ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಉಳ್ಳಾಲ ಮಂಜನಾಡಿ ಗ್ರಾಮದ ಮಂಗಳಾತಿಯಲ್ಲಿ ನಿರ್ಮಿಸಿದ ನೂತನ ಅಂಗನವಾಡಿ ಕಟ್ಟಡ ಹಾಗೂ ಕಲ್ಕಟ್ಟ ದಲ್ಲಿ ನಿರ್ಮಿಸಿದ ಕಲ್ಕಟ್ಟ ವಾಣಿಜ್ಯ ಸಂಕಿರ್ಣವನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು 10ವರ್ಷಗಳ ಇಂದೆ ಕಲ್ಕಟ್ಟ ಪ್ರದೇಶ ಬಹಳಷ್ಟು ಹಿಂದೂಳಿದ ಪ್ರದೇಶವಾಗಿತ್ತು. ಇಂದು ಎಲ್ಲಾ ರೀತಿಯಲ್ಲಿ ಉತ್ತಮ ಅಭಿವೃದ್ಧಿಯಾಗಿದೆ. ನಾಟೆಕಲ್ ಜಂಕ್ಷನ್ ಮತ್ತು ಕಲ್ಕಟ್ಟ ಜಂಕ್ಷನ್ ನ್ನು ಮಾದರಿ ಜಂಕ್ಷನ್ ಮಾಡುವ ಉದೇಶದಿಂದ 3ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಶ್ರೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಕಾಮಗಾರಿ ಅಗುವ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ಮಾಡಬೇಕ ಎಂದು ಹೇಳಿದರು.
ಈ ಸಂದರ್ಭ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಲ್ಲಿ ಸಹಕರಿಸಿದ ಶಾಸಕ ಯು.ಟಿ ಖಾದರ್ ಹಾಗೂ ಎನ್.ಎಸ್ ಕರೀಂ ರವರಿಗೆ ಕಲ್ಕಟ್ಟ ನಾಗರಿಕ ವತಿಯಿಂದ ಸನ್ಮಾನಿಸಲಾಯಿತು.
ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಅಸೈ, ಉಪಾಧ್ಯಕ್ಷ ಮರಿಯ್ಯಮ್ಮ, ಸದಸ್ಯರಾದ ಇಸ್ಮಾಯಲ್ ಡೊಡ್ಡಮನೆ, ಎ.ಎಂ ಇಸ್ಮಾಯಿಲ್, ಇಸ್ಮಾಯಿಲ್ ಮೊಂಟೆಪದವು,ಅಬ್ದುಲ್ ಖಾದರ್, ಕೆ.ಪಿ ಅಶ್ರಫ್, ಇಲ್ಯಾಲ್ ಅನ್ಸಾರ್ ನಗರ, ಪ್ರೆಮಾ, ಶೀತಾ ವಿನಾಯಕ್ ಕೌಸರ್ ಬಾನು, ನಳಿನಾಕ್ಷಿ, ಜಿ.ಪಂ ಮಾಜಿ ಸದಸ್ಯ ಹಾಜಿ ಎನ್.ಎಸ್ ಕರೀಂ, ಮಾಜಿ ತಾ.ಪಂ ಸದಸ್ಯ ನೆಕ್ಕರೆ ಬಾವ, ಸ್ಥಳೀಯ ಹಿರಿಯರಾದ ಫಕೀರ್ ಶಾಹೇಬ್, ಮಂಜನಾಡಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮಂಜಪ್ಪ ಎಚ್. ಗ್ರಾ.ಪಂ ಸಿಬ್ಬಂದಿಗಳಾದ ಹನೀಫ್, ಶಾಹುಲ್ ಹಮೀದ್,ಅಂಗನವಾಡಿ ಮೇಲ್ವಿಚಾರಕಿ ಕಲ್ಪನ, ಅಂಗನವಾಡಿ ಕಾರ್ಯಕರ್ತೆ ಭವ್ಯ, ಸಹಾಯಕಿ ಸೈಲಜಾ,ನಾಗರಿಕ ಸಮಿತಿ ಕಲ್ಕಟ್ಟ ಅಧ್ಯಕ್ಷ ಮೋನು, ಸ್ಥಳೀಯರಾದ ಇಬ್ರಾಹೀಂ ಕಲ್ಕಟ್ಟ, ಎಸ್ಸೆಸ್ಸೆಫ್ ಕಲ್ಕಟ್ಟ ಶಾಖಾಧ್ಯಕ್ಷ ಕೆ.ಎಂ ಶರೀಫ್ ಕಲ್ಕಟ್ಟ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯ ಮಹಮೂದ್ ಹಾಜಿ ಕಂಡಿಕ, ಕಲ್ಕಟ್ಟ ಯುತ್ ಕಾಂಗ್ರೆಸ್ ಸದಸ್ಯ ಇಸ್ಹಾಕ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.