ಯೂರೊ ಕಿಡ್ಸ್ ಇಂಟರ್‍ನ್ಯಾಷನಲ್ ವಲ್ರ್ಡ್ ಎಜ್ಯುಕೇಶನ್ ಅವಾರ್ಡ್

 ವಲ್ರ್ಡ್ ಎಜ್ಯುಕೇಶನ್ ಅವಾರ್ಡ್‍ಅನ್ನು, ವೈಯಕ್ತಿಕವಾಗಿ ಅಥವಾ ಸಾಂಸ್ಥಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿಪರ ಕೊಡುಗೆ ಮತ್ತು ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುವುದು

ಬೆಂಗಳೂರು (www.vknews.in) : ಭಾರತದ ಅಗ್ರಗಣ್ಯ ಹಾಗೂ ಬೆಂಗಳೂರಿನಲ್ಲಿ 100 ಪ್ರಿಸ್ಕೂಲ್‍ಗಳನ್ನು ಹೊಂದಿರುವ ಯೂರೋ ಕಿಡ್ಸ್ ಇಂಟರ್‍ನ್ಯಾಷನಲ್‍ಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು, ಆರಂಭಿಕ ಬಾಲ್ಯ ಬೆಳವಣಿಗೆ ಪಠ್ಯಕ್ರಮದಲ್ಲಿ ಅನುಶೋಧನೆಗಾಗಿ ಪ್ರಶಸ್ತಿ ಪಡೆದಿದೆ.

ಯೂರೊಕಿಡ್ಸ್ ಸದಾ ವಿನೂತನ ಹಾಗೂ ಪ್ರಸ್ತುತವೆನಿಸುವ ಕಲಿಕಾ ಕ್ರಮವನ್ನು ಅಳವಡಿಸಿಕೊಂಡು ತನ್ನ ವಿದ್ಯಾರ್ಥಿಗಳು ಮುಂದಿರುವಂತೆ ನೋಡಿಕೊಳ್ಳುತ್ತಾ ಬಂದಿದೆ.
ಅತ್ಯಂತ ಅರ್ಥಗರ್ಭಿತವಾದ ಯುನೋಯಾ ಎಂಬ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿ, ಮಕ್ಕಳ ಅರ್ಥಗರ್ಭಿತ ಚಟುವಟಿಕೆಗಳಿಗೆ ಅಭ್ಯಾಸ ಮಾಡಿಸುತ್ತಿದೆ. ಅರ್ಥಗರ್ಭಿತ ಕ್ರಮಗಳಾದ ಗಮನ, ಸ್ಥಿತಿಸ್ಥಾಪಕತ್ವ ಮತ್ತು ದಯಾಗುಣಗಳು ಇಲ್ಲಿ ಕಲಿಕೆಯ ಆಧಾರವಾಗಿದ್ದು, ಎಳೆವಯಸ್ಸಿನಲ್ಲೇ ಅದ್ಭುತ ಕೌಶಲಗಳನ್ನು ರೂಢಿಸಿಕೊಳ್ಳಲು ಭದ್ರ ಬುನಾದಿಯನ್ನು ಹಾಕಲು ನೆರವಾಗುತ್ತಿದೆ. .

ಯೂರೊಕಿಡ್ಸ್, ಕಳೆದ ಹದಿನೇಳು ವರ್ಷಗಳಿಂದ ಮೋಜಿನ ಜತೆಯ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಮೂಲಕಆರಂಭಿಕ ಹಂತದ ಮಕ್ಕಳ ಕಾಳಜಿ ಹಾಗೂ ಶಿಕ್ಷಣವನ್ನು ಮರುವ್ಯಾಖ್ಯಾನಿಸಿದೆ. ಮಗು ಮೊದಲು ಎಂಬ ಸಿದ್ಧಾಂತವು ಇಲ್ಲಿನ ಪ್ರಮುಖ ತತ್ವವಾಗಿದ್ದು, ಇದು ಮಕ್ಕಳ ಅಭಿವೃದ್ಧಿ, ಸುರಕ್ಷೆ ಮತ್ತು ತೊಡಗಿಸಿಕೊಳ್ಳುವಿಕೆ ಅಗತ್ಯತೆಗಳನ್ನು ಖಾತರಿಪಡಿಸುತ್ತದೆ. ಜತೆಗೆ ಇಲ್ಲಿ ಮನೆಯ ವಾತಾವರಣವಿರುತ್ತದೆ. 360 ಡಿಗ್ರಿ ತೊಡಗಿಸಿಕೊಳ್ಳುವಿಕೆಯು ಯೂರೊಕಿಡ್ಸ್ ಸಂಸ್ಥೆಯನ್ನು ಮಕ್ಕಳು ಎರಡನೇ ಮನೆಯಾಗಿ ಪರಿವರ್ತಿಸಿದೆ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಯೂರೊ ಕಿಡ್ಸ್ ಇಂಟರ್‍ನ್ಯಾಷನಲ್‍ನ ಸಹ ಸಂಸ್ಥಾಪಕ ಮತ್ತು ಸಮೂಹ ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಪ್ರಜೋಧ್ ರಂಜನ್, “ಈ ಪ್ರಶಸ್ತಿಯು ನಾವು ಯುರೋಕಿಡ್ಸ್‍ನಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ನಮ್ಮ ಪಠ್ಯಕ್ರಮದ ಮುಖ್ಯವಾದ ಗಮನವೆಂದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಪ್ರತಿಯೊಂದು ಕಾರ್ಯಚಟುವಟಿಕೆಯೂ ತಜ್ಞರಿಂದ ವಿಶೇಷವಾಗಿ ರೂಪಿಸಲ್ಪಟ್ಟಿರುತ್ತದೆ. ಮಗುವು ಅತ್ಯಂತ ಸ್ಮಾರ್ಟ್, ಸ್ಪಂದನಾತ್ಮಕ ಪೀಳಿಗೆಯಾಗಿ ರೂಪುಗೊಳ್ಳುತ್ತಿದ್ದು, ಅವರ ಜ್ಞಾನದಾಹ ಮತ್ತು ಕಲಿಕಾ ಸಾಮಥ್ರ್ಯ ಹೆಚ್ಚುತ್ತದೆ. ಆದ್ದರಿಂದ ನಾವು ಆಧುನಿಕ ಹಾಗೂ ಭವಿಷ್ಯಕ್ಕೆ ಸಜ್ಜುಗೊಳಿಸುವಂಥ ಕೋರ್ಸ್‍ಗಳನ್ನು ಅಗತ್ಯಕ್ಕೆ ತಕ್ಕಂತೆ ರೂಪಿಸುತ್ತೇವೆ ಹಾಗೂ ಪ್ರಯೋಗಾತ್ಮಕ ಕಲಿಕೆಯ ಮೂಲಕ 21ನೇ ಶತಮಾನದ ಕೌಶಲವನ್ನು ರೂಢಿಸಿಕೊಳ್ಳಲು ನೆರವಾಗುತ್ತೇವೆ” ಎಂದು ಹೇಳಿದ್ದಾರೆ.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...