(www.vknews.in) ; ಮನುಷ್ಯನು ಸುಲಭದಲ್ಲಿ ಮೋಸ ಹೋಗ ಬಹುದಾದ ಒಂದು ವಿಷಯವಿದ್ದರೆ ಅದು ಹಣದ ವಿಷಯದಲ್ಲಿ ಎಂದು ಹೇಳಬಹುದು.
ಎಷ್ಟೇ ಬುದ್ದಿವಂತನಾದರೂ ಮನುಷ್ಯನು ಹಣದ ವಿಷಯದಲ್ಲಿ ಎಡವುತ್ತಾನೆ. ಅದು ಮಾತ್ರವಲ್ಲದೆ ಸುಲಭದಲ್ಲಿ ಇನ್ನೊಬ್ಬನಿಂದ ಮೋಸಕ್ಕೆ ಒಳಗಾಗುತ್ತಾನೆ.
“ಹಣ” ಒಂದು ಮಾಯಾಜಾಲದಂತೆ. ಅದು ಕೈಯಲ್ಲಿ ಇರುವಾಗ ಅದರ ಬೆಲೆ ಗೊತ್ತಾಗುವುದಿಲ್ಲ, ಕಳೆದು ಹೋದ ಮೇಲೆಯೇ ಅದರ ಮೌಲ್ಯ ಮನುಷ್ಯನಿಗೆ ಗೊತ್ತಾಗುತ್ತದೆ.
ಹಣದ ವಿಷಯದಲ್ಲಿ ಹೆಚ್ಚಾಗಿ ಮೋಸ ಹೋಗುವವರು ತೀರ ಬಡವರು ಮತ್ತು ಮಧ್ಯಮ ವರ್ಗದವರೇ ಆಗಿರುತ್ತಾರೆ. ಶ್ರೀಮಂತರು ಇನ್ನೂ ಹೆಚ್ಚು ಸಂಪಾದಿಸಬೇಕು ಎನ್ನುವ ಅತೀ ಆಸೆಯಿಂದ ಲೋಭಕ್ಕೆ ಒಳಗಾಗಿ ಇದ್ದುದನ್ನು ಕಳೆದು ಕೊಳ್ಳುತ್ತಾರೆ.
ಬಡ-ಮಧ್ಯಮ ವರ್ಗದವರ ಮನೋಭಾವನೆಯನ್ನು ಅರಿತು ಕೊಂಡು ಕೆಲವು ಸಂಸ್ಥೆಗಳು “ನಿಮ್ಮ ಹಣವನ್ನು ಕೆಲವೇ ಸಮಯದಲ್ಲಿ ದ್ವಿಗುಣ ಮಾಡಿ ಕೊಡುತ್ತೇವೆ” ಎಂದು ಮೋಹಕವಾದ ಬಗೆ ಬಗೆಯ ಜಾಹಿರಾತುಗಳಿಂದ ಇಂತವರನ್ನು ಆಕರ್ಷಿಸುತ್ತಾರೆ. ಬಡ- ಮಧ್ಯಮ ವರ್ಗದವರು ತಾವು ಸಂಪಾದನೆ ಮಾಡಿದ ಸ್ವಲ್ಪ ಹಣವನ್ನು ಮತ್ತು ಅಲ್ಲಿ ಇಲ್ಲಿ ಸಾಲ ಮಾಡಿ ಇವರ ಮೋಸದ ಮಾತಿಗೆ ಬಲಿಯಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಹೆಣ್ಣುಮಕ್ಕಳ ಮದುವೆ ಮಾಡಿಸುವ ಅದಮ್ಯ ಆಸೆಯಿಂದ ಇಂತಹ ಸಂಸ್ಥೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ.
