ಎನ್ ಆರ್ ಸಿ ಮೂಲಕ ವಲಸೆ ಎಂಬ ಸುಳ್ಳಿನ ಬೆಟ್ಟ ಅಗೆಯುವುದರಿಂದ ಎರೆಹುಳವೂ ಸಿಗಲಾರದು.
(www.vknews.com) : ಪ್ರತಿಯೊಬ್ಬರೂ ತಮ್ಮ ದಾಖಲೆಗಳ ಬಗ್ಗೆ ಅಸಡ್ಡೆ ತೋರಬೇಡಿ .ಆಧಾರ ಕಾರ್ಡ್, ಮತದಾನ ಗುರುತಿನ ಚೀಟಿ,ರೇಶನ್ ಕಾರ್ಡ್ ಬಗ್ಗೆ ಖಾತರಿ ಪಡಿಸಿಕೊಳ್ಳಿ ಅವೆಲ್ಲವೂ ಉಪಯೋಗಕ್ಕೆ ಬರುವ ವಸ್ತುಗಳಾಗಿದೆ.
2014 ಚುನಾವಣೆಯ ಸಮಯದಲ್ಲಿ ಮೋದಿಯವರು ಹಿಂದು ವಲಸೆಯನ್ನು ಸ್ವಾಗತಿಸಲಾಗುವುದು ಎಂದು ಹೇಳಿದ್ದರು.2016 ಜುಲೈ15 ರಂದು ಮೋದಿ ಸರ್ಕಾರ ಮುಸ್ಲಿಮರನ್ನು ಹೊರಗಿಟ್ಟು ಹಿಂದು,ಕ್ರೈಸ್ತ, ಬೌದ್ದ, ಜೈನ, ಪಾರ್ಸಿ,ಸಿಕ್ಕ್ ವಲಸಿಗರನ್ನು ಸೇರಿಸಿಕೊಳ್ಳುವ ಪೌರತ್ವ ತಿದ್ದುಪಡಿ ಬಗ್ಗೆ ಪಾರ್ಲಿಮೆಂಟಿನಲ್ಲಿ ಮಂಡನೆ ಮಾಡಿತ್ತು.ಬಿಜೆಪಿ ಸಂಸದ ರಾಜೇಂದ್ರ ಅಗರ್ ವಾಲ ನೇತೃತ್ವದಲ್ಲಿ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು ಕೂಡಾ ರಚಿಸಿತ್ತು.2019 ಜನವರಿ 8 ರಂದು ಈ ತಿದ್ದುಪಡಿ ಪಾರ್ಲಿಮೆಂಟ್ ನಲ್ಲಿ ಮಂಜೂರು ಆಗಿತ್ತು. ಆದರೆ ರಾಜ್ಯ ಸಭೆಯಲ್ಲಿ ಬಹುಮತದ ಕೊರತೆಯಿಂದ ಅದು ಮಂಜೂರಾಗಲಿಲ್ಲ.
2019 ಸೆಪ್ಟೆಂಬರ್ 9 ರಂದು ಈಶಾನ್ಯ ಪ್ರಜಾತಾಂತ್ರಿಕ ರಾಜ್ಯಗಳ ಒಕ್ಕೂಟದ ನಾಲ್ಕನೇಯ ಸಭೆಯಲ್ಲಿ ಈ ತಿದ್ದುಪಡಿ ಬಗ್ಗೆ ಹೇಳಿಕೆಯನ್ನು ಅಮಿತ್ ಶಾ ನೀಡಿದ್ದಾರೆ.ಒಟ್ಟಿನಲ್ಲಿ ಅಸ್ಸಾಮಿ ನಲ್ಲಿರುವ ಮುಸ್ಲಿಮರನ್ನು ವಿಭಜಿಸಿ ಅಕ್ರಮ ವಲಸಿಗರನ್ನಾಗಿಸಿ ಹೊರದಬ್ಬುವ ಉದ್ದೇಶದಿಂದ ಈ ರೀತಿಯಲ್ಲಿ ಕಾರ್ಯ ಯೋಜನೆಯು ನಡೆಯುತ್ತಿದೆ.ಆದರೆ ಇದು ನೆನೆಸಿ ದಷ್ಟು ಸುಲಭವಾದ ಕಾರ್ಯ ವಲ್ಲ.ಕಾನೂನಾತ್ಮಕ ವಾಗಿ ಒಂದು ಸಮುದಾಯದ ಮೇಲಿನ ತಾರತಮ್ಯವನ್ನು ಕೋರ್ಟು ನಿರ್ಧರಿಸಬೇಕಾದ ಬಿಕ್ಕಟ್ಟು ಎದುರಾಗಬಹುದು.ವಲಸಿಗರಲ್ಲಿ ಬಹು ಸಂಖ್ಯೆಯಲ್ಲಿ ಹಿಂದುಗಳೇ ಹೆಚ್ಚಾಗಿದ್ದಾರೆ.
