(ವಿಶ್ವ ಕನ್ನಡಿಗ ನ್ಯೂಸ್) : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 39ನೇ ಶ್ರಮದಾನವನ್ನು ಊರ್ವಾ ಬೋಳೂರು ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು. 1-9-2019 ಭಾನುವಾರ ಮುಂಜಾನೆ 7-30ಕ್ಕೆ ಉರ್ವಾ ನೂತನ ಮಾರುಕಟ್ಟೆ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಶ್ರೀ ಅರುಣಾಂಗ್ಶು ಗಿರಿ, ಪೆÇೀಲಿಸ್ ಉಪಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಮಂಗಳೂರು ಇವರು ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭಗೊಳಿಸಿದರು. ಸ್ವಚ್ಛತಾ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಸುಭಾಶ್ಚಂದ್ರ, ಶೇಷಪ್ಪ ಅಮೀನ್, ಸ್ಮಿತಾ ಶೆಣೈ, ವಾಸಂತಿ ನಾಯಕ್, ಮಧುಚಂದ್ರ ಅಡ್ಯಂತಾಯ, ಪೆÇ್ರೀ. ಸತೀಶ್ ಭಟ್, ಕಿರಣ ಫರ್ನಾಂಡಿಸ್, ಪ್ರವೀಣ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಅರುಣಾಂಗ್ಶು ಅವರು “ಮಂಗಳೂರು ನಗರ ಸ್ವಚ್ಛತೆಯಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕದ ಅನ್ಯಭಾಗಗಳಿಗೆ ಹೋಲಿಸಿದರೆ ಕರಾವಳಿಯ ಜನರು ಪ್ರಜ್ಞಾವಂತರು, ಸುಶಿಕ್ಷಿತರು. ಶುಚಿತ್ವಕ್ಕೆ ಆದ್ಯತೆಯನ್ನು ನೀಡಿದ ಹೆಗ್ಗಳಿಕೆ ಈ ಭಾಗದ ಜನರಿಗೆ ಸಲ್ಲಬೇಕು. ಇಂತಹ ಅಭಿಯಾನಗಳು ಸ್ವಚ್ಛತೆಗೆ ಮತ್ತಷ್ಟು ಹೆಚ್ಚಿನ ಶಕ್ತಿಯನ್ನು ತುಂಬಬಲ್ಲವು. ರಾಮಕೃಷ್ಣ ಮಿಷನ್ ವತಿಯಿಂದ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನಕ್ಕೆ ಅಗತ್ಯವಿದ್ದಡೆಯಲ್ಲಿ ಇಲಾಖೆಯಿಂದ ಸರ್ವರೀತಿಯಿಂದಲೂ ಸಹಕಾರವನ್ನು ನೀಡಲಾಗುವುದು. ಈ ಸ್ವಚ್ಛತಾ ಕೈಂಕರ್ಯ ಯಶಸ್ವಿಯಾಗಲಿ” ಎಂದು ತಿಳಿಸಿ ಶುಭಹಾರೈಸಿದರು.
ಸ್ವಚ್ಛತೆ: 39ನೇ ಶ್ರಮದಾನದ ಪ್ರಯುಕ್ತ ಒಟ್ಟು ನಾಲ್ಕು ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಎಂದಿನಂತೆ ತ್ಯಾಜ್ಯ ಬೀಳುತ್ತಿದ್ದ ನಾಲ್ಕು ಸ್ಥಳಗಳನ್ನು ಗುರುತಿಸಿ ತ್ಯಾಜ್ಯ ತೆರವುಗೊಳಿಸಲಾಯಿತು. ಮೊದಲನೆಯದಾಗಿ ಉರ್ವಾ ಕೊರಗಜ್ಜ ದೈವಸ್ಥಾನದ ಬಳಿಯಿದ್ದ ಕಸದ ರಾಶಿಯನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಎರಡನೆಯದಾಗಿ ಉರ್ವಾ ಮಾರುಕಟ್ಟೆಯ ಹಿಂಭಾದಲ್ಲಿದ್ದ ತ್ಯಾಜ್ಯ ಹಾಗೂ ಕಲ್ಲುಮಣ್ಣುಗಳ ರಾಶಿಯನ್ನು ಜೆಸಿಬಿ ಸಹಾಯದಿಂದ ತೆಗೆಯಲಾಯಿತು. ಮೂರನೆಯದಾಗಿ ಸುಲ್ತಾನ ಬತ್ತೇರಿಯ ಹತ್ತಿರದಲ್ಲಿ ರಸ್ತೆಯ ಬದಿ ಬಿದ್ದುಕೊಂಡಿದ್ದ ಕೊಳೆ ಕಸವನ್ನು ತೆಗೆದು ಶುಚಿಗೊಳಿಸಲಾಯಿತು.
