ಇನೋಳಿ: ಎಸ್‌ವೈಎಸ್-ಎಸ್ಸೆಸ್ಸೆಫ್ ‌ನಿಂದ ನೇತ್ರ ತಪಾಸಣೆ ಶಿಬಿರ

ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಎಸ್‌ವೈಎಸ್ ಮತ್ತು ಎಸೆಸ್ಸೆಫ್ ಇನೋಳಿ ಶಾಖೆಯ ವತಿಯಿಂದ 25ನೆ ವಾರ್ಷಿಕೋತ್ಸವದ ಅಂಗವಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದಲ್ಲಿ ಪಾವೂರು ಗ್ರಾಪಂ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ರವಿವಾರ ಜರುಗಿತು.

ಎಸೆಸ್ಸೆಫ್ ಇನೋಳಿ ಶಾಖೆಯ ಉಪಾಧ್ಯಕ್ಷ ಸೈಯದ್ ಹೈದರಾಲಿ ಅಲ್ ಫಾಳಿಲಿ ದುಆಗೈದರು. ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವೈಎಸ್ ಇನೋಳಿ ಬ್ರಾಂಚ್‌ನ ಅಧ್ಯಕ್ಷ ಮುಹಮ್ಮದ್ ಶಬೀರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಭಾಷಣಗೈದ ಎಸೆಸ್ಸೆಫ್ ಉಪಾಧ್ಯಕ್ಷ ಮುನೀರ್ ಕಾಮಿಲ್ ಸಖಾಫಿ ಎಸೆಸ್ಸೆಫ್ ಎಲ್ಲರ ಮನ ಗೆದ್ದಿರುವ ಸಂಘಟನೆ ಎಂಬುದಕ್ಕೆ ಇಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡ ಮುಸ್ಲಿಮೇತರರೇ ಸಾಕ್ಷಿ. ಎಸೆಸ್ಸೆಫ್ ಸಮಾಜದಲ್ಲಿ ಶಾಂತಿ, ಸೌಹಾರ್ದ ಬಯಸುತ್ತದೆ. ಇನೋಳಿಯಂತ ಗ್ರಾಮೀಣ ಪ್ರದೇಶದಲ್ಲೂ 25ನೆ ವಾರ್ಷಿಕದ ನೆನಪಿನಲ್ಲಿ 25 ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಅತಿಥಿಗಳಾಗಿ ಎಸೆಸ್ಸೆಫ್ ಇನೋಳಿ ಶಾಖೆಯ ಅಧ್ಯಕ್ಷ ಹಾಜಿ ಅಲ್ತಾಫ್ ಅಲ್-ಫಾಳಿಲಿ, ಪಾವೂರು ಗ್ರಾಪಂ ಅಧ್ಯಕ್ಷ ಎಂ.ಟಿ.ಫಿರೋಝ್, ಇನೋಳಿ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷರಾದ ಐ. ಹುಸೈನ್ ಕಡವು, ಪಾವೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಇನೋಳಿ, ಪಾವೂರು ಗ್ರಾಪಂ ಸದಸ್ಯರಾದ ಮುಹಮ್ಮದ್ ಮೋನು ಚಕ್ಕರ್, ಎಂ.ಪಿ.ಹಸನ್, ವಿವೇಕ ರೈ ಕಿಲ್ಲೂರುಗುತ್ತು, ಮಾಜಿ ಸದಸ್ಯ ನೋಬರ್ರ್ಟ್‌ ಡಿಸಿಲ್ವ ಇನೋಳಿ, ಪತ್ರಕರ್ತ ಹಂಝ ಮಲಾರ್, ಎಸ್‌ವೈಎಸ್ ಇನೋಳಿ ಬ್ರಾಂಚ್‌ನ ಉಪಾಧ್ಯಕ್ಷ ಅಬ್ದುಲ್ ಲತೀಫ್ ನಂದಾವರ, ಇನೋಳಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಮುಕ್ರಿ ಭಾಗವಹಿಸಿದ್ದರು.

ಎಸೆಸ್ಸೆಫ್ ಇನೋಳಿ ಶಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸ್ವಾಗತಿಸಿದರು. ಎಸೆಸ್ಸೆಫ್ ಇನೋಳಿ ಶಾಖೆಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಐ.ಆರ್. ವಂದಿಸಿದರು. ಹರೇಕಳ ಸೆಂಟರ್ ಟೀಂ ಹಿಸಾಬ ಅಮೀರ್ ಐ.ಆರ್. ಹೈದರ್ ಅಲಿ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...