ಮುಸ್ಲಿಮರನ್ನು ಅಕ್ರಮ ವಲಸಿಗರನ್ನಾಗಿಸಿ ಹೊರದಬ್ಬುವ ಉದ್ದೇಶ 1956 ರಲ್ಲೇ ಅಸ್ಸಾಂ ನಲ್ಲಿ ಶಾಖೆ ಯನ್ನು ಆರಂಭಿಸಿದ ಸಂಘ ಪರಿವಾರಕ್ಕೆ ಇತ್ತು. .ಹಿಂದುಗಳು ನಮ್ಮ ದೇಶಕ್ಕೆ ಬಂದರೆ ನಿರಾಶ್ರಿತರು!.ಅವರಿಗೆ ಆಶ್ರಯ ನೀಡಬೇಕು. ಮುಸ್ಲಿಮರು ವಲಸೆ ಬಂದರೆ ಅವರು ಜನಸಂಖ್ಯೆಯನ್ನು ಜಾಸ್ತಿಮಾಡುವ ದುರುದ್ದೇಶದಿಂದ ಬಂದ ಅಕ್ರಮ ವಲಸಿಗರು!.ಅವರನ್ನು ಹೊರದಬ್ಬಬೇಕು.ಇದೀಗ ಆ ಹಳೆಯ ಪರಿವಾರದ ಅಜಂಡ ಬೆಳಕಿಗೆ ಬರುತ್ತಿದೆ.ಅಸ್ಸಾಮಿನ ಜನತೆ ಹಿಂದು ವಲಸಿಗರ ಬಗ್ಗೆ ಅಸಹನೆ ತೋರುವ ಬಗ್ಗೆ ಸಂಘ ಪರಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.1950 ರಲ್ಲೇ ಪೂರ್ವ ವಲಯದ ಸಂಘಟನಾ ಮುಖ್ಯಸ್ಥ ಏಕನಾಥ ರಾನಡೆ ಸಂದರ್ಶನ ವೊಂದರಲ್ಲಿ ಈ ವಿಚಾರದಲ್ಲಿ ಮಾತನಾಡಿದ್ದರು.ದಶಕಗಳ ಬಳಿಕ ಸಂಘದ ಸರಸಂಚಾಲಕ ಬಾಬಾ ಸಾಹೇಬ್ ದೇವರಸ್ ಮಾತಾನಾಡುತ್ತಾ,ಹಿಂದುಗಳು ಬಂಗಾಳದಿಂದ ಹೊರದಬ್ಬಿದ ಕಾರಣ ದಾರಿಕಾಣದೇ ವಲಸೆ ಬರುತ್ತಾರೆ. ಆದರೆ ಮುಸ್ಲಿಮರು ಅಸ್ಸಾಮನ್ನು ಮುಸ್ಲಿಂ ಬಾಹುಳ್ಯ ಪ್ರದೇಶವನ್ನಾಗಿ ಮಾರ್ಪಡಿಸಲು ಬರುತ್ತಾರೆ ಎಂದು ಪ್ರಬಲವಾಗಿ ವಾದಿಸಿದ್ದರು.
