ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ನ.9ರಂದು ಅಯೋಧ್ಯೆ ವಿವಾದಿತ ಭೂಮಿಯ ತೀರ್ಪು ನೀಡುವುದಾಗಿ ನ.8 ರಂದು ರಾತ್ರಿ ಘೋಷಣೆಯಾಗಿತ್ತು. ಘೋಷಣೆಯಾದ ಬಳಿಕ ದೇಶದಲ್ಲೆಡೆ ಹೈ ಅಲರ್ಟ್ ಘೋಷಣೆಯೂ ನಡೆದಿದೆ. ದೇಶದ ಪ್ರತೀಯೊಬ್ಬ ನಾಗರಿಕರೂ ತೀರ್ಪಿನ ವಿಚಾರದಲ್ಲಿ ಕುತೂಹಲದಿಂದ ಕಾಯುತ್ತಿದ್ದರು. ನ.9 ರಂದು ಬೆಳಿಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸುವುದು ಎಂಬ ಘೋಷಣೆಯೂ ಆಗಿತ್ತು. ಅದರಂತೆ ಅಯೋಧ್ಯೆಯ ಪ್ರಕರಣಕ್ಕೆ ಸಂಬಂದಿಸಿದಂತೆ ರಾಮ್ಲಲ್ಲಾ ಮತ್ತು ಸುನ್ನಿ ವಕಫ್ ಬೋರ್ಡು ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿದ್ದರು.
ಬಾಬ್ರಿ ಮಸೀದಿ ಪರವಾದ ನಡೆಸಲು ದೇಶದ ಘಟಾನುಘಟಿ ವಕೀಲರ ನೇಮಕಾತಿಯೂ ನಡೆದಿತ್ತು. ಖ್ಯಾತ ವಕೀಲರ ತಂಡದಲ್ಲಿ ಪುತ್ತೂರು ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಇದ್ದರು ಎಂಬುದು ಪುತ್ತೂರಿನ ಹೆಸರನ್ನು ದೇಶದೆಲ್ಲೆಡೆ ಗಮನಿಸುವಂತಾಗಿತ್ತು. ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ದಿ. ಇಸುಬು ಬ್ಯಾರಿ ಹಾಗೂ ಆಮಿನಮ್ಮ ದಂಪತಿಗಳ ಪುತ್ರ ಅಬ್ದುಲ್ ರಹಿಮಾನ್ರವರು ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದರು. ಬಳಿಕ ಸುಪ್ರಿಂಕೋರ್ಟಿನಲ್ಲಿ ವಕೀಲರಾಗಿ ಸೇವೆ ಅರಂಭಿಸಿದ್ದರು. ಅನೇಕ ವರ್ಷಗಳ ಕಾಲ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಬಾದ್ ಹೈಕೋರ್ಟು ಹಾಗೂ ಸುಪ್ರಿಂ ಕೋರ್ಟಿನಲ್ಲಿ ವಾದ ಪ್ರತಿವಾದಗಳು ನಡೆದಿತ್ತು. ಅಯೋಧ್ಯೆ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಪಡಿಸುವುದಾಗಿ ಕೆಲವು ತಿಂಗಳ ಹಿಂದೆ ಸುಪ್ರಿಂ ಕೋರ್ಟು ಸೂಚನೆಯನ್ನು ನೀಡಿತ್ತು. ಬಾಬರೀ ಮಸೀದಿ ಪರ ಹಕ್ಕು ಮಂಡಿಸಿದ ಸುನ್ನಿ ವಕಫ್ ಮಂಡಳಿ ವಾದಕ್ಕಾಗಿ ಪ್ರಬಲ ವಕೀಲರನ್ನು ನಿಯುಕ್ತಿ ಗೊಳಿಸಿತ್ತು. ಈ ಪೈಕಿ ಅಬ್ದುಲ್ರಹಿಮಾನ್ ಕೂಡಾ ಓರ್ವರಾಗಿದ್ದರು. ತಂಡದಲ್ಲಿದ್ದ ವಿವಿಧ ರಾಜ್ಯದ ಇತರ ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ದಫರುಲ್ಲಾ ಜೀಲಾನಿ, ಉಳಿದಂತೆ ಕಿರಿಯ ವಕೀಲರಾದ ಶಕೀಲ್ ಅಹ್ಮದ್, ಇರ್ಷಾದ್ ಹನೀಫ್, ಇಜಾಸ್ ಅಹ್ಮದ್, ಶರೀಫ್ ಕೆ ಎ, ಶೈಕ್ ಮೌಲಾಲಿಬಾಷಾ, ಅನ್ಸಾರುಲ್ ಹಕ್ ಇಂಧೋರಿ ಮತ್ತು ಪುತ್ತೂರಿನ ಅಬ್ದುಲ್ರಹಿಮಾನ್ ಸೇರಿದ್ದಾರೆ.
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.