ನಾಲ್ಕನೆಯದಾಗಿ ಅಳಕೆ ತೋಡಿನ ಬಳಿಯಿದ್ದ ಕಸದರಾಶಿಯನ್ನು ತೆರವು ಮಾಡಲಾಯಿತು. ಜೊತೆಗೆ ಊರ್ವಾ ಮಾರುಕಟ್ಟೆ ಮುಂಭಾಗ ಹಾಗೂ ಅಕ್ಕಪಕ್ಕದ ರಸ್ತೆಗಳನ್ನು ಗುಡಿಸಿ ಹಸನು ಮಾಡಲಾಯಿತು. ಅಭಿಯಾನದ ಪ್ರಧಾನ ಸಂಯೋಜಕರಾದ ಉಮಾನಾಥ್ ಕೋಟೆಕಾರ್, ದಿಲ್ರಾಜ್ ಆಳ್ವ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು. ನಿಟ್ಟೆ ಫಿಸಿಯೊಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾದರು. ಸುಭೋದಯ ಆಳ್ವ, ಸುರೇಶ ಶೆಟ್ಟಿ ಹಾಗೂ ಇತರ ಕಾರ್ಯಕರ್ತರು ಸುತ್ತಮುತ್ತಲಿನ ಅಂಗಡಿ ಹಾಗೂ ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು.
ಕೊನೆಯದಾಗಿ ಕಳೆದೆರಡು ವಾರಗಳಿಂದ ಹಂಪಣಕಟ್ಟೆಯಲ್ಲಿ ಕೈಗೊಳ್ಳಲಾಗುತ್ತಿರುವ ಚಿತ್ರ ಕಲಾಕೃತಿಗಳ ಸ್ವಚ್ಛತೆಯನ್ನು ಈ ವಾರವೂ ಮುಂದುವರೆಸಲಾಯಿತು.
ಸ್ವಚ್ಛತೆಗಾಗಿ ಜಾದೂ 2019: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ವಚ್ಛತೆಗಾಗಿ ಜಾದೂ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸಿದ್ಧ ಜಾದೂ ಮಾಂತ್ರಿಕ ಕುದ್ರೋಳಿ ಗಣೇಶ್ ನೇತೃತ್ವದಲ್ಲಿ ಇಂದಿನವರೆಗೆ 95 ಪ್ರೌಢಶಾಲೆಗಳಲ್ಲಿ 95 ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಯ ಮಹತ್ವ, ಕಸದಿಂದ ರಸ, ಇರುವುದೊಂದೆ ಭೂಮಿ, ಮರುಬಳಕೆ ಮರು ಉತ್ಪಾದನೆಯ ಮಹತ್ವ ಮತ್ತಿತರ ವಿಷಯಗಳನ್ನು ಜಾದೂವಿನ ಮುಖಾಂತರ ತಿಳಿಸುವ ವಿಶೇಷ ಪ್ರಯೋಗ ಮಾಡಲಾಯಿತು. ಜಾದೂ ಕಲೆಯ ಮೂಲಕ ಮಕ್ಕಳ ಮನಸ್ಸನ್ನು ರಂಜಿಸಿ ಸ್ವಚ್ಛತೆಯ ಕಲ್ಪನೆಯನ್ನು ಎಳೆಯ ಮನಸ್ಸಿನಲ್ಲಿ ಬಿತ್ತುವುದು ಈ ಜಾದೂ ಅಭಿಯಾನದ ಉದ್ದೇಶ. ಈ ಆವೃತ್ತಿಯಲ್ಲಿ ಕಳೆದ ವರ್ಷದಂತೆ ಒಟ್ಟು ನೂರು ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಸ್ವಚ್ಛತಾ ಸ್ಪರ್ಧಾ 2019: ಸ್ವಚ್ಛ ಮನಸ್ಸು ಅಭಿಯಾನದಡಿ ಆಗಷ್ಟ ತಿಂಗಳಲ್ಲಿ ಒಟ್ಟು 120 ಶಾಲೆಗಳಲ್ಲಿ “ಸ್ವಚ್ಛತಾ ಸ್ಪರ್ಧಾ” ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸುಮಾರು ಹನ್ನೊಂದು ಸಾವಿರ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸ್ವಚ್ಛತಾ ಸ್ಪರ್ಧಾ ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಲಾಯಿತು. “ಸ್ವಚ್ಛ ಮನಸು-ಸ್ವಚ್ಛ ಭಾರತ” ಎಂಬ ಪರಿಕಲ್ಪನೆಯನ್ನು ಚಿತ್ರಕಲಾ ಸ್ಪರ್ಧೆಗೆ ಅಳವಡಿಸಿದ್ದರೆ ಪ್ರಬಂಧ ಸ್ಪರ್ಧೆಗೆ “ಸ್ವಚ್ಛತೆ- ವಿದ್ಯಾರ್ಥಿಯ ಜವಾಬ್ದಾರಿ ಹಾಗೂ ಕೊಡುಗೆ” ಎಂಬ ಪರಿಕಲ್ಪನೆಯನ್ನು ಕೊಡಲಾಗಿತ್ತು. ಒಟ್ಟು 65 ಸಂಪನ್ಮೂಲ ವ್ಯಕ್ತಿಗಳು ಈ ಸ್ಪರ್ಧೆಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಸ್ವಚ್ಛ ಮನಸ್ಸು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾರ್ಗದರ್ಶನ ನೀಡಿದರು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪೆÇ್ರೀತ್ಸಾಹಿಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.