ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ಮರ್ಹೂಮ್ ಹಂಝ ಅಫ್ನಾನ್ ರವರ ಸ್ಮರಣಾರ್ಥ ಪುತ್ತೂರಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)(ಎಚ್.ಡಿ.ಎಫ್.ಸಿ ಬ್ಯಾಂಕ್ ಮಂಗಳೂರು,ಅಧಿಕೃತ ಪ್ರಾಯೋಜಕರು) ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 12 ಅಕ್ಟೊಬರ್ 2019 ನೇ ಶನಿವಾರದಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿಯ ಅದ್ಯಕ್ಷರಾದ ಬಶೀರ್ ಕೂರ್ನಡ್ಕರವರ ಅಧ್ಯಕ್ಷತೆಯಲ್ಲಿ ರಾಮಕ್ರಷ್ಣ ಹೆಣ್ಣು ಮಕ್ಕಳ ಫ್ರೌಡ ಶಾಲೆ ಪುತ್ತೂರು ಇದರ ಸಂಚಾಲಕರಾದ ಹೇಮನಾಥ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ದುಃವಾಶೀರ್ವಚನ ನೆರವೇರಿಸಿ ಮಾತನಾಡಿದ ಮಜ್ಲಿಸುನ್ನೂರ್ ಜುಮಾ ಮಸೀದಿ ಬಪ್ಪಳಿಗೆ ಖತೀಬರಾದ ಬಹು| ಅಹ್ಮದ್ ನಯೀಮ್ ಫೈಝಿಯವರು,”ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ದೇವರು ನಮಗೆ ಸಹಾಯ ಮಾಡುತ್ತಾನೆ.ವಿಶಾಲ ಮನೋಭಾವದ ಜನರು ಸಮಾಜಕ್ಕೆ ಅವಶ್ಯಕತೆ ಇದೆ”ಎಂದ ಅವರು,ಈ ಶಿಬಿರ ಒಂದು ಮಾದರಿ ಕಾರ್ಯಕ್ರಮ ಎಂದು ಹೇಳಿದರು

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗೀಪೇಟೆಯವರು ಮಾತನಾಡಿ,”ಹಂಝ ಅಫ್ನಾನ್ ರವರು ಇತರರಿಗೋಸ್ಕರ ಜೀವಿಸಲು ಪ್ರಯತ್ನ ಪಟ್ಟವರು.ಅವರು ಎಲ್ಲರ ಮಧ್ಯೆ ಬೆರೆತು ಜೀವಿಸಿದವರು.ಜಾತಿ ಮತ ಬೇಧ ಬಿಟ್ಟು ಸೇವೆ ಮಾಡಿದ ವ್ಯಕ್ತಿತ್ವ ಅವರದು” ಎನ್ನುತ್ತಾ ಅವರ ಜೀವನ ಚರ್ಯೆಯಲ್ಲಿ ಅಳವಡಿಸಿದ ಸಾಮಾಜಿಕ ಕಳಕಳಿಯನ್ನು ಸ್ಮರಿಸುತ್ತಾ ಹಂಝರವರು ಇಹಲೋಕ ತ್ಯಜಿಸಿದಾಗ ಇಡೀ ಪುತ್ತೂರು ಪ್ರದೇಶವು ಜಾತಿ ಮತ ಭೇದವಿಲ್ಲದೆ ಕಣ್ಣೀರು ಹರಿಸಿ ಕಂಬನಿ ಮಿಡಿದಿದ್ದರು ಎಂದರು.


ವೇದಿಕೆಯಲ್ಲಿ ಇಬ್ರಾಹಿಂ ಗೊಳಿಕಟ್ಟೆ,ಜಾಬಿರ್ ಅರಿಯಡ್ಕ,ಹಾಜಿ ಇಬ್ರಾಹಿಂ ಸಾಗರ್,ಜುನೈದ್ ಪಿ.ಕೆ,ಫಾತಿಮತ್ ಝೊಹರಾ,ಇಮ್ರಾನ್ ಮದಕ,ಸಫ್ವಾನ್ ಸಾಬಿತ್,ಶಾಫಿ ಮುಹಾದ್,ಎಂ.ಎಸ್ ಶಫೀಕ್,ಬಾತೀಷ್ ಅಳಕೆಮಜಲು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ 84 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ, ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಕಾರ್ಯಕ್ರಮದ ಯಶಸ್ವಿಯಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...