ಇವರ ಪ್ಲಾನಿಂಗ್ ಹೇಗೆ ಇರುತ್ತದೆ ಅಂದರೆ ಕೆಲವು ತಿಂಗಳುಗಳ ತನಕ ಸ್ವಲ್ಪ ಹಣವನ್ನು ನೀಡಿ ಲಾಭ ಬಂತು ಎಂದು ಹೇಳಿ ಹೂಡಿಕೆದಾರರಿಗೆ ಆಸೆಯನ್ನು ಹುಟ್ಟಿಸುತ್ತಾರೆ. ಬಡ ಮಧ್ಯಮ ವರ್ಗದವರು ತಮಗೆ ಸಿಕ್ಕಿದ ಹಣದಲ್ಲಿ ಸಂತೋಷಗೊಂಡು ತಮ್ಮ ಕುಟುಂಬದವರನ್ನು ಮತ್ತು ಗೆಳೆಯರನ್ನು ಇಂತಹ ಸಂಸ್ಥೆಗಳಿಗೆ ಸೇರಿಸುತ್ತಾರೆ.
ಹಾಗೆಯೇ ಇಂತಹ ಸಂಸ್ಥೆಯ ವ್ಯವಸ್ಥಾಪಕರು ಮತ್ತು ಅಲ್ಲಿ ಕೆಲಸ ಮಾಡುವ ಕೆಲವರು ಗ್ರಾಹಕರಿಗೆ ತಮ್ಮ ಮೇಲೆ ನಂಬಿಕೆ ಬರಲಿ ಎಂಬ ಉದ್ದೇಶದಿಂದ ತಲೆಯಲ್ಲಿ ಟೊಪ್ಪಿ, ಮುಖದಲ್ಲಿ ಗಡ್ಡ, ಹಣೆಯಲ್ಲಿ ದೊಡ್ಡ ನಾಮ, ಹೀಗೆ ತಮ್ಮ ಧಾರ್ಮಿಕ ತೆಯನ್ನು ತೋರಿ ತಾವು ಸಭ್ಯರು ಬಹಳ ಧಾರ್ಮಿಕರು ಎಂದು ಸಮಾಜದಲ್ಲಿ ಬಹಳ ಒಳ್ಳೆಯವರಂತೆ ಪೋಸ್ ಕೊಡುತ್ತಾರೆ.
ಯಾವುದೇ ನಿಜವಾದ ವ್ಯವಹಾರದಲ್ಲಿ ಯಾರು ಕೂಡ ಪುಕ್ಕಟೆಯಾಗಿ ಹಣವನ್ನು ಕೊಡಲಾರರು, ಜನರನ್ನು ಮೋಸ ಮಾಡಬೇಕು ಸುಲಭದಲ್ಲಿ ಹಣಗಳಿಸಿ ಮುಳುಗಬೇಕು ಎನ್ನುವುದೇ ಇಂತಹ 98% ಸಂಸ್ಥೆಗಳ ಉದ್ದೇಶವಾಗಿರುತ್ತದೆ. ಇದನ್ನು ತಿಳಿದೂ ಕೂಡ ಬುದ್ದಿವಂತರಾದ ಜನರು ಇವರ ಮಾತಿನ ಮೋಡಿಗೆ ಮರುಳಾಗಿ ಇವರ ಬಲೆಗೆ ಬೀಳುತ್ತಾರೆ.
