ವಿದ್ಯಾರ್ಥಿ ಮನ ಸೆಳದ ಸುಡೆಂಟ್ಸ್ ಮೋಟಿವೇಶನ್ ಕ್ಯಾಂಪ್, ಓದು ಗುಣ ಮನುಷ್ಯನನ್ನು ಬೆಳಸುತ್ತದೆ: ಡಾ|ಸಲಾಂ ಓಮಶ್ಶೇರಿ

ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಬಾಲ ಸಂಘ ಎಸ್ ಬಿ ಎಸ್ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಗಾಂಧಿನಗರ ಸುಳ್ಯ ಇದರ ವತಿಯಿಂದ ಸ್ಟುಡೆಂಟ್ಸ್ ಮೋಟಿವೇಶನ್ ಕ್ಯಾಂಪ್ ನಡೆಯಿತು.

ಖ್ಯಾತ ಮನ ಶಾಸ್ತ್ರ ತಜ್ಞ,ಅಂತರಾಷ್ಪ್ರೀಯ ತರಬೇತುದಾರ ಡಾ|ಸಲಾಂ ಓಮಶ್ಶೇರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಪ್ರೊಜಕ್ಟ್ ಮೂಲಕ ವಿದ್ಯಾರ್ಥಿ ಶೈಕ್ಷಣಿಕ ಕ್ಷೇತ್ರದ,ಸಾಮಾಜಿಕ ರಂಗದ ಅಭಿವೃದ್ಧಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿಸಿದರು.ಓದು ಗುಣ ಮನುಷ್ಯನನ್ನು ಬೆಳಸುತ್ತದೆ ಎಂದು ಸಲಹೆ ನೀಡಿದರು. ಮದ್ರಸ ಮುಖ್ಯೋಪಾದ್ಯಯರಾದ ಇಬ್ರಾಹಿಂ ಸಖಾಫಿ ಪುಂಡೂರ್ ಅಧ್ಯಕ್ಷತೆ ವಹಿಸಿ,ಅಸಿಸ್ಟೆಂಟ್ ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಲಂ ಉದ್ಘಾಟಿಸಿದರು.

ಅದ್ಯಾಪಕರಾದ ಶೌಖತ್ ಅಲಿ ಅಲ್ ಅಮಾನಿ ವಯನಾಡ್,ಅಬ್ದುಲ್ ಖಾದರ್ ಮದನಿ ಅಜ್ಜಾವರ,ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ,ಹುಸೈನಾರ್ ಮದನಿ ಕುಂಜಿಲ,ನಿಝಾರ್ ಸಖಾಫಿ ಮುಡೂರು,ಅಬ್ದುರ್ರಹ್ಮಾನ್ ಸಅದಿ ಕರ್ನೂರು ಉಪಸ್ಥಿತರಿದ್ದರು.ಎಸ್ ಬಿ ಎಸ್ ಗೌರವ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ,ಮುದಬ್ಬಿರ್ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ವಂದಿಸಿದರು. ವಿದ್ಯಾರ್ಥಿ ಸಹಲ್ ಖಿರಾಅತ್ ಪಠಿಸಿ,ಹಂಝತುಲ್ ಕರ್ರಾರ್ ಪದ್ಯ ಆಲಾಪಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...