ಅತ್ಯಾಚಾರ ಪ್ರಕರಣದಲ್ಲಿ ಭಾರತೀಯ ನ್ಯಾಯಾಲಯದ ನಿಧಾನಗತಿ ವ್ಯವಸ್ಥೆಯೇ ಕಾಮುಕರಿಗೆ ವರದಾನ!

(ವಿಶ್ವ ಕನ್ನಡಿಗ ನ್ಯೂಸ್) : ಭಾರತದಲ್ಲಿ ಹೆಣ್ಣಿಗೆ ದೇವತೆಯ ಸ್ಥಾನ ನೀಡಿ ದೇವರೆಂದು ಪೂಜಿಸುತ್ತಾರೆ, ಅದೇ ಕಾರಣದಿಂದಲೇ ಭಾರತದಲ್ಲಿ ಹರಿಯುವ ಪ್ರತಿಯೊಂದು ನದಿಗಳಿಗೆ ಹೆಣ್ಣಿನ ಹೆಸರನ್ನಿಟ್ಟು ಮಹಿಳೆಯರಿಗೆ ಗೌರವ ನೀಡುತ್ತಾ ಬಂದಿದೆ, ಆದರೆ ಅದೇ ಹೆಣ್ಣು ಕಾಮುಕ ನರ ರಾಕ್ಷಸರ ದಾಹಕ್ಕೆ ತುತ್ತಾದಾಗ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡುತ್ತದೆ.

-2012ರಲ್ಲಿ ನಿರ್ಭಯ ಪ್ರಕರಣ ನಡೆಯಿತು, 23 ವರ್ಷದ ಪ್ಯಾರ ಮೆಡಿಕಲ್ ವಿಧ್ಯಾರ್ಥಿ ಮೇಲೆ ದಿಲ್ಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಅತ್ಯಾಚಾರ ಹಾಗು ಕೊಲೆ ಪ್ರಕರಣ ನಡೆಯಿತು, ಈ ಬಗ್ಗೆ ದಿಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದರೂ ಮರು ಪರಿಶೀಲನೆ ಅರ್ಜಿ, ಕ್ಷಮದಾನ ಅರ್ಜಿ ಎಂದು ಕಾಲ ಕಳೆಯುತ್ತದೆ.

-2017,ರಲ್ಲಿ ನಡೆದ ಉನ್ನಾವೋ ಪ್ರಕರಣ ನಡೆಯಿತು, ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಯಿತು, ಆ ಪ್ರಕರಣದಲ್ಲಿ ರಾಷ್ಟ್ರೀಯ ಪಕ್ಷವೊಂದರ ಮಾಜಿ ಶಾಸಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗುತ್ತದೆ.

-2018,ರಲ್ಲಿ ಕಥುವ ಪ್ರಕರಣ ನಡೆಯಿತು, ಜಮ್ಮು ಕಾಶ್ಮೀರದ ಹಳ್ಳಿಯೊಂದರಲ್ಲಿ ಎಂಟು ವರ್ಷದ ಬಾಲೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆಯಿತು, ಕಳೆದ ಆರು ತಿಂಗಳ ಹಿಂದೆ ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾದರೂ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂಬುವುದು ಸಂತ್ರಸ್ತರ ಆಕ್ರೋಶವಾಯಿತು.

