(ವಿಶ್ವ ಕನ್ನಡಿಗ ನ್ಯೂಸ್ ,www.vknews.in): ಹಾಲಿ ಚಾಂಪಿಯನ್ ಭಾರತ ಅಂಡರ್ -19 ತಂಡ ಏಳನೇ ಬಾರಿಗೆ ಏಷ್ಯಾ ಕಪ್ ಗೆದ್ದುಕೊಂಡಿದೆ . ಇಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ಬಂಗ್ಲಾದೇಶವನ್ನು 5 ರನ್ ಗಳ ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು .ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್.
18ರ ಹರೆಯದ ಅಥರ್ವನ ತಾಯಿ ವೈದೇಹಿ ಅಂಕೋಲೆಕರ್ ಮುಂಬೈ ನಲ್ಲಿ “ಬೆಸ್ಟ್ ” ಬಸ್ ನ ನಿರ್ವಾಹಕಿ . ಟೀಮ್ ಇಂಡಿಯಾಗೆ ಆಯ್ಕೆಯಾದಾಗಲೇ ಎಲ್ಲರ ಗಮನ ಸೆಳಿದಿದ್ದ ಅಥರ್ವ ಅಂಕೋಲೆಕರ್ ಇಂದು ಬಾಂಗ್ಲಾದೇಶದ ವಿರುದ್ದದ ಫೈನಲ್ ಪಂದ್ಯದಲ್ಲಿ ಪ್ರಮುಖ ಐದು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ .