(www.vknews.com) : ನಮ್ಮನ್ನಗಲಿದ ಸೈಯ್ಯದ್ ಯೂನುಸ್ ಸಾಹೇಬ್ ರವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಕೆಲವೊಂದು ಧೃಢವಾದ ನಿಲುವುಗಳಿಂದಾಗಿ ಮದ್ರಸಕ್ಕೆ ವಿಶೇಷವಾದ ಬಲವು ದೊರೆಯಿತು. ಈ ದೀನೀ ಕೇಂದ್ರದ ಬಗ್ಗೆ ಎಂತಹ ಸಮಸ್ಯೆಗಳು ಎದುರಾಗುತ್ತಿದ್ದರೂ, ಮುಫ್ತಿ ಸಾಹೇಬ್ ರವರೇ ತಾವು ಮುಂದೆ ಸಾಗಿರಿ. ಯಾವ ಕಾರಣಕ್ಕೂ ಧೈರ್ಯಗೆಡಬೇಡಿ . ನಾನು ನಿಮ್ಮ ಜೊತೆಗೆ ಇದ್ದೇನೆ ಎಂದು ನಿರಂತರವಾಗಿ ಹುರಿದುಂಬಿಸುತ್ತಿದ್ದರು. ಅವರು ಇಲ್ಲದ ಈ ದಿನಗಳನ್ನು ನಾನು ಸಹಿಸಲು ಸಾಧ್ಯವಿಲ್ಲ. ಮರಣದ ಕೊನೆಯತನಕ ತನ್ನ ಸಂಪೂರ್ಣ ಶಕ್ತಿಯನ್ನು ಮದ್ರಸದ ಅಭಿವೃಧ್ದಿಗಾಗಿ ವಿನಿಯೋಗಿಸಿದ್ದರು. ಮಾನವ ಪ್ರೇಮದ ಸಿಧ್ದಾಂತದ ಮೇಲೆ ಅವರು ನಿರಂತರ ತನ್ನನ್ನು ತೊಡಗಿಸಿದರು.
ಇಂತಹ ಧೀಮಂತರು ಅಪರೂಪದಲ್ಲಿ ಅಪರೂಪ. ಈ ಕಾರಣಕ್ಕಾಗಿ ಅವರ ಮರಣವು ಅತ್ಯಂತ ದುಃಖದಾಯಕವಾಗಿದೆ. ಅವರಿಗೆ 82 ವರ್ಷ ವಯಸ್ಸಾದರೂ ಯುವಕರ ಹಾಗೆ ಚಟುವಟಿಕಾನಿರತರಾಗಿದ್ದರು. ಸೇವಾಮನೋಭಾವವು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವರಿಗೆ ಮೂವರು ಹೆಣ್ಣು ಮಕ್ಕಳು. ಗಂಡು ಮಕ್ಕಳು ಇರಲಿಲ್ಲ. ಆದ್ದರಿಂದ ನಮ್ಮ ಸಂಸ್ಥೆಯ ಜವಾಬ್ದಾರಿಯ ಜೊತೆಗೆ ಮನೆಯ ಸಂಪೂರ್ಣ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಆದರೂ ಈ ಇಳಿ ವಯಸ್ಸಿನಲ್ಲೂ ತಮ್ಮ ಹುರುಪನ್ನು ಕಳಕೊಳ್ಳಲಿಲ್ಲ. ಅವರು ದೈಹಿಕವಾಗಿ ನಮ್ಮ ಜೊತೆಯಲ್ಲಿ ಇರದಿದ್ದರೂ, ಅವರಲ್ಲಿದ್ದ ಮೌಲ್ಯಗಳು ನಮ್ಮ ಜೊತೆ ಅವರನ್ನು ಜೀವಂತವಾಗಿರಿಸಿದೆ. ಅವರ ಜೀವನದಿಂದ ಕಲಿಯುವುದು ಬಹಳಷ್ಟಿದೆ. ಅಲ್ಲಾಹು ಅವರ ಎಲ್ಲಾ ಸೇವೆಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕ ಪ್ರತಿಫಲವನ್ನು ನೀಡಲಿ, ಶಾಶ್ವತವಾದ ಪರಲೋಕ ಜೀವನದಲ್ಲಿ ಅವರಿಗೆ ಜನ್ನತುಲ್ ಫಿರ್ ದೌಸನ್ನು ಕರುಣಿಸಲಿ, ಅವರ ಪರಿವಾರದವರಿಗೆ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ, ಆಮೀನ್ ಎಂದು, ದಾರುಲ್ ಉಲೂಮ್ ಅಲ್ ಮಆರಿಫ್, ಕರಿಯಕಲ್, ಕಾರ್ಕಳ , ಇದರ ಪ್ರಾಂಶುಪಾಲರಾದ ಮುಫ್ತಿ ಅಬ್ದುಲ್ ರಹಿಮಾನ್ , ಅಲ್ ಕಾಸಿಮೀಯವರು ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ತಾ 27/8/2019 ರ ಮಗ್ರಿಬ್ ನಮಾಝಿನ ನಂತರ ಈ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ, ಕಾರ್ಕಳ, ಮುಫ್ತಿ ಫೈಸಲ್ ಅಲ್ ಕಾಸಿಮೀ, ಮಂಗಳೂರು, ಹಾಫಿಝ್ ಫಿರೋಝ್ ಸಾಹೇಬ್, ಮುಫ್ತಿ ರಿಯಾಝ್ ಸಾಹೇಬ್ ಮೃತರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಫ್ತಿ ಇಮ್ದಾದುಲ್ಲಾ ಅಲ್ ಕಾಸಿಮೀ, ರವರು ನಿರೂಪಿಸಿದರು.
ವೇದಿಕೆಯಲ್ಲಿ ಮುಫ್ತಿ ಅರ್ಶದ್ ಸಾಹೇಬ್, ಅಲ್ ಕಾಸಿಮೀ, ಮುಫ್ತಿ ಝಫರ್ ಇಮಾಮ್ ಅಲ್ ಕಾಸಿಮೀ, ಮೌಲಾನ ಮುಮ್ತಾಝ್, ಹಾಫಿಝ್ ಅಮ್ಮಾರ್ ಮೂಡಬಿದ್ರೆ, ಮುಫ್ತಿ ಝಿಯಾಉರ್ ರಹ್ಮಾನ್ ಅಲ್ ಕಾಸಿಮೀ, ಮಾಸ್ಟರ್ ಮುಸ್ಲೆಹುದ್ದೀನ್ ರವರು ಉಪಸ್ಥಿತರಿದ್ದರು. ಊರಿನ ಗಣ್ಯರು ಸಭೆಯಲ್ಲಿ ಪಾಲುಗೊಂಡಿದ್ದರು. ಕೊನೆಗೆ ದುವಾಃದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ವರದಿ :ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ, ಕಾರ್ಕಳ.