ಮುಈನುಸುನ್ನ ಹಾವೇರಿ ಮುಖಾಬಲ-2k19 ಕಾರ್ಯಕ್ರಮಕ್ಕೆ ಸಂಭ್ರಮದ ಸಮಾಪ್ತಿ

ಹಾವೇರಿ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕದ ಪ್ರತಿಷ್ಠಿತ ಮತಲೌಕಿಕ ವಿದ್ಯಾಸಂಸ್ಥೆ ಮುಈನುಸುನ್ನ ಮೋರಲ್ ಅಕಾಡಮಿ ಸವಣೂರು, ಹಾವೇರಿ ಇದರ ವಿದ್ಯಾರ್ಥಿ ಸಂಘಟನೆ ರಿಸಾಲತುಸ್ಸುನ್ನದ ವತಿಯಿಂದ ನಡೆದ ಮುಖಾಬಲ 2K19 ಮಿಲಾದ್ ಫೆಸ್ಟ್ ಕಾರ್ಯಕ್ರಮಕ್ಕೆ ವಿಜೃಂಭಣೆಯಿಂದ ಸಮಾಪ್ತಿಗೊಂಡಿತು.

ಮುಈನುಸುನ್ನ ಹಿಫ್ಳುಲ್ ಕುರ್‌ಆನ್ ಕಾಲೇಜ್, ‌ಶರೀಅತ್ ಕಾಲೇಜ್, ‘ವೀ- ಗಾರ್ಡನ್’ ಸಂಸ್ಥೆಗಳ ವಿದ್ಯಾರ್ಥಿಗಳು, ಕನ್ನಡ, ಉರ್ದು, ಇಂಗ್ಲಿಷ್, ತಮಿಳ್, ಅರಬಿಕ್, ಮಲಯಾಳಂ ಭಾಷೆಗಳಲ್ಲಿನ ‌ಭಾಷಣ, ನ‌ಅತ್ , ಸಂವಾದ, I.Q Test, ಪ್ರಮೋವೀಡಿಯೋ,ಫೀಚರ್ ರೈಟಿಂಗ್ ,ಬುರ್ದಾ ಅಲಾಪನೆ ಸೇರಿದಂತೆ ವಿನೂತನ ಮಾದರಿಯ 75 ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನಡೆಸಿದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನ‌ಈಮಿ ಅಲ್ ಹಿಮಮಿ ಯವರ ಅದ್ಯಕ್ಷ ತೆಯಲ್ಲಿ ನಡೆದ ಸಮಾರೋಪ ಸಮಾವೇಶವನ್ನು ಸಂಸ್ಥೆಯ ಮ್ಯಾನೇಜರ್ ಸಯ್ಯಿದ್ ತ್ವಾಹಾ ಹಾಮಿದ್ ರಿಫಾಯಿ ಯವರ ಪ್ರಾರ್ಥನೆಯ ಮೂಲಕ ಚಾಲನೆ ನೀಡಲಾಯಿತು. ಸವಣೂರು ಅಂಜುಮಾನ್ ಅದ್ಯಕ್ಷ ರಾದ ಜಿಷಾನ್ ಪಠಾಣ್ ಉದ್ಘಾಟಿಸಿದರು. ಆಸಾರ್ ಮೊಹಲ್ಲಾ ಖತೀಬ್ ಹಝ್ರತ್ ಮೌಲಾನ ಮುಶ್ತಾಕ್ ಮಿಸ್ಬಾಹಿ, ಸವಣೂರು ಡಿವಿಶನ್ SSF ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಅತ್ಹರ್ ಅಸ್ಸಖಾಫಿ, ಅದ್ಯಕ್ಷ ರಾದ ಮಖ್ತಾರ್ ಮಾಸ್ಟರ್ ಹತ್ತಿಮತ್ತೂರು ಮುಂತಾದವರು ಮಾತನಾಡಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...