(www.vknews. in) ಪುತ್ತೂರು: ಸರಕಾರಿ ಶಾಲೆಗಳು ದಸರಾ ರಜೆಯಲ್ಲಿ ಬಿಕೋ ಎನ್ನೋ ಪರಿಪಾಠ ನಾವೆಲ್ಲಾ ಕಾಣುತ್ತಿರುವುದು ಸಾಮಾನ್ಯವಾಗಿದೆ,
ಆದರೆ ಇದಕ್ಕೊಂದು ಅಪವಾದವಾಗಿ ಮಕ್ಕಳ ಕಲರವ ,ಶಿಕ್ಷಕರ ಓಡಾಟ ಕಂಡು ಬಂದದ್ದು ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿರುವ ಸರಕಾರಿ ಮಾದರಿ ಶಾಲೆ ಹಾರಾಡಿಯಲ್ಲಿ, ಶಾಲೆಯ ಕಲರವ ಕಂಡು ಒಳಹೊಕ್ಕಾಗ ಕಂಡು ಬಂದದ್ದು ವಿಟ್ಲದಿಂದ ಬರುವಂತಹ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಿಯಾಕುಮಾರಿ , ಸಹ ಶಿಕ್ಷಕಿ ಶ್ರೀಮತಿ ಗಂಗಾವತಿ ,ಶ್ರೀಯುತ ಪ್ರಶಾಂತ್ ಅನಂತಾಡಿ ಹಾಗೂ 8ನೇ ತರಗತಿಯಿಂದ NMMS ಪರೀಕ್ಷೆ ಬರೆಯಲು ಆಯ್ಕೆಯಾದ 25 ಮಕ್ಕಳು.
ದಸರಾ ರಜೆ ಸಿಗುವ ಮೊದಲೇ ಪ್ರವಾಸಕ್ಕೆ ಹೋಗಲು ಸಮಯ ನಿಗದಿ ಮಾಡುವ ಶಿಕ್ಷಕರ ಮದ್ಯದಲ್ಲಿ, ನಮ್ಮ ಶಾಲೆಯ 4 ಮಕ್ಕಳು ಕಳೆದ ವರ್ಷ nmms ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು ಈ ವರ್ಷ ಕನಿಷ್ಟ 10 ಮಕ್ಕಳಾದರೂ ಆಯ್ಕೆಯಾಗ ಬೇಕೆನ್ನುವ ಇಚ್ಛಾಶಕ್ತಿಯಿಂದ 15 ದಿನದ ರಜಾದಿನದಲ್ಲೇ ಮಕ್ಕಳಿಗೆ ಪೂರ್ವತಯಾರಿ ನಡೆಸುತ್ತಿರುವ ಶಿಕ್ಷಕ ವೃಂದ
,ನಿಜವಾಗಿಯೂ ಮಾದರಿ ಶಾಲೆಗಳಿಗೆ ಮಾದರಿ ಮಾಡಬಹುದಾದ ಮಾದರಿ ಶಿಕ್ಷಕರು. ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ದಾಪುಗಾಲಿಡುತ್ತಿರುವಾಗ ಇಂತಹ ಬದ್ಧತೆ , ನಿಸ್ವಾರ್ಥ ಸೇವೆ ಮಾಡಲು ತವಕಿಸುತ್ತಿರುವ ಶಿಕ್ಷಕರು ಇರುವ ಶಾಲೆಗಳು ಖಂಡಿತವಾಗಿಯೂ ಬೆಳೆಯುವುದರಲ್ಲಿ ಸಂಶಯವಿಲ್ಲ.
ನಿಮ್ಮ ಪರಿಶ್ರಮದಲ್ಲಿ ನೀವು ಖಂಡಿತ ವಿಜಯಿಗಳಾಗುತ್ತೀರಿ ,ನಿಮ್ಮಂತಹ ಶಿಕ್ಷಕರನ್ನು ಪಡೆದಂತಹ ಮಕ್ಕಳು, ಪೋಷಕರು ಹಾಗೂ ಶಾಲೆ ಹೆಸರು ಗಳಿಸುತ್ತಿರುವುದರಲ್ಲಿ ಅತಿಶಯೋಕ್ತಿ ಇಲ್ಲ.ನೀವುಗಳು ಉಳಿದ ಶಾಲೆಯ ಶಿಕ್ಷಕರಿಗೂ ಪ್ರೇರಣಾ ಶಕ್ತಿಯಾಗಲಿ ,ಸರಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ
ಬರಹ:ಮೊಯಿದಿನ್ ಕುಟ್ಟಿ
ಎಸ್ ಡಿ ಎಂ ಸಿ ಸಮನ್ವಯ ವೇದಿಕೆ