ರಮ್ಮಿಸರ್ಕಲ್ ಕಾಮ್‍ಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಪ್ರಚಾರ ರಾಯಭಾರಿ

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸೂಪರ್ ಸ್ಟಾರ್ ಸುದೀಪ್ ಸಂಜೀವ್ ಅವರು ಭಾರತದ ಅತಿದೊಡ್ಡ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರಂ ರಮ್ಮಿಸರ್ಕಲ್.ಕಾಮ್‍ಗೆ ಪ್ರಚಾರ ರಾಯಭಾರಿಯಾಗಿರುತ್ತಾರೆ. ಈ ಬ್ರಾಂಡ್ ಇಂದು ತನ್ನ ಹೊಸ ಮಾರಾಟ ಅಭಿಯಾನ #ಸೂಪರ್‍ಎಂಟರ್‍ಟೈನ್‍ಮೆಂಟ್ ಅನಾವರಣಗೊಳಿಸಿದೆ. ಈ ವಿಡಿಯೊ ತನ್ನ ಬ್ರಾಂಡ್ ಸಂಪರ್ಕವನ್ನು ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳಕ್ಕೆ ವಿಸ್ತರಿಸಲಿದೆ. ಕಿಚ್ಚ ಸುದೀಪ್ ಅವರು ಒಬ್ಬ ಯಶಸ್ವಿ ಹಾಗೂ ವಿಶಿಷ್ಟ ಭಾರತೀಯ ನಟರಾಗಿದ್ದು, ಎರಡು ದಶಕಗಳಿಂದ ವೃತ್ತಿಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, “ರಮ್ಮಿಸರ್ಕಲ್ ಜತೆ ಗುರುತಿಸಿಕೊಳ್ಳಲು ನನಗೆ ಅತೀವ ಸಂತಸವಾಗುತ್ತಿದೆ. ಏಕೆಂದರೆ ಇದು ಸವಾಲುಗಳನ್ನು ಯೋಜನಾಬದ್ಧವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ ಹಾಗೂ ಇದು ಕುತೂಹಲಕರ ಆಟವಾಗಿದೆ. ರಮ್ಮಿಸರ್ಕಲ್ ಟೀಮ್ ಜತೆ ಮುಂಬೈನಲ್ಲಿ ಈ ತಿಂಗಳ ಆರಂಭದಲ್ಲಿ ಶೂಟಿಂಗ್‍ನಲ್ಲಿ ಪಾಲ್ಗೊಂಡದ್ದು ಸಂತೋಷದಾಯಕ ಅನುಭವ” ಎಂದು ಬಣ್ಣಿಸಿದರು.

ಈ ಬ್ರಾಂಡ್ ಈಗಾಗಲೇ ಬಂಗಾಲಿ ನಟ ಮತ್ತು ಸೂಪರ್ ಸ್ಟಾರ್ ಪ್ರೊಸೆಂಜಿತ್ ಚಟರ್ಜಿಯರೊಂದಿಗೆ ಸಹಿ ಮಾಡಿದ್ದು, ಅವರ ಜತೆಗಿನ #ಭರಪೂರ್‍ಮನೋರಂಜ್ ಪ್ರಚಾರ ಅಭಿಯಾನಕ್ಕೆ ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ ಚಾಲನೆ ನಿಡಿತ್ತು. ರಮ್ಮಿಸರ್ಕಲ್.ಕಾಮ್ ಸಂವಹನಾ ಮಾರ್ಗದ ಮೂಲಕ ಹೆಚ್ಚು ಹೆಚ್ಚು ಸ್ಥಳೀಯವಾಗಿಸುವ ಕಾರ್ಯತಂತ್ರದ ಮೂಲಕ ಜನಪ್ರಿಯವಾಗಿದೆ. ಈ ಮೂಲಕ ಇಡೀ ಭಾರತದಲ್ಲಿ ವಿಸ್ತøತ ಆಟಗಾರರ ನೆಲೆ ಸೃಷ್ಟಿಸಿದೆ. ಭಾಷಾಂತರ, ಸ್ಥಳೀಯಗೊಳಿಸುವಿಕೆ ಮತ್ತು ಮಾರುಕಟ್ಟೆ ಏಜೆನ್ಸಿಯಾದ ಏಷ್ಯನ್ ಅಬ್ಸಲ್ಯೂಟ್ ಹೇಳುವಂತೆ, ಇಂಗ್ಲಿಷ್ ಭಾಷೆಯನ್ನಾಡುವ ಗೇಮರ್‍ಗಳು ಶೇಕಡ 27ರಷ್ಟು ಮಾತ್ರ ಇದ್ದು, ಶೇಕಡ 73ರಷ್ಟು ಮಂದಿ ಸ್ಥಳೀಯ ಭಾಷೆಗಳನ್ನು ಮಾತನಾಡುವವರು.

