ಸಿಎಎ: ‘ಕೋಲಂ’(ರಂಗೋಲಿ) ಹಿಂದೆ ಪಾಕಿಸ್ತಾನದ ಲಿಂಕನ್ನು ಹುಡುಕುತ್ತಿರುವ ತಮಿಳುನಾಡು ಪೋಲೀಸರು

ಚೆನ್ನೈ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ತಿದ್ದುಪಡಿ ಚಳವಳಿಯ ಅಂಗವಾಗಿ ರಂಗೋಲಿಯನ್ನು ರಚಿಸಿರುವ ಹಿನ್ನಲೆಯಲ್ಲಿ ಚೆನ್ನೈ ಪೊಲೀಸರು ಪ್ರತಿಭಟನಾಕಾರರ ಪಾಕಿಸ್ತಾನದ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಯ ಆರೋಪ ಹೊತ್ತಿದ್ದ ಮಹಿಳಾ ಸ್ವಯಂಸೇವಕರ ಪಾಕಿಸ್ತಾನ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಮನೆಯಂಗಳದಲ್ಲಿ NRC ವಿರುದ್ದದ ಬರಹವನ್ನು ಹೊಂದಿರುವ ಕೋಲಂ(ರಂಗೋಲಿ) ಬಿಡಿಸಿದ ಗಾಯತ್ರಿ ಹಾಗೂ ಮಹಿಳಾ ಸ್ವಯಂ ಸೇವಕರ ಸಂಘಕ್ಕೆ ಪ್ರತಿಭಟನೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಆರೋಪದಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಕೋಲಂ(ರಂಗೋಲಿ) ಪ್ರಾರಂಭಿಸಿದ್ದಲ್ಲಿ ಗಾಯತ್ರಿಯವರು ಮೊದಲಿಗರು, ನಂತರ ಅದು ಇಡೀ ತಮಿಳುನಾಡಿಗೆ ಹರಡಿತು. ಗಾಯತ್ರಿ ಅವರನ್ನು ಡಿಸೆಂಬರ್ 29 ರಂದು ವಿವಾಹ ಸ್ಥಳದಿಂದ ಬಂಧಿಸಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಪಾಕಿಸ್ತಾನದೊಂದಿಗಿನ ಅವರ ಸಂಬಂಧವನ್ನು ಪರಿಶೀಲಿಸುತ್ತೇವೆ ಎಂದು ಆಯುಕ್ತರು ಹೇಳಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...