ನ: 15 ನಾಳೆ KCF ಅಬುಧಾಬಿ ಝೋನ್ ವತಿಯಿಂದ ಬೃಹತ್ ಅಂತರಾಷ್ಟ್ರೀಯ ಮೀಲಾದ್ ಕಾನ್ಫರೆನ್ಸ್

 

 

ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಅನಿವಾಸಿ ಕನ್ನಡಿಗರ ಹೆಮ್ಮೆಯ ಬಹುದೊಡ್ಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ಝೋನ್ ವತಿಯಿಂದ ಜಿ.ಸಿ.ಸಿ.ಯಲ್ಲಿಯೇ ಅತೀ ದೊಡ್ಡ ಬ್ರಹತ್ ಅಂತಾರಾಷ್ಟ್ರೀಯ ಮಿಲಾದ್ ಕಾನ್ಫರೆನ್ಸ್ ಅತಿ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ನವೆಂಬರ್ 15 ರಂದು ಅಬುಧಾಬಿ ಸುಡಾನಿ ಸಭಾಂಗಣದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಮುಹಮ್ಮದಲಿ ವಳವೂರ್ ತಿಳಿಸಿದರು.

ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಭಾಷಣ ‌ಗಾರರಾಗಿ ಖ್ಯಾತ ವಾಗ್ಮಿ ,ಪ್ರಭಾಷಣ ಲೋಕದ ಮಿನುಗು ತಾರೆ, ತನ್ನ ವಾಕ್ ಚಾತುರ್ಯದ ಮೂಲಕ ಜನ ಮನ ಗೆದ್ದ ,ಯುವಕರ ಆವೇಶ ಬಹು: *ಹಾಫಿಲ್ ಮಸ್ಊದ್ ಸಖಾಫಿ ಗೂಡಲ್ಲೂರ್* ಆಗಮಿಸಿ ಹುಬ್ಬುರಸೂಲ್ ಪ್ರಭಾಷಣ ನಡೆಸಲಿದ್ದಾರೆ. ಅಸ್ಯೆಯ್ಯದ್ ಝೈನುಲ್ ಆಭೀದಿನ್ ಮುತ್ತು ಕೋಯ ತಂಙಳ್ ದುಃಅ ಆಶಿರ್ವಚನ ನಿಡಲಿದ್ದಾರೆ. ಅಲ್ಲದೆ ಕೆ.ಸಿ.ಎಫ್ ಅಬುಧಾಬಿ ಪ್ರತಿಭೆಗಳಿಂದ ಬುರ್ದಾ ಆಲಾಪನೆ,ನಅತೆ ಶರೀಫ್,ಕವ್ವಾಲಿ, ದಫ್ಫ್ ಪ್ರದರ್ಶನ ನಡೆಯಲಿದೆ.

 

ಈ ಕಾರ್ಯಕ್ರಮಕ್ಕೆ ಇನ್ನೂ ಹಲವು ಧಾರ್ಮಿಕ, ಸಾಮಾಜಿಕ ಉಲಮಾ ಉಮರ ನಾಯಕರು ಆಗಮಿಸಲಿದ್ದು ತಾವೆಲ್ಲರೂ ಸಂಜೆ 5 ಘಂಟೆಯಿಂದ ನಡೆಯುವ ಕಾರ್ಯಕ್ರಮ ತಮ್ಮ ಕುಟುಂಬ, ಸ್ನೇಹಿತ ಬಳಗ ಸಮೇತ ಹಾಜರಾಗಿ ಸಹಕರಿಸಬೇಕೆಂದು ಕೆಳಿಕೊಳ್ಳುತ್ತೇವೆ.

ಕಾರ್ಯ ಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯ ಕಲ್ಪಿಸಲಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...