ಡೌರಿ ಫ್ರೀ ನಿಖಾಃಹ್ ವತಿಯಿಂದ ಮೊದಲ ಶುಲ್ಕ ರಹಿತ ಮ್ಯಾಟ್ರಿಮೊನಿಯಲ್ ವೆಬ್ಸೈಟ್ ಪಾದಾರ್ಪಣೆ

ಮಂಗಳೂರು(www.vknews.in)ಡೌರಿ ಫ್ರೀ ನಿಖಾಹ್ ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಕಳೆದ ವರ್ಷದಲ್ಲಿ ಐದು ನೂರರಷ್ಟು ಇದ್ದ ಸದಸ್ಯರು ಇಂದು ಸಾವಿರದ ಐದು ನೂರಕ್ಕೂ ಅಧಿಕ ಸದಸ್ಯರಿದ್ದಾರೆ. ಇಲ್ಲಿಯವರೆಗೆ 350ಕ್ಕೂ ಅಧಿಕ ಹೆಣ್ಣು ಮಕ್ಕಳಿಗೆ ವರನನ್ನು ಹೊಂದಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಮತ್ತು ಬಡ ಹೆಣ್ಣು ಮಕ್ಕಳ ಕಣ್ಣೀರು ಒರೆಸಲು ಬಹಳಷ್ಟು ಶ್ರಮಿಸಿದೆ.

ಇದುವರೆಗೂ ವೆಬ್ ಸೈಟ್ ಮೂಲಕ ಇಷ್ಟೊಂದು ದೊಡ್ಡ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ ಆದರೆ ಇದೀಗ ಡೌರಿ ಫ್ರೀ ನಿಖಾಹ್ ನ ಆಂಡ್ರಾಯ್ಡ್ ಆಪ್ ಲಾಂಚ್ ಮಾಡಲಾಗಿದೆ. ವೈಬ್ ಸೈಟ್ ಮತ್ತು ಆಪ್ ಅನ್ನು ಯಾವ ರೀತಿ ಉಪಯೋಗಿಸುವುದು ಎಂಬುವುದರ ಮಾಹಿತಿ ಕೆಳಗಿನಂತಿದೆ.

ಮೊದಲನೇದಾಗಿ ನಿಮ್ಮ ಬ್ರೌಸರ್ ನ ಸರ್ಚ್ ಬಾರ್ ನಲ್ಲಿ *_www.freenikah.in_* ಟೈಪ್ ಮಾಡಿ,

ಆದ ನಂತರ ನಮ್ಮ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಮೆನುಅನ್ನು ಕ್ಲಿಕ್ ಮಾಡಿ *_Submit profile_* ಕ್ಲಿಕ್ ಮಾಡಿ ಕಾಲಿ ಇರುವ ಜಾಗಗಳನ್ನು ಸೂಕ್ತ ಮಾಹಿತಿಯೊಂದಿಗೆ ಬರ್ತಿಮಾಡಿ. ಇದೇ ರೀತಿಯಾಗಿ ಆಂಡ್ರಾಯ್ಡ್ ಆಪ್ ನಲ್ಲಿಯೂ ಸಹಿತ ಬಳಸಬಹುದು..

ವಿವರಗಳನ್ನು ಭರ್ತಿ ಮಾಡುವ ವಿಧಾನ

ಹುಡುಗ ಅಥವ ಹುಡುಗಿಯ ಹೆಸರು:

ವಯಸ್ಸು

ಎತ್ತರ

ವಿದ್ಯಾರ್ಹತೆ

ಮದರಸ ವಿದ್ಯಾರ್ಹತೆ

ಲಿಂಗ

ಊರು

ಸಂಪೂರ್ಣ ವಿಳಾಸ

ಮೊಬೈಲ್ ನಂಬರ್:

ವಾಟ್ಸಪ್ ನಂಬರ್:

ಐಡಿ ಪ್ರೂಫ಼್:

ಈ ರೀತಿಯಾಗಿ ವಿವರಗಳನ್ನು ಭರ್ತಿ ಮಾಡಬೇಕು ತದನಂತರ ನಿಮಗೆ ಡೌರಿ ಫ್ರೀ ನಿಖಾಃಹ್ ಗ್ರೂಪ್‌ನ ತಂಡದ ಪ್ರಪೋಸಲ್ ವಿಚಾರಕರಿಂದ ಕರೆ ಬರುತ್ತದೆ. ನೀವು ಕೊಟ್ಟಿರುವ ವಿಳಾಸ ಮತ್ತು ಪರಿಚಯ ಸರಿಯಿದೆಯೆಂದು ದೃಢಪಡಿಸಿದ ನಂತರ ಅದನ್ನು ವೈಬ್ ಸೈಟ್, ಆಂಡ್ರಾಯ್ಡ್ ಆಪ್ ಮತ್ತು ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್ಡೇಟುಗಳನ್ನು ರವಾನಿಸುತ್ತಾರೆ.

ಮದುವೆ ಸೆಟ್ ಆದ ಬಳಿಕ ತಕ್ಷಣವೇ ಇವರಿಗೆ ತಿಳಿಸಬೇಕು. ಆದನಂತರ ನೀವು ಕೊಟ್ಟಿರುವ ಪ್ರಪೋಸಲ್ ಅನ್ನು ತಕ್ಷಣವೇ ಅಪ್ಡೇಟ್ ನಿಂದ ರಿಮೂವ್ ಮಾಡಲಾಗುತ್ತದೆ.

ಡೌರಿ ಪ್ರೀ ನಿಖಾಹ್ ತಂಡ ವೈಬ್ ಸೈಟ್, ಆಂಡ್ರಾಯ್ಡ್ ಆಪ್ ಅನ್ನು ಪದಾರ್ಪಣೆ (ಲಾಂಚ್) ಮಾಡಿದ ಉದ್ದೇಶ ಸಮುದಾಯದಲ್ಲಿ ಅದೆಷ್ಟೋ ಹುಡುಗಿಯರು ಮದುವೆಯಾಗದೆ ಉಳಿದು ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನಾದರೂ ಒಂದು ಬದಲಾವಣೆ ಬರಲಿ “ವರದಕ್ಷಿಣೆ” ಎಂಬ ಪದ ಅಳಿದು ಹೋಗಲಿ ಹೆಣ್ಣು ಹೆತ್ತ ಕರುಳಿಗೆ ಅನ್ಯಾಯವಾಗದಿರಲಿ ಎಂದಾಗಿದೆ. ಬನ್ನಿ ಇವರ ಜೊತೆ ಕೈ ಜೋಡಿಸಿ ವರದಕ್ಷಿಣೆ ಮುಕ್ತ ಮತ್ತು ಬಡವರ ಏಳಿಗೆಗಾಗಿ ಶ್ರಮಿಸಿ.

ಆಂಡ್ರಾಯ್ಡ್ ಆಪ್ ಅನ್ನು ನಮ್ಮ ಅಡ್ಮಿನ್ ರವರಲ್ಲಿ ಕೇಳಿ ಪಡೆಯಿರಿ.

ಪ್ರಪೋಸಲ್ ಭರ್ತಿ ಮಾಡುವುದು ಹೇಗೆಂದು ತಿಳಿಯಲು ವೀಡಿಯೊ ವೀಕ್ಷಿಸಿ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...