(ವಿಶ್ವ ಕನ್ನಡಿಗ ನ್ಯೂಸ್) : ಡಾ.ಪಿ.ದಯಾನಂದ ಪೈ – ಪಿ. ಸತೀಶ್. ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಯುವ ರೆಡ್ ಕ್ರಾಸ್ನ ವಾರ್ಷಿಕ ವಿಶೇಷ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು, ಉದ್ಘಾಟನಾಕಾರರಾಗಿ Rtn. PHF. CA ಶಾಂತರಾಮ್ ಶೆಟ್ಟಿ ಭಾರತೀಯ ರೆಡ್ಕ್ರಾಸ್, ದ.ಕ ಜಿಲ್ಲೆ ರವರು ಆಗಮಿಸಿದ್ದರು. ಭಾರತೀಯ ರೆಡ್ಕ್ರಾಸ್ನ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ತಮ್ಮ ಉಧ್ಘಾಟನಾ ಭಾಷಣದಲ್ಲಿ “ಮನುಷ್ಯತ್ವವೇ ಮನುಕುಲದ ಶ್ರೇಷ್ಠತೆ” ಎಂದು ನುಡಿದರು.
ಕ್ರಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಗಣಪತಿ ಗೌಡ, ನೋಡಲ್ ಅಧಿಕಾರಿ -ಯುವ ರೆಡ್ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ, ಇವರು ರೆಡ್ಕ್ರಾಸ್ನ ತತ್ತ್ವಗಳನ್ನು ಶಿಬಿರಾರ್ಥಿಗಳಿಗೆ ಅರ್ಥೈಸಿದರು. ಶ್ರೀಯುತ ಮಾಧವ ಸುವರ್ಣರವರು ಅತಿಥಿಯಾಗಿ ಆಗಮಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತಾನಾಡಿದರು, ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಪ್ರೊ. ರಾಜಶೇಖರ್ ಹೆಬ್ಬಾರ್, ಕಾಲೇಜು ಪ್ರಾಂಶುಪಾಲರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಬದುಕಿನ ಮೌಲ್ಯಗಳ ಕಲಿಕೆ ಶಿಬಿರಗಳಿಂದ ಸಾಧ್ಯ” ಎಂದು ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ತರಬೇತುದಾರರಾಗಿ ಶ್ರೀಯುತ ಅಶ್ವಿನ್ ಕುಮಾರ್ ರವರು ಉಪಸ್ಥಿತರಿದ್ದರು ಕಾಲೇಜಿನ ಯುವ ರೆಡ್ಕ್ರಾಸ್ ಸಂಯೋಜಕರಾದ ಡಾ. ಮಹೇಶ್.ಕೆ.ಬಿ, ಪ್ರೊ. ಮಣಿಭೂಷಣ ಡಿಸೋಜ, ಪ್ರೊ. ನಯನ ಕುಮಾರಿ. ಕೆ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಉತ್ಸುಕತೆಯಿಂದ ಪಾಲ್ಗೊಂಡರು. ಶಿಬಿರಾರ್ಥಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಧನ್ಯವಾದಗೈದರು.