(Www.vknews. in)ಉಪ್ಪಿನಂಗಡಿ : ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಪೂರ್ವ ಪ್ರಾಥಮಿಕ (LKG-UKG)ತರಗತಿಯ 128 ಮಕ್ಕಳಿಗೆ ನೆಕ್ಕಿಲಾಡಿ ಜೆ. ಸಿ. ಐ ವತಿಯಿಂದ ಗುರುತಿನ ಚೀಟಿ ವಿತರಣೆಯು ನಡೆಯಿತು
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮೊಯಿದಿನ್ ಕುಟ್ಟಿ ಮಾತನಾಡಿ ಅಭೂತಪೂರ್ವ ಕೆಲಸವನ್ನು ಮಾಡಿ ಹೆಸರು ಪಡೆಯುತ್ತಿರುವ ಜೆ ಸಿ ಐ ನೆಕ್ಕಿಲಾಡಿಯು ಎಲ್ಲಾ ಸಂಘ ಸಂಸ್ಥೆಗಳಿಗೆ ಮಾತೃಕೆ ಯಾಗಿದ್ದು ಸರಕಾರಿ ಶಾಲೆಗಳ ಮಕ್ಕಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಗುರುತಿನ ಚೀಟಿಯನ್ನು ವಿತರಿಸುವಲ್ಲಿ ಸಹಕಾರವನ್ನು ನೀಡುತ್ತಿರುವ ಜೆ ಸಿ ಐ ನೆಕ್ಕಿಲಾಡಿಯ ಅಧ್ಯಕ್ಷರಾದ ವಿನೀತ್ ಶಗ್ರಿತ್ತಾಯ ,ಹಾಗೂ ಅವರ ತಂಡಕ್ಕೆ ಶುಭವನ್ನು ಕೋರಿ ಇನ್ನು ಮುಂದಕ್ಕೂ ಶಾಲೆಗಳಿಗೆ ಸಹಕಾರವನ್ನು ಕೋರಿದರು
O ಕಾರ್ಯಕ್ರಮದ ರೂವಾರಿಗಳಾದ ಜೆ ಸಿ ಐ ಅಧ್ಯಕ್ಷರಾದ ವಿನೀತ್ ಶಗ್ರಿತ್ತಾಯ ಮಾತನಾಡಿ ತಮ್ಮ ಒಂದು ವರ್ಷದ ಅವಧಿಯಲ್ಲಿ ಶಾಲೆಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದು ಹಲವು ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ಕಾರ್ಯಕ್ರಮವನ್ನು ಮಾಡಿದ್ದು ಮಾದರಿ ಶಾಲೆಯಲ್ಲಿ ಅವಕಾಶವನ್ನು ಮಾಡಿ ಕೊಟ್ಟ ಶಾಲಾಭಿವೃದ್ಧಿ ಸಮಿತಿಗೆ ,ಶಿಕ್ಷಕ ವೃಂದಕ್ಕೆ ,ಪೋಷಕರಿಗೆ ಹಾಗೂ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದರು
ಜೆ. ಸಿ. ಐ ನೆಕ್ಕಿಲಾಡಿಯ ಕಾರ್ಯದರ್ಶಿ ಹಾಗೂ ಶಾಲಾ ಪೋಷಕರಾದ ರಮೇಶ್ ನಾಯಕ್ ಸುಭಾಷ್ ನಗರ ಮಾತನಾಡಿ ಸರಕಾರಿ ಶಾಲೆಗಳು ಈಗ ಬಡವರಿಗೆ ಸೀಮಿತಗೊಳ್ಳದೆ ಸಮಾಜದ ಎಲ್ಲಾ ತರಸ್ಥರಾದ ಜನರು ಮಕ್ಕಳನ್ನು ಸೇರ್ಪಡೆ ಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗಿ ಮಾದರಿ ಶಾಲೆ ಇದ್ದು ಇನ್ನೂ ಮುಂದಕ್ಕೂ ಸಹಕರಿಸುವುದಾಗಿ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶುಭಹಾರೈಸಿದರು
ಕಾರ್ಯಕ್ರಮ ದಲ್ಲಿ ಹೆಚ್ಚಿನ ಪೋಷಕರು ಭಾಗವಹಿಸಿದ್ದರು
ಸಹಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರ್ವಹಿಸಿ ಶ್ರೀಮತಿ ಸುಮಲತಾ ಧನ್ಯವಾದ ಸಮರ್ಪಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.