ಎನ್ ಆರ್ ಸಿ ಸದ್ಯದ ಪರಿಸ್ಥಿತಿಯಲ್ಲಿ ಅಸ್ಸಾಮಿನಲ್ಲಿ ಮಾತ್ರ ಎನ್ ಆರ್ ಸಿ ಜಾರಿಯಲ್ಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಸ್ಥಾಪಿಸಿದ ಸಮಿತಿಯಾಗಿದೆ ಇದು. ಭಾರತದಲ್ಲಿ ವಲಸಿಗರ ಸಂಖ್ಯೆ ಧಾರಾಳ ವಾಗಿಯೇ ಇದೆ. ಕಾನೂನಾತ್ಮಕ ವಾಗಿ ಆಶ್ರಯ ಕೊಟ್ಟು ಭಾರತದ ಪೌರತ್ವ ಪಡೆದ ಬೇರೆ ದೇಶದವರು ಕೂಡಾ ಅತ್ಯಧಿಕ ಸಂಖ್ಯೆಯಲ್ಲಿ ನಮ್ಮಲ್ಲಿ ಇದ್ದಾರೆ.ನಮ್ಮ ಮಾಜಿ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಪತ್ನಿ ಕೂಡಾ ವಲಸಿಗರೇ ಆಗಿದ್ದರು.
1826 ಅಸ್ಸಾಂ ಬ್ರಿಟಿಷ್ ಸರ್ಕಾರದ ಪಾಲಾಯಿತು. ಅಸ್ಸಾಮನ್ನು ಕೃಷಿ ಭೂಮಿಯಾಗಿ ಕಂಡ ಬಿಳಿಯರು ಝಾರ್ಖಂಡ್, ಒರಿಸ್ಸ, ಆಂದ್ರ, ತೆಲಂಗಾಣ ರಾಜ್ಯಗಳ ಆದಿವಾಸಿ ಗಳನ್ನು ಕರೆ ತಂದು ಅಲ್ಲಿ ದುಡಿಸಲಾರಂಭಿಸಿದರು.ಇದರಿಂದ ಅಸ್ಸಾಮಿನ ಜನ ವಿಭಾಗದಲ್ಲಿ ಹಲವಾರು ಬದಲಾವಣೆ ಗಳು ಉಂಟಾದವು.ಆ ನಂತರ ದೇಶ ವಿಭಜನೆಯ ಕಾಲದಲ್ಲಿ ನಡೆದ ಕಲಹ,ಅಭದ್ರತೆ ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಯಿತು. ಅದರಲ್ಲಿ ವಲಸೆಯು ಪ್ರಮುಖವಾಗಿರುತ್ತದೆ. ಆ ಮೇಲೆ ಭಾರತ ಮತ್ತು ಪಾಕ್ ಯುದ್ಧ ಸಮಯದಲ್ಲಿನ ಅನಿಶ್ಚಿತತೆಯು ವಲಸೆ ಪ್ರಕ್ರಿಯೆಗೆ ಬಲವನ್ನು ನೀಡಿತು.1971 ರ ಬಾಂಗ್ಲಾದೇಶ ರಚನೆಯ ಸಂದರ್ಭದಲ್ಲಿಯೂ ವಲಸೆಯು ಜೋರಾಗಿಯೇ ನಡೆಯಿತು.ಈ ಸಂದರ್ಭದಲ್ಲಿ ಬರೀ ಮುಸ್ಲಿಮರೇ ವಲಸೆಗಾರರಾಗಿ ಬಂದರು ಎಂದು ಹೇಳಲಾಗದು. ಅಸಂಖ್ಯಾತ ಬೇರೆ ಧರ್ಮಿಯರೂ ವಲಸಿಗರಾಗಿ ಬಂದಿದ್ದಾರೆ.ಒಂದು ಕಾಲದಲ್ಲಿ ವಲಸಿಗರನ್ನು ಧರ್ಮದ ಆಧಾರದಲ್ಲಿ ನೋಡದೇ ವಲಸಿಗರೆಂಬ ನೆಲೆಯಲ್ಲಿ ವಿರೋಧಿಸಲಾಗುತ್ತಿತ್ತು. ನಂತರದಲ್ಲಿ ಅದು ಜಾತೀಯತೆ ಯ ನೆಲೆಯಲ್ಲಿ ವರ್ಗೀಕರಣ ಗೊಂಡಿತು.ಅದರ ಪರಿಣಾಮವಾಗಿ 1980 ನಂತರ ನೆಲ್ಲಿಯಲ್ಲಿ ಸುಮಾರು ಹತ್ತು ಸಾವಿರದಷ್ಟು ಬರುವ ಮಕ್ಕಳ, ಮಹಿಳೆಯರ ಸಹಿತ ಮುಸ್ಲಿಂ ಸಮುದಾಯದ ದಾರುಣ ಕಗ್ಗೊಲೆಗೆ ಕಾರಣಯಾಯಿತು.
