ಬಂಟ್ವಾಳ ವಿಕೋಪ ಸಂತ್ರಸ್ತರಿಗೆ 30 ಕೋಟಿ ಪರಿಹಾರ ಕೊಡಿ : ಸಿಎಂಗೆ ಶಾಸಕ ನಾಯಕ್ ಮನವಿ

ಬಂಟ್ವಾಳ ಬೈಪಾಸಿನಲ್ಲಿ ಕಾರು ನಿಲ್ಲಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ರಾಜೇಶ್ ನಾಯಕ್ ಪರಿಹಾರ ಕೋರಿ ಮನವಿ ಸಲ್ಲಿಸಿದರು.

 

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ನೆರೆ-ಪ್ರವಾಹದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿಗೆ 30 ಕೋಟಿ ರೂಪಾಯಿ ಪರಿಹಾರ ಧನ ಒದಗಿಸಿಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮನವಿ ಮಾಡಿದರು.

 

ಸೋಮವಾರ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಯಡಿಯೂರಪ್ಪ ಅವರನ್ನು ಬಂಟ್ವಾಳದಲ್ಲಿ ಭೇಟಿಯಾದ ಶಾಸಕ ರಾಜೇಶ್ ನಾಯಕ್ ಅವರಿಗೆ ಈ ಮನವಿ ನೀಡಿದ್ದು, ತಾಲೂಕಿನಲ್ಲಿ ಸುಮಾರು 500ಕ್ಕೂ ಅಧಿಕ ವಾಸದ ಮನೆಗಳಿಗೆ ಪ್ರವಾಹದಿಂದ ಹಾನಿಯಾಗಿದ್ದು, ಗುಡ್ಡ ಕುಸಿತದಿಂದ ಹಲವು ಮನೆಗಳು ಹಾನಿಗೊಂಡಿದೆ. ನೂರಾರು ಎಕ್ರೆ ಕೃಷಿ ಭೂಮಿ, ತೋಟಗಳು ಕೂಡಾ ಹಾನಿಗೊಂಡಿದ್ದು, ಗಾಳಿ-ಮಳೆಗೆ ಹಲವು ವಿದ್ಯುತ್ ಕಂಬಗಳಿಗೆ ಧರೆಗುರುಳಿವೆ. ರಸ್ತೆ, ಸೇತುವೆ, ತಡೆಗೋಡೆಗಳಿಗೆ ಹಾನಿ ಉಂಟಾಗಿದೆ. ಈ ಎಲ್ಲ ನಷ್ಟಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರೀ ಪ್ರಮಾಣದ ಹಣಕಾಸಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ 30 ಕೋಟಿ ರೂಪಾಯಿ ಮೊತ್ತವನ್ನು ಒದಗಿಸುವಂತೆ ರಾಜೇಶ್ ನಾಯಕ್ ಅವರು ಸಿಎಂಗೆ ನೀಡಿದ ಲಿಖಿತ ಮನವಿಯಲ್ಲಿ ಕೋರಿದ್ದಾರೆ.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...