ಪುತ್ತೂರು ತಾಲೂಕುಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟ: ಹುಡುಗರಲ್ಲಿ ಉಪ್ಪಿನಂಗಡಿ ಹಾಗೂ ಹುಡುಗಿಯರಲ್ಲಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜುಗಳು ಪ್ರಥಮ

(www.vknews. in)ನರೇಂದ್ರ ಪದವಿ ಪೂರ್ವ ಕಾಲೇಜು ಪುತ್ತೂರು ತೆಂಕಿಲ ಇದರ ಆಶ್ರಯದಲ್ಲಿ ನಡೆದಂತಹ  ಪುತ್ತೂರು ತಾಲೂಕುಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ  ಕಬಡ್ಡಿ ಪಂದ್ಯಾಟದಲ್ಲಿ ಪ್ರತಿಷ್ಠಿತ 20 ಕಾಲೇಜುಗಳ ಹುಡುಗರ ತಂಡ ಹಾಗೂ 10 ಹುಡುಗಿಯರ ತಂಡಗಳು ಭಾಗವಹಿಸಿದ್ದವು. ರಾಮಕುಂಜ ಪದವಿ ಪೂರ್ವ ಕಾಲೇಜಿನ ಹುಡುಗಿಯರ ತಂಡ ಹಾಗೂ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಹುಡುಗಿಯರ ತಂಡಗಳ ಮದ್ಯೆ ನಡೆದಂತಹ ಅಂತಿಮ ಹಣಾಹಣಿ ಯಲ್ಲಿ ಕಡಬದ ಹುಡುಗಿಯರ ತಂಡವು ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆ ಆಯಿತು.

ಅದೇ ರೀತಿ ರೋಮಾಂಚಕಾರಿಯಾದ ಹುಡುಗರ ಪಂದ್ಯಾಟವು ಕಳೆದ ವರ್ಷದ ಫೈನಲಿಷ್ಟ್ ಗಳಾದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸೈ0ಟ್ ಜೋಕಿಮ್ಸ್ ಕಡಬ ತಂಡಗಳ ನಡುವೆ ನಡೆಯಿತು. ಅಂತಿಮ 5 ಸೆಕೆಂಡ್ ವರೆಗೂ      ಸಮಬಲದೊಂದಿಗೆ ಮುನ್ನೇರಿದ      ತಂಡಗಳು ,ಉಪ್ಪಿನಂಗಡಿ ತಂಡದ ಆಟಗಾರರ ಅದ್ಭುತ ಟಾಕಲ್ ನೊಂದಿಗೆ ಒಂದು ಅಂಕದಿಂದ ವಿಜಯಿಗಳಾದದ್ದು ನೋಡುಗರಿಗೆ ರಸದೌತಣ ವನ್ನು ನೀಡಿತು.

ಇದರೊಂದಿಗೆ ಕಳೆದ ವರ್ಷ ಸೋಲನ್ನು ನೀಡಿದ ಜೋಕಿಮ್ಸ್ ತಂಡಕ್ಕೆ ಈ ಮೂಲಕ ಸರಕಾರಿ ಪದವಿ ಪೂರ್ವ ವಿದ್ಯಾಲಯವು ಮಧುರವಾದ ಹಾಗೂ ಅಷ್ಟೇ ರೋಮಾಂಚಕಾರಿಯಾದ ಸೋಲನ್ನು ಸಮ್ಮಾನಿಸಿತು  ಇದರೊಂದಿಗೆ ಸುಳ್ಯದಲ್ಲಿ 19ನೇ ತಾರೀಕಿಗೆ ನಡೆಯುವ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ತಂಡ ಅರ್ಹತೆಯನ್ನು ಪಡೆಯಿತು

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...