ಬೆಂಗಳೂರಿನಲ್ಲಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇತ್ತಿಚೇಗೆ ನಮ್ಮನ್ನಗಲಿದ ಮಂಜನಾಡಿ ಅಲ್ ಮದೀನಾ ವಿದ್ಯಾಸಂಸ್ಥೆಯ ಶಿಲ್ಪಿ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣಾ ಸಮಾವೇಶ ಬೆಂಗಳೂರಿನ ಮರ್ಕಿನ್ಸ್ ಸಭಾಂಗಣದಲ್ಲಿ ನಡೆಯಿತು.

ಕೇರಳದ ಮರ್ಕಝ್ ಸಂಸ್ತೆಯ ಡೈರೆಕ್ಟರ್ ಡಾ.ಅಬ್ದುಲ್ ಹಕೀಂ ಅಲ್ ಅಝ್ಹರಿ ಅನುಸ್ಮರಣಾ ಭಾಷಣಗೈದರು.


ಸಯ್ಯದ್ ಇಬ್ರಾಹಿಂ ಭಾಫಖಿ ತಂಙಲ್ ಕೊಯಿಲಾಂಡಿ ದು ಆ ನಿರ್ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು ಟಿ ಇಫ್ತಿಕಾರ್ ಅಲಿ, ಅಲ್-ಮದೀನಾದ ಮ್ಯಾನೇಜೆರ್ ಅಬ್ದುಲ್ ಖಾದರ್ ಸಖಾಫಿ, ಅಲ್ ಮದೀನಾ ಮುದರ್ರಿಸ್ ಮುನೀರ್ ಕಾಮಿಲ್ ಸಖಾಫಿ, ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ಸಮಿತಿ ಸದಸ್ಯ ಬಿ ಎಮ್ ಉಮರ್ ಹಾಜಿ, ಅಲ್ ಮದೀನಾ ಸಂಸ್ಥೆಯ ಬೆಂಗಳೂರು ಜಿಲ್ಲಾದ್ಯಕ್ಷ ತಸ್ಲೀಲ್ ,ವಾಹಿದ್ ಕಯರ್ಕಾನ್ ಉಪಸ್ಥಿತರಿದ್ದರು.
ತಾಜುದ್ದೀನ್ ಫಾಳಿಲಿ ಸ್ವಾಗತಿಸಿ ಹಬೀಬ್ ನಾಳ ವಂದಿಸಿದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...