ಜಮ್ಮು ಕಾಶ್ಮೀರ(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಐದು ದಿನಗಳ ತೀವ್ರ ಸುರಕ್ಷತೆ,ದೂರವಾಣಿ ಸಂಪರ್ಕ ಹಾಗು ಅಂತರ್ಜಾಲ ಕಡಿತದ ಬಳಿಕ ಇಂದು ಮುಂಜಾನೆ ಭಾಗಶಃ ಸಂಪರ್ಕ ಮರು ಆರಂಭ ಗೊಂಡಿದೆ.ಶುಕ್ರವಾರದ ಜುಮಾ ನಮಾಜಿಗೆ ಎಂದಿನಂತೆ ಮಸೀದಿಗೆ ತೆರಳಬಹುದಾಗಿದೆ.ನಿನ್ನೆ ರಾತ್ರಿ ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ದಿ ಹಾಗು ಶಾಂತಿ ಸ್ಥಾಪನೆಯ ಭರವಸೆ ನೀಡಿದ್ದರು.ಮೆಹಬೂಬಾ ಮುಫ್ತಿ,ಒಮರ್ ಅಬ್ದುಲ್ಲಾ ಸೇರಿದಂತೆ 400 ಕ್ಕೂ ಅಧಿಕ ರಾಜಕೀಯ ನಾಯಕರು ಇನ್ನೂ ಗೃಹ ಬಂಧನದಲ್ಲಿ ಮುಂದುವರೆಯಲಿದ್ದಾರೆ.ಈದ್ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿರುವಂತೆ ರಾಜ್ಯದಲ್ಲಿ ಸುಸ್ಥಿರತೆ ನೀಡುವಲ್ಲಿ ಪ್ರಯತ್ನಿಸುವುದಾಗಿ ಸರಕಾರಿ ಮೂಲಗಳು ತಿಳಿಸಿದೆ.
