಾವಳಿಯ ಕನ್ನಡಿಗರು ಕಟ್ಟಿ ಬೆಳೆಸಿದ “ವಿಶ್ವ ಕನ್ನಡಿಗ ನ್ಯೂಸ್” ಎಂಬ ಅಂತರ್ಜಾಲ ಪತ್ರಿಕೆ ಇಂದು ಎಲ್ಲಾ ಕನ್ನಡಿಗರ ಹೃದಯವನ್ನು ಗೆಲ್ಲುವಲ್ಲಿ ಸಫಲವಾಗಿದೆ. ಅದರಲ್ಲೂ ಗಲ್ಫ್ ಕನ್ನಡಿಗರ ಪಾಲಿಗೆ “ವಿಕೆ ನ್ಯೂಸ್” ಒಂದು ವರದಾನ ಪತ್ರಿಕೆ ಅಂತಲೇ ಹೇಳಬಹುದು. ಅತ್ಯಂತ ಹೆಚ್ಚು ವಿದೇಶಿ ಸುದ್ದಿಗಳನ್ನು ಪ್ರಕಟಿಸಿ ಕ್ಷಣ ಕ್ಷಣಕ್ಕೂ ಓದುಗರ ಕೈಗೆ ಸುದ್ದಿಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಮಲಯಾಳಿಗರಿಗೆ ಗಲ್ಫ್ ಸುದ್ದಿಗಳನ್ನು ಪ್ರಸಾರ ಮಾಡುವ ಬೇಕಾದಷ್ಟು ಮಾಧ್ಯಮಗಳು ಇದೆ. ಆದರೆ ಕನ್ನಡ ಮಾಧ್ಯಮಗಳಲ್ಲಿ ಗಲ್ಫ್ ಸುದ್ದಿಗಳು ಕಾಣಲು ಸಿಗುವುದು ತುಂಬಾ ಅಪರೂಪ. ಕನ್ನಡಿಗರ ಈ ಕೊರತೆಯನ್ನು “ವಿಕೆ ನ್ಯೂಸ್” ನಿಭಾಯಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಷ್ಟೇ ಅಲ್ಲದೆ ಯುವ ಬರಹಗಾರರಿಗೂ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟು, ಇದರ ಮೂಲಕ ಹಲವಾರು ಯುವ ಲೇಖಕರು ಸಮಾಜದಲ್ಲಿ ಗುರುತಿಸುವಂತಾಗಿದೆ.

ಅತ್ಯಂತ ನ್ಯಾಯಯುತವಾಗಿ ಸುದ್ದಿಗಳನ್ನು ಮುದ್ರಿಸುವ ಮೂಲಕ ಎಲ್ಲಾ ವರ್ಗದ ಕನ್ನಡ ಓದುಗ ಅಭಿಮಾನಿಗಳನ್ನು ಸಂಪಾದಿಸಿರುವ “ವಿಕೆ ನ್ಯೂಸ್” ಇಂದು ಒಂಬತ್ತು ವರ್ಷಗಳನ್ನು ಪೋರೈಸಿದ್ದು, ಇನ್ನು ಮುಂದೆಯೂ ಇನ್ನಷ್ಟು ಅಪಾರ ಓದುಗರನ್ನು ಸಂಪಾದಿಸಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಹಾಗೇನೇ “ವಿಕೆ ನ್ಯೂಸ್” ಇಷ್ಟು ಎತ್ತರಕ್ಕೆ ಬೆಳೆದು ಮುನ್ನಡೆಯಲು ಕಾರಣಕರ್ತರಾದ ಸಂಪಾದಕರು, ಉಪ ಸಂಪಾದಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.

ಎಸ್ಸಾರ್ಜೆ ಮಾಡನ್ನೂರ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...