ಮದುವೆ ಸಭಾಂಗಣದಲ್ಲಿ ಆತ್ಮಾಹುತಿ ದಾಳಿ: ಮಸಣವಾಯ್ತು ಕಾಬೂಲಿನ ದುಬೈ ಸಿಟಿ .


ಕಾಬೂಲ್,ಆಫ್ಘಾನಿಸ್ತಾನ್ (ವಿಶ್ವ ಕನ್ನಡಿಗ ನ್ಯೂಸ್):ದೇಶದ ರಾಜಧಾನಿ ನಗರದಲ್ಲಿ ದುಬೈ ಸಿಟಿ ಮದುವೆ ಹಾಲ್ ಒಂದರಲ್ಲಿ ಸ್ಪೋಟಿಸಿಕೊಂಡ ಆತ್ಮಾಹುತಿ ದಾಳಿಕೋರ ಮದುವೆ ಮನೆಯನ್ನು ಮಸಣ ಮನೆಯಾಗಿಸಿದನು.ರಾತ್ರಿ ನಡೆದ ಮದುವೆ ಸಮಾರಂಭದಲ್ಲಿ ಹತ್ತೂ ಮುಕ್ಕಾಲರ ಅವಧಿಯಲ್ಲಿ ನಡೆದ ಈ ದುರ್ಘಟನೆಗೆ ಈಗಾಗಲೇ 60 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಬಿಬಿಸಿ ವರದಿ ಪ್ರಕಾರ “ತಾಲಿಬಾನ್” ತಾನು ಈ ಕುಕೃತ್ಯ ನಡೆಸಿಲ್ಲ ಎಂದು ಹೇಳಿಕೊಂಡಿದೆ.ದಾಯಿಷ್ ಉಗ್ರ ಸಂಘಟನೆ ಕುಕೃತ್ಯದ ನೇತೃತ್ವದ ವಹಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.ಸಾವಿರಕ್ಕೂ ಅಧಿಕ ಮಂದಿ ಆಹ್ವಾನಿತರಾಗಿದ್ದ ಈ ಕಾರ್ಯಕ್ರಮದಲ್ಲಿ ದಾಳಿಕೋರ ರಿಸೆಪ್ಷನ್ ಬಳಿಯಲ್ಲೇ ಸ್ಪೋಟಿಸಿಕೊಂಡಿದ್ದ.ಮದುವೆ ಮನೆಯಲ್ಲಿ ಸಂಭ್ರಮದ ಬದಲು ಸೂತಕ ಮನೆ ಮಾಡಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...