ಸರ್ಕಾರಿ ಕೆಲಸಗಳಿಗೆ ಲಂಚ ಕೇಳಿದರೇ ಎಸಿಬಿಗೆ ದೂರು ಕೊಡಿ: ವೆಂಕಟೇಶ್‍ನಾಯ್ಡು


ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡಲಿಕ್ಕೆ ವಿನಾಕಾರಣ ವಿಳಂಬ ಮಾಡಿದರೆ, ಕೆಲಸ ಮಾಡಿಕೊಡಲಿಕ್ಕೆ ಲಂಚ ಕೇಳಿದರೆ ನೇರವಾಗಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಬಹುದು ಎಂದು ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‍ಪಿ ಕೆ.ಎಸ್.ವೆಂಕಟೇಶ್‍ನಾಯ್ಡು ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜನೆ ಮಾಡಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ಜನರಿಂದ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಜನಪ್ರತಿನಿಧಿಗಳು ಕರ್ತವ್ಯ ಲೋಪವೆಸಗಿದರೆ, ಕೆಲಸ ಮಾಡಿಕೊಡಲು ಹಣ ಕೇಳಿದರೆ ಅವರ ವಿರುದ್ಧವೂ ದೂರು ನೀಡಬಹುದು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸವಿಲ್ಲದೆ ವಿನಾಕಾರಣ ಯಾರಾದರೂ ಕಾಲಹರಣ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಕೀಳುವ ಪ್ರವೃತ್ತಿ ಜಾಸ್ತಿಯಾಗಿದೆ ಎಂದು ಕೆಲ ಸಾರ್ವಜನಿಕರು ಮೌಖಿಕವಾಗಿ ದೂರು ಸಲ್ಲಿಸಿದರು ಏನೇ ಇದ್ದರೂ ನೇರವಾಗಿ ಬರವಣಿಗೆಯಲ್ಲಿ ಕೊಡಿ, ನೀವು ನೀಡುವ ದೂರುಗಳು ನಿಮಗೆ ಸಂಬಂಧಿಸಿದ್ದಾಗಿರಬೇಕು, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ, ಎಫ್.ಐ.ಆರ್ ಮಾಡುವಂತಹ ದೂರುಗಳನ್ನು ಎ.ಸಿ.ಬಿಗೆ ಕೊಡಿ, ತನಿಖೆಯಾಗಬೇಕಾಗಿರುವ ದೂರುಗಳನ್ನು ಲೋಕಾಯುಕ್ತರಿಗೆ ಕೊಡಿ ಯಾವುದೇ ದೂರುಗಳು ನೀಡುವ ಮುನ್ನಾ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರ ಕೆಲಸವಾಗದಿದ್ದ ನಂತರ ಎಸಿಬಿಗೆ ದೂರು ಕೊಡಿ.


ಮಾಹಿತಿ ಹಕ್ಕು ಕಾಯಿದೆಯಡಿ ದೂರು ಸಲ್ಲಿಸುವ ಮುನ್ನಾ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೆ, ನಿಮ್ಮ ಅರ್ಜಿ ವಿಲೇವಾರಿಯಾಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗೆ ಒಂದು ಅರ್ಜಿಗೆ 25 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದರು.

ಜಂಗಮಕೋಟೆಯ ನಿವಾಸಿ ರಜಿಯಾ ಎಂಬುವವರು, ನಮಗೆ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿದ್ದರೂ ಉದ್ದೇಶಪೂರ್ವಕವಾಗಿ ಹಣಬಿಡುಗಡೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದರು.

ಜೆ.ವೆಂಕಟಾಪುರ ನಿವಾಸಿ ಲಕ್ಷ್ಮೀನಾರಾಯಣಪ್ಪ, ನಮ್ಮ ಜಮೀನಿನ ವಿಚಾರದಲ್ಲಿ ನಮಗೆ ಮೋಸಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ಕೊಟ್ಟಿದ್ದೇನೆ ನನಗೆ ನ್ಯಾಯಕೊಡಿ ಎಂದು ಮನವಿ ಸಲ್ಲಿಸಿದರು.

ಮುಸ್ಲಿಂ ಸಮಾಜದವರಿಗೆ ದರ್ವೇಶ್ ಪ್ರಮಾಣಪತ್ರ ನೀಡಲು ತಾಲೂಕು ಕಚೇರಿಯಲ್ಲಿ ಅವಕಾಶ ಕಲ್ಪಿಸುತ್ತಿಲ್ಲವೆಂದು ಮೊಹ್ಮದ್ ನಿಝಾಮುದ್ದೀನ್ ದೂರು ಸಲ್ಲಿಸಿದರು ಯೂನಿಟಿ ಸಿಲಸಿಲಾ ಫೌಂಡೇಶನ್ ಅಕ್ರಮ್ ಮಾತನಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಭಂದಿಯ ಕೊರತೆಯನ್ನು ನೀಗಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಎಂ.ದಯಾನಂದ್, ತಾಲ್ಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್‍ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ

ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...