
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ವಾಮದಪದವು ಸಮೀಪದ ಆಲದಪದವು ಅಲ್-ಮಸ್ಜಿದುಲ್ ಬದ್ರಿಯಾ ಮತ್ತು ನೂರುಲ್ ಇಸ್ಲಾಂ ಮದರಸದ ಅಧ್ಯಕ್ಷರಾಗಿ ಹಂಝ ಬಸ್ತಿಕೋಡಿ ಪುರನಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ಗೌರವಾಧ್ಯಕ್ಷ ಅಬ್ಬಾಸ್ ಬಸ್ತಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ನೂತನ ಸಾಲಿನ ಗೌರವಾಧ್ಯಕ್ಷರಾಗಿ ಪುತ್ತುಮೋನು ನಡಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬು ನಡಾಯಿ, ಉಪಾಧ್ಯಕ್ಷರಾಗಿ ಸಿರಾಜ್ ಬಸ್ತಿಕೋಡಿ, ಕಾರ್ಯದರ್ಶಿಯಾಗಿ ರಿಯಾಝ್ ಬಸ್ತಿಕೋಡಿ, ಕೋಶಾಧಿಕಾರಿಯಾಗಿ ಇಮ್ರಾನ್ ಬಸ್ತಿಕೋಡಿ ಅವರನ್ನು ಆರಿಸಲಾಗಿದೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.