-2019,ರ ಅಂದ್ರೆ ಕೇವಲ ಹತ್ತು ದಿನಗಳ ಹಿಂದೆ ಪಶುವೈದ್ಯೆ ದಿಶಾ ಪ್ರಕರಣ ನಡೆಯಿತು, ನಾಲ್ಕು ಜನ ದುಷ್ಕರ್ಮಿಗಳ ತಂಡ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ ಬಳಿಕ ಪೆಟ್ರೋಲ್ ಸುರಿದು ಸುಟ್ಟು ಕೊಂದರು, ಆ ನಾಲ್ಕೂ ಅಪರಾಧಿಗಳನ್ನು ಆತ್ಯಾಚಾರ ಮಾಡಿದ ಸ್ಥಳದಲ್ಲಿಯೇ ಪೋಲೀಸರು ಎನ್’ಕೌಂಟರ್ ಮಾಡಿ ಮುಗಿಸಿದರು, ಪೋಲೀಸರ ಸಾಹಸದ ಬಗ್ಗೆ ದೇಶದಲ್ಲೆಡೆ ಪ್ರಶಂಸೆಯೂ ವ್ಯಕ್ತವಾಯಿತು, ಹೀಗೆ ಈ ರೀತಿಯ ಕೃತ್ಯ ದೇಶದ್ಯಾಂತ ಮಾತ್ರವಲ್ಲದೆ ನಮ್ಮ ರಾಜ್ಯದಲ್ಲಿ ಅಷ್ಟೇ ಯಾಕೆ ನಮ್ಮ ನೆರೆಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿಯೂ ಹಲವಾರು ಅತ್ಯಾಚಾರ, ಕೊಲೆ ಮಾಡಿದಂತಹ ಪ್ರಕರಣಗಳು ಇನ್ನೂ ಜೀವಂತವಾಗಿದೆ. ಅಲ್ಲದೆ ಇದರ ವಿರುದ್ಧ ಸಾಮಾಜಿಕವಾಗಿ ಹೋರಾಟ ಮಾಡಿದಂತ ಮಹಾನರು ದೌರ್ಜನ್ಯ ಅನುಭವಿಸಿದ ಘಟನೆಯೂ ಇದೆ.

ಅದೆಲ್ಲಾ ಹಾಗಿರಲಿ ನಾವು ಇತ್ತೀಚೆಗೆ ದೇಶಾದ್ಯಂತ ಗಮನ ಸೆಳೆಯುತ್ತಿರುವ ಅತ್ಯಾಚಾರದ ಎರಡು ಪ್ರಕರಣಗಳತ್ತ ಬರೋಣ,
ಒಂದು ಉತ್ತರ ಪ್ರದೇಶದಲ್ಲಿ ನಡೆದ ಉನ್ನಾವೋ ಪ್ರಕರಣ.
ಅತ್ಯಾಚಾರ ನಡೆದ ಸಂತ್ರಸ್ತೆ ಕಳೆದ ಗುರುವಾರ ಬೆಳಗ್ಗೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಆಗಮಿಸಬೇಕಾಗಿತ್ತು. ರಾಯಬರೇಲಿಗೆ ಬರಲು ರೈಲು ನಿಲ್ದಾಣಕ್ಕೆ ಬೆಳಗಿನ ಜಾವ 4.30ಕ್ಕೆ ಆಗಮಿಸಿದ ಸಂತ್ರಸ್ತೆಯನ್ನು ಆಕೆಯ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದ ಇಬ್ಬರು ಆರೋಪಿಗಳು ಸೇರಿದ ತಂಡ ತಡೆಹಿಡಿದು ಮಾರಣಾಂತಿಕ ಹಲ್ಲೆ ಮಾಡಿ ಸಂತ್ರಸ್ತೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಯಿತು.