ಈ ಸಂದರ್ಭದಲ್ಲಿ ಮಾತನಾಡಿದ ಗೇಮ್ಸ್ 24/7ನ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭವೀನ್ ಪಾಂಡ್ಯ, “ಸುದೀಪ್ ಸಂಜೀವ್ ಜತೆಗೆ ನಮ್ಮ ಪ್ರಚಾರ ಅಭಿಯಾನವನ್ನು ಆರಂಭಿಸಲು ಅತೀವ ಸಂತಸವಾಗುತ್ತಿದೆ. ಅವತು ನಮ್ಮ ರಮ್ಮಿಸರ್ಕಲ್‍ನ ಪ್ರಚಾರ ರಾಯಭಾರಿಯಾಗಿರುತ್ತಾರೆ. ಕಳೆದ ಕೆಲ ವರ್ಷಗಳಿಂದ ರಮ್ಮಿ ಸರ್ಕಲ್ ನಂಬಲಸಾಧ್ಯ ಸ್ಪಂದನೆಯನ್ನು ಪಡೆದಿದ್ದು, ಈ ಸಹಭಾಗಿತ್ವದ ಮೂಲಕ, ನಮ್ಮ ಆಟಗಾರರನ್ನು ಮತ್ತಷ್ಟು ತೊಡಗಿಸಿಕೊಳ್ಳುವ ಉದ್ದೇಶ ನಮ್ಮದು” ಎಂದು ವಿವರಿಸಿದರು.

“ಆನ್‍ಲೈನ್ ರಮ್ಮಿ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಒಂದು ಕೌಶಲ ಹಾಗೂ ಇನ್ನೊಂದು ಮನೋರಂಜನೆ. ಸುದೀಪ್ ಅವರು ಅತ್ಯದ್ಭುತ ನಟ ಹಾಗೂ ಶ್ರೇಷ್ಠ ಮನೋರಂಜಕ ವ್ಯಕ್ತಿ. ನಮ್ಮ ಆಟವನ್ನು ಪ್ರಚಾರ ಮಾಡಲು ಅವರಿಗಿಂತ ಉತ್ತಮರನ್ನು ಹುಡುಕುವುದು ಸಾಧ್ಯವೇ ಇಲ್ಲ” ಎಂದು ಅಭಿಪ್ರಾಯಪಟ್ಟರು.

ರಮ್ಮಿ ಸರ್ಕಲ್, ಗೇಮ್ಸ್ 24/7 ನಿರ್ವಹಿಸುವ ಆನ್‍ಲೈನ್ ಡೆಸ್ಕ್‍ಟಾಪ್ ಮತ್ತು ಮೊಬೈಲ್ ಗೇಮಿಂಗ್ ಪ್ಲಾಟ್‍ಫಾರಂ ಆಗಿದೆ. ಲಭ್ಯವಿರುವ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಸ್ಪರ್ಧಾತ್ಮಕ ಕೌಶಲ ಆಧರಿತ ರಮ್ಮಿ ಮತ್ತು ಫ್ಯಾಂಟಸಿ ಕ್ರಿಕೆಟ್ ಆಟಗಳನ್ನು ಪರಿಚಯಿಸಿದೆ. ಇದು ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಉದ್ಯಮದ ಭಾಗವಾಗಿದ್ದು, ನಾಸ್ಕಾಂ ವರಿದಿಯ ಪ್ರಕಾರ ಭಾರತದ ಮೊಬೈಲ್ ಗೇಮ್ಸ್ ಮಾರುಕಟ್ಟೆ $628 ಮಿಲಿಯನ್ ಬಳಕೆದಾರರನ್ನು ತಲುಪುವ ನಿರೀಕ್ಷೆ ಇದೆ ಮತ್ತು 2020ರ ವೇಳೆಗೆ ಇದರ ಮೌಲ್ಯ 110 ಕೋಟಿ ಡಾಲರ್ ಇದೆ, ಇದು 2016ರಲ್ಲಿ $290 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಭಾರತ ಡೌನ್‍ಲೋಡ್ ವಿಷಯದಲ್ಲಿ ದೊಡ್ಡದಾಗಿದೆ.

2019ರ ವೇಳೆಗೆ ರಮ್ಮಿಸರ್ಕಲ್.ಕಾಮ್ ಒಂದು ಕೋಟಿ ನೋಂದಾಯಿತ ಆಟಗಾರರನ್ನು ಹೊಂದಿದ್ದು, ಗ್ರ್ಯಾಂಡ್ ರಮ್ಮಿ ಚಾಂಪಿಯನ್‍ಶಿಪ್ ಹಾಗೂ ದೀಪಾವಳಿ ರಮ್ಮಿ ಟೂರ್ನಿಯಂಥ ವಾರ್ಷಿಕ ಟೂರ್ನಿಗಳನ್ನೂ ಆಯೋಜಿಸುತ್ತಿದೆ. ಈ ಮೂಲಕ ಆಟಗಾರರು ದೇಶದ ವಿವಿಧೆಡೆಗಳಿಂದ ಆಗಮಿಸುವ ರಮ್ಮಿ ಪ್ರಿಯರೊಂದಿಗೆ ಸ್ಪರ್ಧಿಸಿ ಆಕರ್ಷಕ ಬಹುಮಾನಗಳನ್ನೂ ಗೆಲ್ಲುವರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...