ಆಮೇಲೆ ಇಂದಿರಾ ಗಾಂಧಿಯವರು 1983 ರಲ್ಲಿ the illegal migrants determination by tribunal act (imdt)ಯನ್ನು ತಿದ್ದುಪಡಿಯನ್ನು ತರುತ್ತಾರೆ.ನಂತರ ರಾಜೀವ್ ಗಾಂಧಿ1985 ಅಗಸ್ಟ್14ರಂದು ಒಂದು ಸಂಧಾನ ಒಪ್ಪಂದಕ್ಕೆ ಚಾಲನೆ ನೀಡುತ್ತಾರೆ.ಆ ಪ್ರಕಾರ 1971 ಮಾರ್ಚ್ 24 ರ ಇದ್ದವರಿಗೆ ಪೌರತ್ವ ಎಂಬ ಕಾನೂನು ಜಾರಿಗೆ ಬಂತು.(1971 ಮಾರ್ಚ್ 26 ಬಾಂಗ್ಲಾದೇಶ ರಚನೆಯಾಗಿತ್ತು) 2005 ರಲ್ಲಿ ಈ ತಿದ್ದುಪಡಿ ಯನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿತು.2009 ರಲ್ಲಿ ಅಸ್ಸಾಂ ಪಬ್ಲಿಕ್ ವರ್ಕರ್ಸ್ ಸುಪ್ರೀಂಕೋರ್ಟ್ ಗೆ ಈ ಬಗ್ಗೆ ಅಪೀಲು ಸಲ್ಲಿಸುತ್ತದೆ.2013 ರಲ್ಲಿ ಸುಪ್ರೀಂ ಕೋರ್ಟ್ ಪೌರತ್ವ ನವೀಕರಣ ಆದೇಶ ನೀಡುತ್ತದೆ. ನಂತರ 2015 ರಲ್ಲಿ NRC ಪ್ರಕ್ರಿಯೆ ನಡೆಯುತ್ತದೆ.2017 ರಲ್ಲಿ 3.29 ಕೋಟಿ ಜನಸಂಖ್ಯೆ ಯಲ್ಲಿ ಕೇವಲ 1.09 ಕೋಟಿಯ ಪೌರತ್ವ ಸಾಬೀತಾಗುತ್ತದೆ.2018 ಜುಲೈ 30 ಕ್ಕೆ 2.09 ಕೋಟಿಗೆ ಏರುತ್ತದೆ.2019 ಜೂನ್ 26 ರಂದು ಪುನಃ 1.02 462 ಮಂದಿಯನ್ನು ಸೇರಿಸಲಾಗುತ್ತದೆ.2019 ಅಗಸ್ಟ್ 01 ರಂದು ಬಿಡುಗಡೆ ಮಾಡಿದ ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕಾರವಾಗಿ 19,06857 ಮಂದಿ ಭಾರತೀಯ ಪೌರತ್ವ ಪಡೆಯಲು ಅರ್ಹತೆಯನ್ನು ಪಡೆದಿರುವುದಿಲ್ಲ.ಈ ಸಂಖ್ಯೆ ಇನ್ನೂ ಕಮ್ಮಿಯಾಗಿ ಹತ್ತು ಲಕ್ಷ ಕ್ಕೆ ತಲುಪಬಹುದೆಂದು ಅಂದಾಜಿಸಲಾಗುತ್ತದೆ. ಇದರಲ್ಲಿ 7 ಲಕ್ಷ ದಷ್ಟು ವಲಸಿಗರು ಮಾತ್ರ ಮುಸ್ಲಿಮರು ಎನ್ನುವುದು ನುಂಗಲಾರದ ಮುಳ್ಳಾಗಿ ಪರಿಣಮಿಸಿದೆ. ಈ ಕಾರಣದಿಂದಲೇ ವಲಸಿಗರನ್ನು ಧರ್ಮದ ಆಧಾರದಲ್ಲಿ ಬೇರ್ಪಡಿಸುವ ತಿದ್ದುಪಡಿಯನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ.ಆ ದಾರಿಯಲ್ಲಿ ಅಮಿತ್ ಶಾ ಹೇಳಿಕೆ ನೀಡುತ್ತಾರೆ.
