ಅವಳ ನೆರಳು ತೊರೆದು ಹೋದ ಗಳಿಗೆಯಿಂದ ಮಾತು ಮೌನಕ್ಕೆ ಶರಣು
ಮಧುರ ಪ್ರೀತಿ ಕಳೆದು ಹೋದ ಸಮಯದಿಂದ ಸಾವು ಜೀವಕ್ಕೆ ಶರಣು
ಬರಿಯ ದೇಹಕ್ಕೆ ಬದುಕಲು ನೂರೆಂಟು ಮಜಬೂರಿ ಸಬೂತುಗಳಿವೆ
ಸತ್ತ ಮೇಲೂ ಬದುಕಿ ಕಾಡುವ ನಿನ್ನ ಹಸಿ ಪ್ರೇಮವು ವಿರಹಕ್ಕೆ ಶರಣು
ಅವರು ಮೊಹಬ್ಬತ್ತಿನ ಗೋಡೆಗೆ ಬರೀ ಹೆಸರು ಗೀಚಿದ್ದಾರೆ ಬಣ್ಣಕ್ಕೆ ಗುಣವಿಲ್ಲ
ಯಾರಿಗೂ ದಕ್ಕದ ಅನುಭವಕ್ಕೆ ಅವರು ಕುರುಡು ಬೆರಳ ಸ್ಪರ್ಶಕ್ಕೆ ಶರಣು
ಇರುವ ಮಣ್ಣಲ್ಲೆ ಹೂಳಲು ಖಬರ್ ಸ್ತಾನಗಳ ಕೊರತೆ ಪ್ರೀತಿಯೂ ಸತ್ತಾಗ
ಭೂಮಿಗೆ ಬೇಲಿ ಹಾಕಿ ಬೆತ್ತಲಾದ ಜನರ ನಗ್ನ ಜ್ಞಾನ ಮೌಢ್ಯಕ್ಕೆ ಶರಣು
ಯುದ್ಧಕ್ಕೆ ನಿಂತ ಅವರಿಗೆ ತಲೆಗಳ, ಕೊಲೆಗಳ ಲೆಕ್ಕವೇ ಸಿಕ್ಕುತ್ತಿಲ್ಲ ಸಾವನ್
ಗೋರಿಯ ಮೇಲೆ ಹಾಕಿದ ಚದ್ದರಿನ ಕತ್ತಲು ದಾಟಿದ ಹೂವಿನ ಸುಮಕ್ಕೆ ಶರಣು
ಸಾವನ್ ಕೆ ಸಿಂಧನೂರು