ದಾಖಲೆಯ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾದ SSF ತೊಕ್ಕೊಟ್ಟು ಸೆಕ್ಟರ್

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): SSF ತೊಕ್ಕೊಟ್ಟು ಸೆಕ್ಟರ್ ಹಾಗೂ SSF ಮದನಿನಗರ ಶಾಖೆಯ ಜಂಟಿ ಆಶ್ರಯದಲ್ಲಿ ಐತಿಹಾಸಿಕವಾದ ಬೃಹತ್ ರಕ್ತದಾನ ಶಿಬಿರವು ಯಾನೆಪೋಯ, ಕಣಚೂರು, ಕೆ.ಎಸ್.ಹೆಗ್ಡೆ ಹಾಗೂ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಗಳ ಸಹಭಾಗಿತ್ವದೊಂದಿಗೆ ಅದಿತ್ಯವಾರ ಸೆಪ್ಟೆಂಬರ್ 15 ರಂದು ಕುತ್ತಾರು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ನಡೆಸಲಾಯಿತು.

ರಕ್ತದಾನದಲ್ಲಿ ದ.ಕ ಜಿಲ್ಲೆಯಲ್ಲೇ ಕ್ರಾಂತಿಕಾರಿ ಸೇವೆ ನೀಡುತ್ತಿರುವ ಬ್ಲಡ್ ಸೈಬೋ ಅದೆಷ್ಟೋ ಅರ್ಹ ರೋಗಿಗಳಿಗೆ ಕ್ಲಪ್ತ ಸಮಯಕ್ಕೆ ರಕ್ತದ ಏರ್ಪಾಡು ಮಾಡಿಸಿ ಜೀವಗಳನ್ನು ರಕ್ಷಿಸಿದೆ. ದ.ಕ.ಜಿಲ್ಲಾ ಬ್ಲಡ್ ಸೈಬೋ ಇದರೆ 115ನೇ ರಕ್ತದಾನ ಶಿಬಿರದಲ್ಲಿ ಸಾಂತ್ವನದಲ್ಲಿಯೂ, ಸಾಮಜಿಕ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುವ ತೊಕ್ಕೊಟ್ಟು ಸೆಕ್ಟರ್, ಇದೀಗ ದ.ಕ. ಜಿಲ್ಲಾ ಬ್ಲಡ್ ಸೈಬೋ ಇತಿಹಾಸದಲ್ಲಿಯೇ ದಾಖಲೆಯ 170 ರಕ್ತದಾನ ಮಾಡಿ ರಕ್ತದಾನದಲ್ಲಿಯೂ ಎಲ್ಲರಿಗೂ ಮಾದರಿಯಾಯಿತು.

ಸೆಕ್ಟರ್ ಉಪಾಧ್ಯಕ್ಷರಾದ ರಝಾಖ್ ಸಅದಿ ಉಸ್ತಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬಹುಮಾನ್ಯರಾದ ಇನ್ನೋರ್ವ ಸೆಕ್ಟರ್ ಉಪಾಧ್ಯಕ್ಷರಾದ ಇಲ್ಯಾಸ್ ಸಖಾಫಿ ಉಸ್ತಾದರ ದುಆ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ಸ್ವಾಗತಿಸಿದರು. ಹಾಗೆಯೇ ದ.ಕ ಜಿಲ್ಲಾ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್ಳರಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. SSF ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ದ.ಕ. ಬ್ಲಡ್ ಸೈಬೋ ಇದರ ಸಂಚಾಲಕರಾಗಿರುವ ಕರೀಂ ಕದ್ಕಾರ್ ರವರು ಬ್ಲಡ್ ಸೈಬೋ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. SSF ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಸಖಾಫಿ, ಉಳ್ಳಾಲ ಡಿವಿಶನ್ ಅಧ್ಯಕ್ಷ ಖ಼ುಬೈಬ್ ತಂಗಳ್, ಡಿವಿಶನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಡಿವಿಶನ್ ಸೈಬೋ ಸಂಚಾಲಕರಾಗಿರುವ ಹಕೀಂ ಪೂಮನ್, ಡಿವಿಶನ್ ಬ್ಲಡ್ ಉಸ್ತುವಾರಿಗಳಾದ ಅಲ್ತಾಫ್ ಶಾಂತಿಭಾಗ್ ಹಾಗೂ ಹಂಝ ಸುಂದರಿಭಾಗ್ ಶಿಬಿರಕ್ಕೆ ಶುಭ ಹಾರೈಸಿದರು.