ಇನ್ನು ಅಸ್ಸಾಮಿನ ಸಮಸ್ಯೆ ಯೇ ಇನ್ನೂ ಮುಗಿದಿಲ್ಲ.ಆದರೂ ದೇಶ ಪೂರ್ತಿಯಾಗಿ ಎನ್ ಆರ್ ಸಿ ಜಾರಿಗೆ ತರುವ ಬಗ್ಗೆ ದ್ವನಿ ಎಬ್ಬಿಸುವುದು ಪೌರತ್ವ ದ ಹೆಸರಲ್ಲಿ ಹೊಸ ರಾಜಕೀಯ ಅಸ್ತ್ರವನ್ನು ಸಿದ್ದಪಡಿಸುವ ಉದ್ದೇಶ ಮಾತ್ರವೇ ಆಗಿರುತ್ತದೆ.ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯವಾಗಿ ಅಸ್ಸಾಮ್ ಎಂಬ ಪುಟ್ಟ ರಾಜ್ಯ ಕ್ಕೆ ಕೇಂದ್ರ ಸರ್ಕಾರ ಚೆಲ್ಲಿದ ಹಣ ಸಾವಿರಾರು ಕೋಟಿ.ಆದರೂ ಸಮಸ್ಯೆ ಪರಿಹಾರವನ್ನು ಕಂಡಿಲ್ಲ.ಮಾಜಿ ರಾಷ್ಟ್ರಪತಿ ಕುಟುಂಬದವರೇ ಜೈಲು ಸೇರಬೇಕಾಗಿಬಂದಿದೆ.ಮೂವತ್ತು, ನಲವತ್ತು ವರ್ಷಗಳ ಕಾಲ ದೇಶದ ಸೈನಿಕರಾಗಿ ದುಡಿದವರೂ ಎನ್ ಆರ್ ಸಿ ಬಲಿಯಾಗಬೇಕಾದದ್ದು ಬಲು ದೊಡ್ಡ ದುರಂತ!.ಆರ್ಟಿಕಲ್ 05 ರ ಪ್ರಕಾರ ಭಾರತದಲ್ಲಿ ಹುಟ್ಟಿದವ ಭಾರತೀಯನೇ ಆಗಿರುತ್ತಾನೆ. 1951 ರಲ್ಲಿ ಪ್ರಥಮ ಸೆನ್ಸಸ್ ನಡೆಸಲಾಯಿತು 1948 ಜುಲೈ19 ರಲ್ಲಿ ಭಾರತದಲ್ಲಿ ಇದ್ದ ಎಲ್ಲರೂ ಭಾರತೀಯ ನಾಗರಿಕರೇ ಆಗಿರುತ್ತಾರೆ.ನಂತರ ಬಂದ ತಿದ್ದುಪಡಿ ಪ್ರಕಾರ 1987 ರ ನಂತರ ಹುಟ್ಟಿದವನಾದರೆ ತಂದೆ ತಾಯಿಯ ರಲ್ಲಿ ಒಬ್ಬರು ಭಾರತೀಯ ರಾಗಬೇಕು.2003 ರಲ್ಲಿ ಆದ ತಿದ್ದುಪಡಿ ಪ್ರಕಾರ 2003 ನಂತರ ಹುಟ್ಟಿದವನಾದರೆ ಆತ ಭಾರತೀಯ ನಾಗಬೇಕಾದರೆ ತಂದೆ ತಾಯಿ ಇಬ್ಬರೂ ಭಾರತೀಯ ರಾಗಿರಬೇಕು ಎಂಬ ಕಾಯ್ದೆ ಜಾರಿಯಲ್ಲಿದೆ. .ಹಾಗಿರುವಾಗ ನಾವು ವಲಸಿಗರಲ್ಲ ಮಾತ್ರವಲ್ಲ ನಮ್ಮತಂದೆ ತಾಯಿ ಇಬ್ಬರೂ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತೀಯರು.ಹೋರಾಟ ಸಂಗ್ರಾಮವನ್ನು ಕಣ್ಣಲ್ಲಿ ಕಂಡವರು.ಅದೂ ಅಲ್ಲದೇ ಕರ್ನಾಟಕ ಯಾವುದೇ ಬೇರೆ ದೇಶದ ಗಡಿಯನ್ನು ಹೊಂದಿಲ್ಲ.