ಕವನಗಳು(ವಿಶ್ವಕನ್ನಡಿಗ ನ್ಯೂಸ್):
ಬದುಕು
ಬದುಕಂತೆ… ಬದುಕಬೇಕಂತೆ… ಮಳೆಬಿಲ್ಲಿನಿಂದ ಬಣ್ಣಗಳ ತಂದೆರೆಚಿ ಎಲ್ಲರೊಳಗೆ ಬೆರೆತು – ಕಲೆತು ಬದುಕಿಬಿಡಬೇಕು… ಆ ಸೂರ್ಯ – ಚಂದ್ರರ ಕಂಗಳ ಕಾಂತಿಯಾಗಿಸಿಕೊಂಡು ಕತ್ತಲೊಳಗಿನ ಬೆಳಗ ಹುಡುಕಿಕೊಂಡು ಬದುಕ ಸಂಭ್ರಮಿಸಬೇಕು… ಆ ಹಸಿರ ಸಿರಿಯ ಮೈ – ಮನದ ತುಂಬೆಲ್ಲಾ ಹೊದ್ದು ಪ್ರೀತಿಸುತ್ತಾ – ಪ್ರೇಮಿಸುತ್ತಾ, ಮೊಹಬ್ಬತ್ತಿನ ಸುಗ್ಗಿಯ ಆಚರಿಸುತ್ತಾ ಬದುಕಿಬಿಡಬೇಕು… ಆ ಮಳೆಹನಿಗಳ ಒಲವಿನ ಸ್ಪರ್ಶದಿ ಗರ್ಭ ಧರಿಸಿದ ಇಳೆ ಹರುಷದಿ ಮುಗುಳುನಗುತ್ತಾ ಸಂತಸವ – ಸಮೃದ್ಧಿಯ ಹಡೆಯುವಂತೆ… ಜಗದ ತುಂಬೆಲ್ಲಾ ನಕ್ಕು ನಲಿದಾಡುತ್ತಾ… ಅನುರಾಗದ ಸಿಹಿಯ ಹಂಚಿ, ಜೀವಗಳಲಿ ನವಚೈತನ್ಯದ ಕಳೆಯ ಪಸರಿಸಬೇಕು… ಆಶಾವಾದ – ಆತ್ಮವಿಶ್ವಾಸಗಳ ಜೊತೆಯಾಗಿಸಿಕೊಂಡು… ಮನೋಸ್ಥೈರ್ಯ – ದೃಢಸಂಕಲ್ಪ – ಭರವಸೆಗಳ ಅಸ್ತ್ರವಾಗಿಸಿಕೊಂಡು… ಬದುಕಿಬಿಡಬೇಕು… ಬಿರುಬಿಸಿಲಿನಲೂ ಮುಗುಳ್ನಗುವ ಚಿಗುರು ವಸಂತದಂತೆ… ಗುರಿಮುಟ್ಟಲು ಗರಿಬಿಚ್ಚಿ ಸ್ವಚ್ಛಂಧ ಆಕಾಶದೆತ್ತರಕ್ಕೆ ಹಾರುವ ಸ್ವಾತಂತ್ರ್ಯ ಹಕ್ಕಿಯಂತೆ… ಎಲ್ಲಾ ದೇಶ – ಧರ್ಮದ ಗಡಿಗಳ ಮೀರಿ ಬಿರುಗಾಳಿಯಾಗಿ ಬೀಸಿ ತಂಗಾಳಿಯಾಗುವಂತೆ… ಅನರ್ಥಗಳಲಿ ವ್ಯರ್ಥವಾಗದಂತೆ ಎಲ್ಲರೊಳಗೊಂದಾಗಿ… ಮನಸು – ಮನಸುಗಳ ಬೆಸೆದು ಅಂತರಾಳದಿ ಮನೆಮಾಡಿರುವ ಭಾವನೆಗಳ ಹೊಸೆದು… ಬದುಕನ್ನು ಬದುಕಬೇಕಿದೆ…
– ಭಾವನ. ಟಿ
ಕವನ ತುಂಬಾ ಚೆನ್ನಾಗಿದೆ ಸುಂದರವಾದ ಕವನ
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.