ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ವತಿಯಿಂದ ಸ್ವಾತಂತ್ರ್ಯದ ಕಾವಲುಗಾರರಾಗಿ ಎಂಬ ಜನಜಾಗೃತಿ ಸಭೆ

ಕತಾರ್(ವಿಶ್ವಕನ್ನಡಿಗ ನ್ಯೂಸ್): QISF ಆಯೋಜಿಸಿದ್ದ ಕಾರ್ನರ್ ಮೀಟ್ ಕಾರ್ಯಕ್ರಮವು ಆಗಸ್ಟ್ 31ರ ಶನಿವಾರ ಕತಾರ್ ನ ಅಲ್ ಖೋರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕತಾರ್ ಇಂಡಿಯನ್ ಸೋಶಿಯಲ್ ಫೋರಂ (QISF) ನ ರಾಜ್ಯಾಧ್ಯಕ್ಷರಾದ ನಝೀರ್ ಪಾಷರವರು ಪ್ರಸ್ತಾವಿಕ ಭಾಷಣದೊಂದಿಗೆ QISF ನ ಕಾರ್ಯವೈಖರಿಯ ಬಗ್ಗೆ ಕಿರು ಪರಿಚಯ ನೀಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ಗುಂಪುಹತ್ಯೆ, UAPA ಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಹಾಗೂ NRC ಎಂಬ ಕಾಯ್ದೆಯ ವಿಚಾರವಾಗಿ ಶಾಕೀರ್ ಪುಂಜಲಕಟ್ಟೆಯವರು ಸವಿಸ್ತಾರವಾಗಿ ವಿವರಿಸಿದರು.

ಮೋದಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ, ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ದ ಹೋರಾಟದ ರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು. ಮಾತ್ರವಲ್ಲ ಜೈ ಶ್ರೀರಾಮ್ ಹೆಸರಿನಲ್ಲಿ ಹಾಗೂ‌ ಗೋಹತ್ಯೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ವಿರುದ್ದ, ಶಕ್ತವಾದ ಪ್ರತಿರೋಧ ಒಡ್ಡುವುದು ಇಂದಿನ ಪ್ರಸಕ್ತ ಸನ್ನಿವೇಶದಲ್ಲಿ ಅತಿ ಅವಶ್ಯಕ ಎಂದು ಹೇಳಿದರು.

ವಂದನಾರ್ಪಣೆಯ ಮೂಲಕ ಕಾರ್ಯಕ್ರಮವು ಮುಕ್ತಾಯಗೊಂಡಿತು. ಇರ್ಷಾದ್ ಕುಳಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ QISF ನ‌ ಕಾರ್ಯಕರ್ತರು ಭಾಗವಹಿಸಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...