ರಕ್ತದಾನದಿಂದ ಹೃದಯಗಳನ್ನು ಬೆಸೆಯಬಹುದು : ಡಾ|| ಚೂಂತಾರು

(www.vknews.com) : ರಕ್ತದಾನ ಎನ್ನುವುದು ಪವಿತ್ರವಾದ ದಾನವಾಗಿದ್ದು, ಒಬ್ಬ ದಾನಿ ನೀಡಿದ ರಕ್ತದಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಪ್ರತಿಯೊಬ್ಬರೂ ವರ್ಷದಲ್ಲಿ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಹೃದಯಗಳು ಬೆಸೆದು ಸಮಾಜದ ಸ್ವಾಸ್ಥ್ಯ ವೃದ್ಧಿಸುತ್ತದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ ಚೂಂತಾರು ನುಡಿದರು.

ದಿನಾಂಕ:25-08-2019ನೇ ಭಾನುವಾರದಂದು ಕೊಕ್ಕಡದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಇದರ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಡಾ|| ಚೂಂತಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪ್ಪಿನಂಗಡಿ ಹವ್ಯಕ ಮಂಡಲ, ಉಜಿರೆ ವಲಯ ಇದರ ನೇತೃತ್ವದಲ್ಲಿ ಶ್ರೀ ರಾಮಸೇವಾ ಟ್ರಸ್ಟ್, ಕೊಕ್ಕಡ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾ(ರಿ) ಮಂಗಳೂರು ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಈ ರಕ್ತದಾನ ಶಿಬಿರ ಜರುಗಿತು.

ಈ ಶಿಬಿರದ ಉದ್ಘಾಟನೆಯನ್ನು ಶ್ರೀ ರಾಘವ ಕೊಲ್ಲಾಜಿ ಪ್ರಗತಿಪರ ಕೃಷಿಕರು ಕೊಕ್ಕಡ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ|| ರಾಮಚಂದ್ರ ಭಟ್, ವೈದ್ಯಾಧಿಕಾರಿಗಳು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಉಪ್ಪಿನಂಗಡಿ ಹವ್ಯಕ ಮಂಡಲ ಇದರ ಕಾರ್ಯದರ್ಶಿ ಶ್ರೀ ವೇಣುಗೋಪಾಲ ಕೆದ್ಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕುಶಾಲಪ್ಪ ಗೌಡ ಹೂವಾಜಿ, ಅಧ್ಯಕ್ಷರು ಶ್ರೀರಾಮ ಸೇವಾ ಟ್ರಸ್ಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ರಕ್ತದಾನ ಮಾಡುವುದರ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 49 ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ಡಾ|| ಉದಯ ಸುಬ್ರಹ್ಮಣ್ಯ ಉಜಿರೆ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಗೃಹರಕ್ಷಕರ ದಿನಾಚರಣೆ – ಡಿಸೆಂಬರ್ 6

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್ ಮಂಗಳೂರು ಕಚೇರಿಯಲ್ಲಿ ದಿನಾಂಕ 06-12-2016ನೇ ಮಂಗಳವಾರದಂದು ಬೆಳಿಗ್ಗೆ 9.30 ರಿಂದ 1.00 ಗಂಟೆಯವರೆಗೆ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್, ಲೇಡಿ ಘೋಷನ್ ಆಸ್ಪತ್ರೆ, ಮಂಗಳೂರು ಮತ್ತು ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಲಯನೆಸ್ ಕ್ಲಬ್, ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ರಕ್ತದಾನ ಶಿಬಿರದಲ್ಲಿ ಗೃಹರಕ್ಷಕರು ಹಾಗೂ ಕಚೇರಿ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಶ್ರೀ ಮುರಳಿ ಮೋಹನ್ ಚುಂತಾರು ರವರು ತಿಳಿಸಿರುತ್ತಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...