ಸಾರ್ವಜನಿಕ ವಲಯದ ಬ್ಯಾಂಕು: ಕರ್ನಾಟಕ ಗ್ರಾಮೀಣ ಬ್ಯಾಂಕ್

ಬ್ಯಾಂಕ್ ಮಾಹಿತಿಗಳು(ವಿಶ್ವಕನ್ನಡಿಗ ನ್ಯೂಸ್): ಪ್ರೀಯ ಗ್ರಾಹಕರೇ ತಮಗೆ ತಿಳಿದಿರುವಂತೆ ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಗಳ ವಿಲೀನದೊಂದಿಗೆ “ಕರ್ನಾಟಕ ಗ್ರಾಮೀಣ ಬ್ಯಾಂಕ್” ಉದ್ಭವವಾಗಿದೆ. ದೇಶದಲ್ಲಿರುವ 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪೈಕಿ ನಿ(ನ)ಮ್ಮ “ಕರ್ನಾಟಕ ಗ್ರಾಮೀಣ ಬ್ಯಾಂಕ್” ಒಟ್ಟು ವ್ಯವಹಾರ ರೂ. 47,000 ಕೋಟಿಗಳಿಗೂ ಹೆಚ್ಚಿದ್ದು, ದೇಶದ ಅತ್ಯಂತ ದೊಡ್ಡ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅನ್ನು “ಸಾರ್ವಜನಿಕ ವಲಯದ ಬ್ಯಾಂಕು” ಎಂದು ಗುರುತಿಸಿದೆ. ಪ್ರಸಕ್ತದಲ್ಲಿ ಬ್ಯಾಂಕು 1142 ಶಾಖೆಗಳನ್ನು ಹೊಂದಿದ್ದು ಕರ್ನಾಟಕದ 21 ಜಿಲ್ಲೆಗಳಲ್ಲಿ 1.52 ಕೋಟಿ ಬಲಾಢ್ಯ ಗ್ರಾಹಕ ಸಮೂಹವನ್ನು ಹೊಂದಿ ತನ್ನ ಕಾರ್ಯಕ್ಷೇತ್ರವನ್ನು ವೃದ್ಧಿಸಿಕೊಂಡಿದೆ. ಮೂಲ ಬಂಡವಾಳದ ರೂ. 118 ಕೋಟಿ ಇದ್ದು ಅದರಲ್ಲಿ ಕೇಂದ್ರ ಸರ್ಕಾರದ ಶೇಕಡಾ 50ರಷ್ಟು, ರಾಜ್ಯ ಸರ್ಕಾರದ ಶೇಕಡಾ 15ರಷ್ಟು ಮತ್ತು ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಶೇಕಡಾ 35ರಷ್ಟು ಪಾಲು ಹೊಂದಿವೆ.

ನಿಮ್ಮ ಅವಶ್ಯಕತೆಗಳಿಗೆ ಹಾಗೂ ನಿಮ್ಮ ಹಣಕಾಸು ಯೋಜನೆಗಳಿಗೆ ಸರಿಹೊಂದುವ ನಮ್ಮ ಬ್ಯಾಂಕಿನ ಠೇವಣಿ ಮತ್ತು ಸಾಲ ಯೋಜನೆಗಳೊಂದಿಗೆ ನಮ್ಮ ಕೆಜಿಬಿ(KGB) ಪಡೆಯ ಸೌಜನ್ಯಯುತ ಸೇವೆ ಸಲ್ಲಿಸಲು ನಮಗೆ ಸಂತೋಷವೆನಿಸುತ್ತದೆ.

ನಮ್ಮ ಬ್ಯಾಂಕಿನಲ್ಲಿ ಲಭ್ಯವಿರುವ ಹಲವು ಯೋಜನೆ ಹಾಗೂ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಬ್ಯಾಂಕ್ ಶಾಖೆಗೆ ಅಥವಾ
ಶ್ರೀ ರವಿ ಭೀ ಕೋಟೆಪ್ಪಗೋಲ್
ಶಾಖಾ ವ್ಯವಸ್ಥಾಪಕರು
ಹಿರೇಗೊಣ್ಣಾಗರ ಶಾಖೆ,
ಮೊಬೈಲೆ ಸಂಖ್ಯ 9538248683
ಸಂಪರ್ಕಿಸಿ.

ಹೆಚ್ಚಿನ ವಿವರಗಳಿಗೆ : ನಮ್ಮ ವೆಬ್ ಸೈಟ್ www.karnatakagraminbank.com ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಿರಿ.

“ಗ್ರಾಮೀಣ ಅಭಿವೃದ್ಧಿಯಲ್ಲಿ ನಮ್ಮದು ಸಿಂಹಪಾಲು”

“ನಿಮಗೆ ಹೆಚ್ಚಿನ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿ”

“ತಮ್ಮೆಲ್ಲರಿಗೂ ಕರ್ನಾಟಕ ಗ್ರಾಮೀಣ ಬ್ಯಾಂಕಿಂಗ್ ಶುಭಾಶಯಗಳು”

-ಮರಿಗೌಡ ಬಾದರದಿನ್ನಿ

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...