ವಿಶ್ವ ಕನ್ನಡಿಗ ನ್ಯೂಸ್ ತನ್ನ 9ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದೆ. ದೂರ ದೂರದ ಊರಿನ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತನ್ನೂರಿನ ಗಲ್ಲಿ ಗಲ್ಲಿಯ ವಿಚಾರಗಳನ್ನು ತಲುಪಿಸುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಯಶಸ್ವಿಯಾಗಿದೆ. ತಾಯ್ನಾಡಿನ ವಿಚಾರಗಳನ್ನು ತಿಳಿದುಕೊಳ್ಳುವ ಬಗ್ಗೆ ಜನರು ಸಹಜವಾಗಿಯೇ ಕುತೂಹಲಿಗಳಾಗಿರುತ್ತಾರೆ.
ಅಂತರ್ಜಾಲದ ಕೊಂಡಿಯಿಂದ ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಮೂಲೆಯ ಎಲ್ಲಾ ವಿಷಯಗಳು ಎಲ್ಲೆಡೆ ತಲುಪಿಸುತ್ತಾ, ಜನರ ಹೃದಯಗಳನ್ನು ಬೆಸೆಯುವ ಕೆಲಸವನ್ನು ವಿಶ್ವ ಕನ್ನಡಿಗ ನ್ಯೂಸ್ ಕಳೆದ 9 ವರ್ಷಗಳಿಂದ ಸದ್ದಿಲ್ಲದೆ ನಡೆಸುತ್ತಾ ಬಂದಿದೆ.
ದೂರಸಂಪರ್ಕ ಕ್ರಾಂತಿ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾದ ಕ್ರಾಂತಿಕಾರಕ ಅವಿಷ್ಕಾರಗಳಿಂದ ಎಲೆಕ್ಟ್ರಾನಿಕ್ ಮಾಧ್ಯಮ, ಪ್ರಿಂಟ್ ಮಾಧ್ಯಮಗಳಿಗಿಂತ ಹೆಚ್ಚು ಜನಪ್ರಿಯವಾಗಿರುವುದು ಬಹಳ ಸಂತಸದ ವಿಚಾರ. ಕ್ಷಣಾರ್ಧದಲ್ಲಿ ಮೊಬೈಲ್ ಮುಖಾಂತರ ತೋರು ಬೆರಳನ್ನು ಒತ್ತಿ ತನ್ನ ಊರಿನ, ತನ್ನ ಸಂಬಂಧಿಕರ, ತನ್ನ ಸ್ನೇಹಿತರ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಮತ್ತು ಜನರನ್ನು ಒಂದುಗೂಡಿಸುವ ವಿಚಾರದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಸಫಲತೆಯನ್ನು ಕಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಆರೋಗ್ಯ, ಕ್ರೀಡೆ, ರಾಜಕೀಯ, ಪ್ರಚಲಿತ ವಿಧ್ಯಮಾನ, ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ ಹೀಗೆ ಸಮಾಜದ ಎಲ್ಲಾ ವಿಚಾರಗಳ ಬಗ್ಗೆಯೂ ಪ್ರತಿಭಾವಂತ ಬರಹಕಾರರಿಂದ ಸೂಕ್ತ ಮಾಹಿತಿ ಜನರಿಗೆ ತಲುಪಿಸುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಯಶ್ವಸಿಯಾಗಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಇದರ ಜತೆಗೆ ಸಾವಿರಾರು ಉದಯೋನ್ಮಖ ಬರಹಗಾರರಿಗೆ ಒಂದು ಒಳ್ಳೆ ವೇದಿಕೆಯನ್ನು ವಿಶ್ವ ಕನ್ನಡಿಗ ನ್ಯೂಸ್ ನೀಡಿದೆ ಎಂದರೆ ತಪ್ಪಾಗಲಾರದು. ಹಳ್ಳಿಯಿಂದ ದಿಲ್ಲಿವರೆಗಿನ ಎಲ್ಲಾ ವಿಚಾರಗಳನ್ನು ಸಂಕ್ಷಿಪ್ತವಾಗಿ, ವಸ್ತು ನಿಷ್ಠವಾಗಿ ಜನರಿಗೆ ತಲುಪಿಸುವ ಆರೋಗ್ಯಪೂರ್ಣ ಕಾರ್ಯವನ್ನು ವಿಶ್ವ ಕನ್ನಡಿಗ ನ್ಯೂಸ್ ಸಾಮಾಜಿಕ ಕಳಕಳಿಯಿಂದ ಮಾಡುತ್ತಿರುವುದು ಬಹಳ ಸಂತಸದ ವಿಚಾರ.
ಕಾರ್ಯಾಂಗ, ನ್ಯಾಯಾಂಗ ಮತ್ತು ರಾಜ್ಯಾಂಗದ ಜೊತೆಗೆ ನಾಲ್ಕನೇ ಅಂಗವಾದ ಮಾಧ್ಯಮರಂಗದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಸಫಲವಾಗಿದೆ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ. ಒಂದು ಸುಂದರ, ಸುದೃಡ ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ತನ್ನದೇ ಆದ ಕೊಡುಗೆ ನೀಡಿರುವುದಂತೂ ಸರ್ವಕಾಲಿಕ ಸತ್ಯ. ಎಲ್ಲಾ ಓದುಗರ ಮತ್ತು ಲೇಖಕರ ಪರವಾಗಿ ವಿಶ್ವ ಕನ್ನಡಿಗ ನ್ಯೂಸ್ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು
ಡಾ| ಮುರಲೀ ಮೋಹನ್ ಚೂಂತಾರು. ಸಮಾದೇಷ್ಠರು ಜಿಲ್ಲಾ ಗೃಹ ರಕ್ಷಕ ದಳ ದ.ಕ. ಜಿಲ್ಲೆ, ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.