(Www.vknews.in) ಕಡಬ :
ಕಡಬ ವ್ಯಾಪ್ತಿಯ ಸುನ್ನಿ ಸಮೂಹದ (SSF, SYS, SMA) ಬೇಡಿಕೆಯಾದಂತಹನೂತನ ಕಛೇರಿಯ ಉದ್ಘಾಟನೆ ಶುಕ್ರಿಯಾ ಬಿಲ್ಡಿಂಗ್ ಕಡಬದಲ್ಲಿ ನಡೆಯಿತು.
SMA ಬೆಳ್ಳಾರೆ ಝೋನಲ್ ಅಧ್ಯಕ್ಷ ಜನಾಬ್ ಇಸ್ಮಾಯಿಲ್ ಪಡ್ಪಿನಂಗಡಿ ರಿಬ್ಬನ್ ಕಟ್ ಮಾಡುವ ಮಾಡುವ ಮೂಲಕ ಕಛೇರಿ ಉದ್ಘಾಟನೆ ಮಾಡಿದರು.
ನಂತರ ನಡೆದ ಸಭಾ ಕಾರ್ಯದಲ್ಲಿ SMA ಕಡಬ ಇದರ ಅಧ್ಯಕ್ಷ ಅಬ್ದುಲ್ ಖಾದರ್ ಸಾಹೇಬ್ ಸಭಾಧ್ಯಕ್ಷತೆ ವಹಿಸಿದರು, ಕೋಡಿಂಬಾಳ ಖತೀಬರಾದ ಸಂಶುದ್ದೀನ್ ಸ’ಅದಿ ದುಆಶೀರ್ಚನಕ್ಕೆ ನೇತೃತ್ವ ನೀಡಿದರೆ SYS ಕಡಬ ಸೆಂಟರ್ ಅಧ್ಯಕ್ಷರಾದ ಇಲ್ಯಾಸ್ ಮದನಿ ಕೋಡಿಂಬಾಳ ಸಭೆಯನ್ನು ಉದ್ಘಾಟನೆ ಮಾಡಿದರು. ನಂತರ SSF ಕಡಬ ಸೆಕ್ಟರ್ ಉಸ್ತುವಾರಿ ಇಸ್ಹಾಕ್ ಮದನಿ, SMA ಉಪಾಧ್ಯಕ್ಷರಾದ ಇಬ್ರಾಹಿಮ್ ಮುಸ್ಲಿಯಾರ್ ಚಾಕಟೆಕರೆ , ಹಿರಿಯ ಸಂಘಟನಾ ನಾಯಕ ಸುಲೈಮಾನ್ ಮುಸ್ಲಿಯಾರ್ , ಹಾಗೂ ನಾಸಿರ್ ಸುಖೈಫಿ ಮಾತನಾಡಿ ಶುಭ ಹಾರೈಸಿ ಕಾರ್ಯಕರ್ತರಿಗೆ ಆವೇಶ ನೀಡಿದರೆ ಸುನ್ನೀ ಸೆಂಟರಿಗೆ ಶ್ರಮಿಸಿದ ಕಾರ್ಯಕರ್ತ ರಿಗೆ ಅಭಿಂನಂದನೆ ಸಲ್ಲಿಸಿದರು, ಸೆಕ್ಟರ್ ಅಧ್ಯಕ್ಷರಾದ FH ಮುಹಮ್ಮದ್ ಮಿಸ್ಬಾಹಿ ಹಿರಿಯ ನಾಯಕರ ಹಿಂದಿನ ಕಾರ್ಯಾಚರಣೆಯತ್ತ ಎಲ್ಲರ ಮನಸೆಳೆದು ಕಾರ್ಯಾಚರಣೆ ಯ ಉನ್ನತಿ ಬಗ್ಗೆ ಹಾಗೂ ಒಗ್ಗಟ್ಟಿನ ಕಾರ್ಯಾಚರಣೆ ಬಗ್ಗೆ ಮತ್ತು ಕಡಬ ಸುನ್ನೀ ಕೋ ಆರ್ಡಿನೇಷನ್ ಸಮಿತಿ ರೂಪೀಕರಣದ ಬಗ್ಗೆ ಮಾತನಾಡಿ ವಿಷಯ ಅವತರಣೆಮಾಡಿದರು. SYS ಮಾಣಿ ಸೆಂಟರ್ ಪ್ರದಾನ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದು SSF ,SYS ,SMA, SJM, ಮುಸ್ಲಿಂ ಜಮಾಅತ್ ನ ನಾಯಕರು ಕಾರ್ಯಕರ್ತರು ಭಾಗವಹಿಸಿ ಸಮಾರಂಭದ ಯಶಸ್ವಿಗೆ ಸಾಕ್ಷಿಯಾದರು. ಈ ಸಮಾರಂಭದಲ್ಲಿ ಪವಿತ್ರ ಉಮ್ರಾ ಹೊರಟಿರುವ ಇಲ್ಯಾಸ್ ಮದನಿ ಕೋಡಿಂಬಾಳ ಇವರಿಗೆ ಶಾಲು ಹೊದಿಸಿ ಬೀಳ್ಕೊಟ್ಟು ಶುಭ ಹಾರೈಸಲಾಗಿದೆ.
SSF ಕಡಬ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿ ಎಮ್ ರಿಯಾಝ್ ಮುಸ್ಲಿಯಾರ್ ಚಾಕಟೆಕರೆ ಸ್ವಾಗತಿಸಿದರೆ.SYS ಕಡಬ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಸ’ಅದಿ ಪನ್ಯ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗದ ಕಾರಣ ಅಸ್ಯಯ್ಯಿದ್ ಶಾಹುಲ್ ಹಮೀದ್ ತಂಙಳ್ ಮರ್ದಾಳ ,ಉಮರ್ ಮುಸ್ಲಿಯಾರ್ ಪನ್ಯ, ಸಯ್ಯಿದ್ ಮೀರಾನ್ ಸಾಹೇಬ್ ಕಡಬ ಕರೆ ಮಾಡಿ ಶುಭ ಹಾರೈಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.