ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮೀಟಿ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಇದರ ವತಿಯಿಂದ ಪ್ರವಾದೀ ಜನ್ಮದಿನಾಚರಣೆಯ ಪ್ರಯುಕ್ತ ಒಂದು ತಿಂಗಳ ರಬೀಅ್ ಕ್ಯಾಂಪೈನ್ 2019 ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡು ಮೀಲಾದ್ ಫೆಸ್ಟ್, ಮೌಲಿದ್ ಮಜ್ಲಿಸ್ ನೊಂದಿಗೆ ಪ್ರೌಡೋಜ್ವಲ ಸಮಾಪ್ತಿಗೊಂಡಿತು.
ಜಮಾಅತ್ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಿ,ಖತೀಬ್ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಉದ್ಘಾಟಿಸಿ, ಪ್ರವಾದಿಯವರು ಸರ್ವ ಜನಾಂಗಕ್ಕೂ, ಕಾಲಕ್ಕೂ ಒಳಿತು ಮತ್ತು ಕ್ಷೇಮವನ್ನು ಬಯಸಿದ್ದು ಆ ಸಂದೇಶಗಳನ್ನು ಜಗತ್ತಿಗೆ ಸಾರಿರುವರು ಎಂದು ರಬೀಇನ ಸಂದೇಶ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈದು ಅವರು ಹೇಳಿದರು.ಸಮಾರಂಭದಲ್ಲಿ ವಿವಿಧ ಭಾಷೆಗಳಲ್ಲಿ ವೈವಿಧ್ಯಮಯ ಮೀಲಾದ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮದ್ರಸ ವಿದ್ಯಾರ್ಥಿಗಳಿಂದ ನಡೆಯಿತು.
ಮೌಲಿದ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮದ ಬಳಿಕ ಸನ್ಮಾನ ಮತ್ತು ಬಹುಮಾನ ವಿತರಣೆ ನಡೆಯಿತು.ರಕ್ಷಕ ಪೋಷಕರಿಗೆ ಬುಕ್ ಟೆಸ್ಟ್ ಎಂಬ ವಿಷೇಶ ಸ್ಪರ್ಧೆ ನಡೆಸಿದ್ದು, ವಿಜೇತರನ್ನು ಅಭಿನಂದಿಸಲಾಯಿತು.ಸ್ಪರ್ಧೆಗಳ ಬಹುಮಾನಗಳನ್ನು ಅನ್ಸಾರ್ ಕೊಡುಗೆ ನೀಡಿ, ಉಳಿದಂತೆ ವಿವಿಧ ಬಹುಮಾನಗಳನ್ನು ಎಸ್ ಬಿ ಎಸ್ ಆಯೋಜಿಸಿದ್ದು, ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ವತಿಯಿಂದ ಟ್ರೋಫಿ ನೀಡಲಾಯಿತು.
ಈ ಸಂದರ್ಭ ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಅನ್ಸಾರಿಯ್ಯಾ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಗ್ರೀನ್ ವ್ಯೂ ಸ್ಕೂಲ್ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್, ಮದ್ರಸ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಜಮಾಅತ್ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಕೆ ಬಿ ಮುಹಮ್ಮದ್ ಹಾಜಿ,ಹಾಜಿ ಮುಸ್ತಫ ಕೆ ಎಂ, ಅನ್ಸಾರ್ ಪ್ರಧಾನ ಕಾರ್ಯದರ್ಶಿ ಹನೀಫ ಬಿ ಎಂ,ಮದ್ರಸ ಸಮಿತಿ ಸದಸ್ಯರಾದ ಹಾಜಿ ಅಬ್ದುರ್ರಹ್ಮಾನ್ ಕಯ್ಯಾರ್, ಹಾಜಿ ಅಬ್ದುಲ್ ಗಫ್ಫಾರ್ ಮುಂತಾದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಿದರು.
ಮದ್ರಸ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಪುಂಡೂರ್ ರವರ ನಾಯಕತ್ವದಲ್ಲಿ ಅಧ್ಯಾಪಕರುಗಳಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಲಂ,ಶೌಖತ್ ಅಲಿ ಅಲ್ ಅಮಾನಿ ವಯನಾಡ್, ಹುಸೈನಾರ್ ಮದನಿ ಕುಂಜಿಲ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ, ಅಬ್ದುಲ್ ಖಾದರ್ ಮದನಿ ಅಜ್ಜಾವರ,ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ, ಅಬ್ದುರ್ರಹ್ಮಾನ್ ಸಅದಿ ಕರ್ನೂರ್, ನಿಝಾರ್ ಸಖಾಫಿ ಮುಡೂರು, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮಗಳ ಯಶಸ್ವಿಗಾಗಿ ಶಕ್ತಿ ಮೀರಿ ಶ್ರಮಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಸಾವಿರಾರು ಮಂದಿಗೆ ತಬರ್ರುಖ್ ವಿತರಿಸಲಾಯಿತು.ಮದ್ರಸ ಪೂರ್ವವಿದ್ಯಾರ್ಥಿಗಳ ಸಹಕಾರದಿಂದ ಡೆಕೋರೇಶನ್ ಮತ್ತು ಸ್ವಯಂ ಸೇವಕರ ಸೇವನೆ ಶ್ಲಾಘನೀಯವಾಯಿತು.
ವರದಿ – ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.