ವಲಸೆ ಸಮಸ್ಯೆ ಒಂದು ವೇಳೆ ಇದ್ದರೆ ಸದ್ಯ ಚಾಲ್ತಿಯಲ್ಲಿರುವ ಆಧಾರ ಕಾರ್ಡ್, ರೇಷನ್ ಕಾರ್ಡ್,ಜನನ ಮರಣ ನೋಂದಣಿ, ಶಾಲಾ ಕಾಲೇಜು ದೃಢೀಕರಣ ಪತ್ರಗಳು,ಬ್ಯಾಂಕ್ ಅಕೌಂಟ್ ಗಳು ಹಾಗೇ ವಾಹನ ಚಾಲನಾ ಪರವಾನಿಗೆ,ಪಾಸ್ಪೋರ್ಟ್ ಮುಂತಾದವುಗಳಿಂದ ಪರಿಹರಿಸಬಹುದಾದ ಸಂಗತಿಗಳು ಮಾತ್ರ. ಆದರೆ ಪೌರತ್ವ ನವೀಕರಣ ಮೂಲಕ ವಲಸೆ ಎಂಬ ಕಡ್ಡಿಯನ್ನು ಬೆಟ್ಟ ದಷ್ಟು ದೊಡ್ಡದು ಮಾಡಿ ಅಗೆಯುವುದರಿಂದ ಇಲಿ ಬಿಟ್ಟು ಎರೆಹುಳವೂ ಸಿಗುವ ಖಾತರಿ ಇಲ್ಲ ಎಂಬುದು ಇದರ ಪ್ರಯೋಜಕರಿಗೆ ತಿಳಿದಿರುವ ಸಂಗತಿ. ಹೀಗಿದ್ದೂ ಪೌರತ್ವ ನೋಂದಣಿ ಜಾರಿಯ ಬಗ್ಗೆ ಕರ್ನಾಟಕ ಗೃಹ ಮಂತ್ರಿ ಯ ಹೇಳಿಕೆ ಸಂವಿಧಾನದ ಆಶಯವಾಗಿರುವ ಭ್ರಾತೃತ್ವಕ್ಕೆ ವಿರುಧ್ದವಾಗಿ ಸಮಾಜದಲ್ಲಿ ಅಪನಂಬಿಕೆ ಮತ್ತು ವೈಮನಸ್ಯ ಉಂಟುಮಾಡಲು ಸಹಾಯಕವಾಗಲಿದೆ.ಎನ್ ಆರ್ ಸಿ ಮೂಲಕ ಭಾರತೀಯ ರನ್ನು ಹೊರ ದೇಶಕ್ಕೆ ಕಳುಹಿಸಲಾಗದು ಎಂಬುದು ನಿಜವಾದ ಮಾತು.
ಒಂದಂತು ನೆನಪಿರಲಿ. ಒಂದು ಕಾಯ್ದೆ ಬರೀ ರಾಜಕೀಯ ಗಿಮಿಕ್ ನಿಂದ ಜಾರಿಯಾಗುವುದಿಲ್ಲ.ಅಸ್ಸಾಮಿನಲ್ಲೇ ಈ ತನಕ ಅದು ಪರಿಹಾರ ಕಂಡಿಲ್ಲ.ಆದ್ದರಿಂದ ಎನ್ ಆರ್ ಸಿ ಯು ರಾಜಕೀಯದ ದೊಡ್ಡ ಅಸ್ತ್ರವಾಗಿ ಬದಲಾಗದಂತೆ ಎಚ್ಚರ ವಹಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ.ಕೆಲವರು ಅಧಿಕಾರದ ಗದ್ದುಗೆ ಏರಿದ್ದು ಪರಸ್ಪರ ಜಾತೀಯತೆ ಯ ವಿಷ ಬೀಜ ಬಿತ್ತಿ ಅಪನಂಬಿಕೆ ಉಂಟುಮಾಡಿದ ಕಾರಣದಿಂದ ಎಂದು ನಮೆಗೆಲ್ಲರಿಗೂ ಗೊತ್ತಿದೆಯಲ್ಲಾ.? ಬುದ್ದಿ ವಂತಿಕೆಯಿಂದ ಎನ್ ಆರ್ ಸಿ ಹೆಸರಿನಲ್ಲಿ ನಡೆಯುವ ಕುತಂತ್ರವನ್ನು ಸೋಲಿಸಬೇಕಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.