ಕಂಬಲಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಅಳಿಕೆಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

(www.vknews .in) .:ವಿಟ್ಲ ಜೇಸಿಸ್ ಸಂಸ್ಥೆಯಲ್ಲಿ ನಡೆದ ಕಂಬಲಬೆಟ್ಟು ಮತ್ತು ವಿಟ್ಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಳಿಕೆಮಜಲು ಶಾಲೆಯು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು

ಹಿರಿಯರ ವಿಭಾಗದಲ್ಲಿ 4ನೇ ಸ್ಥಾನವನ್ನು ಪಡೆದಿದೆ. ಹಿರಿಯರ ವಿಭಾಗ ರಿಶಾನ್- ಚಿತ್ರಕಲೆ ,ಎಂ ಆರ್ ಮೊಕ್ಷಿತ್- ತುಳು ಕಂಠ ಪಾಠ ,ಶಿಶಿರ್ ಎ ಪಿ-ಇಂಗ್ಲಿಷ್ ಕಂಠ ಪಾಠ, ಮಹಮ್ಮದ್ ಆಶಿಕ್-ತಮಿಳು ಕಂಠ ಪಾಠ ಗಳಲ್ಲಿ ಪ್ರಥಮ ಸ್ಥಾನ , ಸಾಲಿಮ -ಸಂಸ್ಕೃತ ಕಂಠ ಪಾಠ ,ಪವನ್-ಹಿಂದಿ ಕಂಠ ಪಾಠ ,ಹಿತಾಶ್ರೀ – ಮರಾಠಿ ಕಂಠ ಪಾಠ, ಪಿ ಯಕ್ಷಿತಾ ತೆಲುಗು ಕಂಠ ಪಾಠ ಗಳಲ್ಲಿ ದ್ವಿತೀಯ ಸ್ಥಾನ ಹಾಗೂ ರಿಶಾನ್ ತಂಡ ಕವ್ವಾಲಿಯಲ್ಲಿ ಮತ್ತು ಮಹಮ್ಮದ್ ಆಶಿಕ್ ಕನ್ನಡ ಕಂಠ ಪಾಠ ದಲ್ಲಿ ತೃತೀಯ ಸ್ಥಾನವನ್ನು ಪಡಕೊಂಡು ಹಿರಿಯರ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಪಡಕೊಂಡಿದ್ದಾರೆ .

ಕಿರಿಯರ ವಿಭಾಗದಲ್ಲಿ ಶಹೀಮ್ ಅಹಮ್ಮದ್ ತಂಡ- ದೇಶಭಕ್ತಿ ಗೀತೆ, ಗಹನ ವರ್ಣಿಕ- ಭಕ್ತಿಗೀತೆ, ಆಯಿಷಾ -ಮರಾಠಿ ಕಂಠ ಪಾಠ ,ಮಹಮ್ಮದ್ ನಾಜಿಮ್ -ಉರ್ದು ಕಂಠ ಪಾಠ, ರಿಯಾನ -ಇಂಗ್ಲಿಷ್ ಕಂಠ ಪಾಠ ,ಗಹನ ವರ್ಣಿಕಾ-ಲಘು ಸಂಗೀತದಲ್ಲಿ ಪ್ರಥಮ ಸ್ಥಾನವನ್ನು , ಮಹಮ್ಮದ್ ಹಾತೀಬ್ ತಂಡ- ಕವ್ವಾಲಿ , ರಿಯಾನ -ಅಭಿನಯ ಗೀತೆ ಮತ್ತು ಸಂಸ್ಕೃತ ಕಂಠ ಪಾಠ ,ಶಹೀಮ್ ಅಹಮ್ಮದ್ -ತೆಲುಗು ಕಂಠ ಪಾಠ, ಆಯಿಷಾ- ತಮಿಳು ಕಂಠ ಪಾಠ ಗಳಲ್ಲಿ ದ್ವಿತೀಯ ಸ್ಥಾನ ಮತ್ತು ಮಹಮ್ಮದ್ ಫಾಜಿಲ್ -ಧಾರ್ಮಿಕ ಪಠಣ ,ಮಹಮ್ಮದ್ ನಾಜಿಮ್ ಚಿತ್ರ ಕಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಕಿರಿಯರ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪ್ರಥಮ ಸ್ಥಾನವನ್ನು ಪಡೆದ ಎಲ್ಲಾ ಮಕ್ಕಳು ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧೆಸಲು ಅರ್ಹತೆಯನ್ನು ಪಡೆದಿರುತ್ತಾರೆ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...