ಉಳಿದಂತೆ ಡಿವಿಶನ್ ಕಾರ್ಯದರ್ಶಿಯಾಗಿರುವ ಜಾಫರ್ US, ಸೆಕ್ಟರ್ ಉಸ್ತುವಾರಿಯಾಗಿರುವ ಸಿದ್ದೀಕ್ ಕೊಮರಂಗಲ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಮಾರ್ಗತಲೆ, ಸ್ಥಳೀಯ ಮದನಿನಗರ ಜಮಾಅತ್ ಖ಼ತೀಬರಾಗಿರುವ ಮುದ್ರಿಕ ಮದನಿ, ಇಸ್ಮಾಯಿಲ್ ಮದನಿ ಮೊರಕ್ಕೋ, ಉದ್ಯಮಿ ಹಾಶಿರ್ ಮದನಿ ನಗರ, ಮದ್ರಸತುಲ್ ಸೆಯ್ಯಿದ್ ಮದನಿ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ, SYS ಮದನಿ ನಗರ ಅಧ್ಯಕ್ಷ ಅಝೀಝ್, ಉಳ್ಳಾಲ ನಗರ ಸಭಾ ಕೌನ್ಸಿಲರ್ ಆಗಿರುವ ಅಸ್ಗರ್ ಅಲಿ, ಮುನ್ನೂರ್ ಪಂಚಾಯತ್ ಕೌನ್ಸಿಲರ್ಸ್ ಗಳಾದ ಇಜಾಝ್ ಹಾಗೂ ಇಸ್ಮಾಯಿಲ್ ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೆಕ್ಟರ್ ಫೈನಾನ್ಶಿಯಲ್ ಸೆಕ್ರೆಟರಿಯಾಗಿರುವ ಜುನೈದ್ ಮದನಿನಗರ ಕಾರ್ಯಕ್ರಮವನ್ನು ನಿರೂಪಿಸಿದರು.

ಕೊನೆಯಲ್ಲಿ ಸೆಕ್ಟರ್ ಪ್ರ.ಕಾರ್ಯದರ್ಶಿಗಳು ಶಿಬಿರದ ಯಶಸ್ವಿಗೆ ಬೇಕಾಗಿ ಆಹೋ ರಾತ್ರಿ ಶ್ರಮಿಸಿದ ಸೆಕ್ಟರ್ ಪಧಾಧಿಕಾರಿಗಳಿಗೆ, ಸೆಕ್ಟರ್ ಕಾರ್ಯಕಾರಿ ಸಮಿತಿ ನಾಯಕರುಗಳಿಗೆ, ಹಾಗೂ ಸೆಕ್ಟರ್ ವ್ಯಾಪ್ತಿಯಲ್ಲಿ ಬರುವ ಅಳೇಕಲ, ಮಾರ್ಗತಲೆ, ಮಂಚಿಲ, ಹಿದಾಯತ್ ನಗರ, ಪಟ್ಲ, ಸೇವಂತಿಗುಡ್ಡೆ, ದಾರಂದಬಾಗಿಲು, ಸಂತೋಷ್ ನಗರ, ಸುಭಾಷ್ ನಗರ, ಅಂಬ್ಲಮೊಗರು, ಸ್ವಲಾತ್ ನಗರ ಶಾಖೆಗಳಿಗೆ ಧನ್ಯವಾದವಿತ್ತರು.

ಪ್ರತ್ಯೇಕವಾಗಿ ಕಾರ್ಯಕ್ರಮದಲ್ಲಿ ಸೆಕ್ಟರ್ ಸಮಿತಿಯೊಂದಿಗೆ ಜಂಟಿಯಾಗಿದ್ದು ಕಾರ್ಯಾಚರಿಸಿದ್ದ ಮದನಿನಗರ ಶಾಖೆಯ SSF ಹಾಗೂ SBS ನಾಯಕರಿಗೂ, ಕಾರ್ಯಕರ್ತರಿಗೂ ಅಬಿನಂದಿಸಿದರು. ಹಾಗೆಯೇ ರಕ್ತದಾನ ಶಿಬಿರ ನಡೆಸಲು ಅವಕಾಶ ಕಲ್ಪಸಿಕೊಟ್ಟ ಶಾಲಾ ಮಂಡಳಿಗೂ ಶಾಲಾ ಮುಖ್ಯಸ್ಥರಿಗೂ ಹಾಗೂ ಶಿಕ್ಷಕ ವೃಂದದವರಿಗೂ ಇದೇ ಸಂದರ್ಭಲ್ಲಿ ಅಬಿನಂದಿಸಿದರು.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...