(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಂಠಸಿರಿಯಿಂದ ಹೆಸರು ಗಳಿಸಿರುವ ಗಾಯಕ ನಿಶಾನ್ ರೈ ಮಠಂತಬೆಟ್ಟು ನಾಳೆ ಕೊಲ್ಲಿ ರಾಷ್ಟ್ರ ಕುವೈತ್ ನಲ್ಲಿ ಪ್ರದರ್ಶನ ನೀಡಲಿದ್ದಾರೆ .
ಅಕ್ಟೊಬರ್ -18 ರಂದು ಕುವೈತ್ ನ ಅಮೇರಿಕನ್ ಯುನೈಟೆಡ್ ಸ್ಕೂಲ್ ಸಭಾ ಅಲ್ ಸಲೆಮ್ ನಲ್ಲಿ ನಡೆಯುವ ಬಂಟರ ಸಂಘ ಕುವೈಟ್ ಪ್ರಸ್ತುತ ಪಡಿಸಿರುವ ಬಂಟಾಯನ-2019 ಕಾರ್ಯಕ್ರಮದಲ್ಲಿ ತನ್ನ ಹಾಡಿನ ಮೋಡಿ ಮಾಡಲಿದ್ದಾರೆ .ಈಗಾಗಲೇ ದುಬೈ, ಕತಾರ್ ,ಬಹರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಹಾಡಿನ ಮೂಲಕ ನಿಶಾನ್ ರೈ ಜನಪ್ರಿಯತೆ ಗಳಿಸಿದ್ದಾರೆ .