ಒಂದು ಸಂಸ್ಥೆಯಲ್ಲಿ ಹಣವನ್ನು ಹೂಡುವಾಗ ಹೆಚ್ಚಿನವರು ತಮಗೆ ಇಂತಿಷ್ಟೇ ಲಾಭ ಬರಬೇಕು ಎಂಬ ಉದ್ದೇಶದಿಂದ ಹಣವನ್ನು ಹೂಡುತ್ತಾರೆ. ಆದರೆ ಇದು ತಪ್ಪು. ಏಕೆಂದರೆ ವ್ಯಾಪಾರ ಎಂದ ಮೇಲೆ ಲಾಭ ನಷ್ಟ ಸಮಾನವಾಗಿ ಕಂಡು ಹಣವನ್ನು ಹಾಕಬೇಕಾಗುತ್ತದೆ. ನಮಗೆ ಇಂತಿಷ್ಟೇ ಲಾಭ ಬರಬೇಕು ನಮಗೆ ನಷ್ಟ ಬರಬಾರದು ಎಂದು ಒಂದು ಸಂಸ್ಥೆಯಲ್ಲಿ ಹಣವನ್ನು ಹೂಡಿಕೆಯನ್ನು ಮಾಡಿದರೆ ಅದು ಬಡ್ಡಿಯ ವ್ಯಾಪಾರವಾಗಿ ಮಾರ್ಪಡುತ್ತದೆ. ಅದು ಇಸ್ಲಾಂ ಧರ್ಮದಲ್ಲಿ ನಿಷಿದ್ಧವೂ (ಹರಾಂ) ಆಗಿದೆ. ಇದರ ಬಗ್ಗೆ ಎಷ್ಟೇ ಮಾಹಿತಿ ನೀಡಿದರೂ ಜನರಿಗೆ ಬುದ್ದಿ ಬರುವುದಿಲ್ಲ. ಆದುದರಿಂದ ತಮ್ಮ ಹಣವನ್ನು ತಮ್ಮ ಮಕ್ಕಳ ಭವಿಷ್ಯಕ್ಕೆ ಬೇಕಾಗಿ ಇಂತಹ ಬ್ಲೇಡ್ ಕಂಪನಿಯಲ್ಲಿ ಹಾಕುವ ಮುಂಚೆ ನೂರು ಬಾರಿ ಯೋಚಿಸುವುದು ಒಳಿತು.
ಹಣವನ್ನು ಒಬ್ಬರ ಕೈಯಲ್ಲಿ ಕೊಟ್ಟು ಅವರಿಂದ ಲಾಭ ಪಡೆಯುವುದಕ್ಕಿಂತ ಸ್ವಂತ ಯಾವುದಾದರು ವ್ಯಾಪಾರ ಮಾಡುವುದಾಗಿದೆ ಉತ್ತಮ. ಹಾಗೆಯೇ ಇನ್ನೊಬ್ಬರ ಕೈಯಿಂದ ಹಣವನ್ನು ಪಡೆದು ನಿನಗೆ ಲಾಭ ಮಾಡಿಕೊಡುತ್ತೇನೆ ಎಂದು ಹೇಳಿ ರಿಸ್ಕ್ ನಂತಹ ವಿಷಯಕ್ಕೆ ಕೈ ಹಾಕಿದರೆ ಈಗಿನ ಮಾರುಕಟ್ಟೆಯಲ್ಲಿ ಅದೃಷ್ಟ ಕೈಹಿಡಿಯದಿದ್ದರೆ ಕೆಲವು ಸಮಯದಲ್ಲಿ ನಷ್ಟದ ಜೊತೆಗೆ ಸಾಲದಲ್ಲಿ ಮುಳುಗಬಹುದು. ಆದರಿಂದ ವ್ಯಾಪಾರದ ವಿಷಯದಲ್ಲಿ ತಿಳಿದವರಿಂದ ಸಲಹೆಯನ್ನು ಪಡೆಯುವುದು ಉತ್ತಮ.
ಏನೇ ಆದರೂ ಮನುಷ್ಯನ ವೇಷಭೂಷಣ ನೋಡಿ ಅವರ ಬಣ್ಣದ ಮಾತುಗಳನ್ನು ಕೇಳಿ ಹಣವನ್ನು ಕೊಡುವ ಮತ್ತು ಹೂಡಿಕೆ ಮಾಡುವ ಕಾಲದಲ್ಲಿ ನಾವು ಇಲ್ಲ ಎಂಬುವುದನ್ನು ನಾವೆಲ್ಲರೂ ಯೋಚಿಸಿದರೆ ಬಹಳ ಉತ್ತಮ. ಕಳೆದು ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ಕಷ್ಟ ಪಟ್ಟು ಸಂಪಾದಿಸಿದ ಹಣದ ಬಗ್ಗೆ ಎಚ್ಚರವಿರಲಿ ಎಂಬುದೇ ಈ ಬರಹದ ಉದ್ದೇಶ.
– ಅಕ್ಬರ್_ಅಲಿ_ಬಜ್ಪೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.