ಎಸ್ಸೆಸ್ಸೆಫ್ ಬಾಗಲಕೋಟೆ: ನಿರಾಶ್ರಿತ ಹೆಣ್ಮಕ್ಕಳ ವಿವಾಹ ಡಿ.15ಕ್ಕೆ

ಬಾಗಲಕೋಟೆ(ವಿಶ್ವಕನ್ನಡಿಗ ನ್ಯೂಸ್): ಮದುವೆಯ ದಿನಾಂಕ ನಿಗದಿ ಪಡಿಸಿ ತಯಾರಿ ನಡೆಸುತ್ತಿದ್ದ ವೇಳೆ ಉಂಟಾದ ಭಾರೀ ಜಲ ಪ್ರವಾಹದಲ್ಲಿ ಮನೆ ಕಳಕೊಂಡು ಸಮೀಪದ ಉರ್ದು ಶಾಲೆಗಳಲ್ಲಿ ನಿರಾಶ್ರಿತರಾಗಿದ್ದ ಎರಡು ಕುಟುಂಬಗಳ ಹೆಣ್ಮಕ್ಕಳ ವಿವಾಹವನ್ನು ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲೆಯ ವತಿಯಿಂದ ಕಲಾದಗಿ ಶಾದೀ ಮಹಲ್ ನಲ್ಲಿ ನಡೆಸಿ ಕೊಡಲಾಗುತ್ತಿದೆ.

ಡಿಸೆಂಬರ್ 15 ರವಿವಾರ ಬೆಳಗ್ಗೆ 11ಗಂಟೆಗೆ ನಿಖಾಹ್ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ಅಧ್ಯಕ್ಷತೆ ವಹಿಸಲಿದ್ದು,
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ NKM ಶಾಫಿ ಸಅದಿ ಬೆಂಗಳೂರು, ಮುಸ್ಲಿಂ ಜಮಾಅತ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮೌಲಾನ ಅಬೂ ಸುಫ್ಯಾನ್ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ದಿಕ್ಸೂಚಿ ಭಾಷಣ ಮಾಡಲಿದ್ದು, ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಆರಿಫ್ ಕೋಡಿ, ರಾಜ್ಯ ಎಸ್ಸೆಸ್ಸೆಫ್ ನಾಯಕರಾದ ಮೌಲಾನಾ ಗುಲಾಂ ಹುಸೈನ್ ನೂರಿ ಗಂಗಾವತಿ, ಕೆ ಎಂ ಮುಸ್ತಫಾ ನಈಮಿ ಹಾವೇರಿ, ನವಾಝ್ ಬೆಂಗಳೂರು, ಅಬ್ದುರ್ರವೂಫ್ ಕುಂದಾಪುರ ಹಾಗೂ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...