ಸಹಾಯಕ್ಕಾಗಿ ಅದೆಷ್ಟೋ ಕೂಗಾಟ ನಡೆದರೂ ಗೂಂಡಾಗಳಿಗೆ ಹೆದರಿ ಯಾರೂ ಮುಂದೆ ಬಾರದಾಗ ಆಕೆ ತನ್ನ ದೇಹ ಶೇ.90ರಷ್ಟು ಸುಟ್ಟಿದ್ದರೂ ಸಹಾಯಕ್ಕಾಗಿ ಸುಮಾರು 1 ಕಿ.ಮೀ. ನಡೆದುಕೊಂಡೇ ಹೋಗಿ ಪೊಲೀಸರಿಗೆ ಕರೆ ಮಾಡಿ ಸಹಾಯ ಪಡೆದು, ಪೊಲೀಸರು, ಸಂತ್ರಸ್ತೆಯನ್ನು ಲಕ್ನೋದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ, ಗಂಭೀರವಾದ ಸ್ಥಿತಿಯಲ್ಲೂ ಆಕೆ, ತನಗೆ ಥಳಿಸಿ, ಇರಿದು ಜೀವಂತವಾಗಿ ಬೆಂಕಿ ಹಚ್ಚಿದ್ದರು ಅಂತ ಮ್ಯಾಜಿಸ್ಟ್ರೇಟ್​ಗೆ ಹೇಳಿಕೆ ನೀಡುತ್ತಾಳೆ, ಆ ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಖನೌದ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ದೆಹಲಿಯ ಅಸ್ಪತ್ರೆಗೆ ರವಾನೆ ಮಾಡಲಾಗುತ್ತೆ, ಸುಟ್ಟಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿ ಸಂತ್ರಸ್ತೆಯನ್ನು ಪ್ಲಾಸ್ಟಿಕ್ ಸರ್ಜರಿ ಬರ್ನ್ ಘಟಕದಲ್ಲಿ ದಾಖಲಿಸಲಾಗತ್ತೆ ನಂತರದ ಕೆಲವೇ ಗಂಟೆಗಳ ಅವಧಿಯಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೆ ಮೃತಪಟ್ಟಲು, ಇದು ನಮ್ಮ ದೇಶದ ನಿಧಾನಗತಿ ನ್ಯಾಯಂಗ ವ್ಯವಸ್ಥೆಯ ಮೇಲೆ ದೇಶದಲ್ಲೆಡೆ ಆಕ್ರೋಶ ಮುಗಿಲು ಮುಟ್ಟುತ್ತೆ ಇಡೀ ವಿಶ್ವವೇ ತಲೆ ಎತ್ತಿ ನೋಡುತ್ತಿದ್ದ ಭಾರತ ಇಂದು ವಿಶ್ವದ ಮುಂದೆ ತಲೆ ತಗ್ಗಿಸಬೇಕಾಗಿ ಬರುತ್ತದೆ.

ಈ ರೀತಿಯ ಅದೆಷ್ಟೋ ಅತ್ಯಾಚಾರ ಪ್ರಕರಣಗಳು ಭಾರತದ ತೀರ ಹಳ್ಳಿ ಪ್ರದೇಗಳಲ್ಲಿ ದಿನಾ ನಡೀತಾನೆ ಇದೆ, ಬಡವರ ಮರ್ಯಾದೆ ಅಂಜಿಕೆ ಅಥವ ಶ್ರೀಮಂತರ ಹಣಬಲ, ಜನಬಲದ ಮುಂದೆ ಎಲ್ಲವೂ ನಾಲ್ಕು ಗೋಡೆಗಳ ನಡುವೆ ಮುಚ್ಚಿ ಹೋಗುತ್ತದೆ, ಇದೆಲ್ಲವನ್ನೂ ಗಮನಿಸುವಾಗ ನಮ್ಮ ಮನಸ್ಸಿನಲ್ಲಿ ಒಂದು ನಿರ್ಧಾರ ಸ್ವಷ್ಟವಾಗುವುದು ಏನೆಂದರೆ ಕಾನೂನು ರೀತಿಯಲ್ಲಿ ತಪ್ಪು ಎಂದು ಎಚ್.ಆರ್.ಸಿ ಹೇಳಿಕೊಂಡರೂ ನ್ಯಾಯದ ರೀತಿಯಲ್ಲಿ ಇತ್ತೀಚೆಗೆ ಹೈದರಾಬಾದ್ ಪೋಲೀಸರ ಗನ್ ಶಬ್ದ ಮಾಡಿದ್ದು ಸರಿಯಾಗಿದೆ!

✒ ಅದ್ದಿ ಬೊಳ್ಳೂರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...