ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರವರಿ 7,8 ಹಾಗೂ 9 ರಂದು ಆಯೋಜಿಸುತ್ತಿರುವ ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮತ್ತು ಮಾರ್ಶಲ್ ಆಟ್ರ್ಸ್ ಸಂಸ್ಥೆಯ 8 ಮಂದಿ ಟ್ವೆಕಾಂಡೋ ಪಟುಗಳು ಆಯ್ಕೆಯಾಗಿದ್ದಾರೆ.
ಟ್ವೆಕಾಂಡೋ ಸ್ಪರ್ಧೆಯ 21 ಕೆ ಜಿ ವಿಭಾಗದಲ್ಲಿ ಮೆಲ್ಕಾರ್ ಎಸ್ಎಂಆರ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮುಹಮ್ಮದ್ ಶಕೀಬ್, 24 ಕೆ ಜಿ ವಿಭಾಗದಲ್ಲಿ ಅಕ್ಕರಂಗಡಿ ದಾರುಲ್ ಇಸ್ಲಾಂ ಶಾಲಾ ವಿದ್ಯಾರ್ಥಿ ಮುಹಮ್ಮದ್ ಮುಸ್ತಫಾ, 27 ಕೆ ಜಿ, 31 ಹಾಗೂ 49 ಕೆ ಜಿ ವಿಭಾಗದಲ್ಲಿ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಮುಹಮ್ಮದ್ ಹಿಶಾಂ, ಮುಝಮ್ಮಿರುಲ್ ಅಮೀನ್, ಮುಹಮ್ಮದ್ ಅಯಾನ್, 35 ಕೆ ಜಿ ವಿಭಾಗದಲ್ಲಿ ಗೋಳ್ತಮಜಲು ಜೆಮ್ ಪಬ್ಲಿಕ್ ಶಾಲಾ ವಿದ್ಯಾರ್ಥಿ ಮುಹಮ್ಮದ್ ಶಾಮಿಲ್, 44 ಕೆ ಜಿ ವಿಭಾಗದಲ್ಲಿ ಅಗ್ರಾರ್ ಹೋಲಿ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮುಹಮ್ಮದ್ ಫಝಲ್ ಎ, ಹೆಣ್ಣು ಮಕ್ಕಳ ವಿಭಾಗದಲ್ಲಿ 38 ಕೆಜಿ ವಿಭಾಗದಲ್ಲಿ ಅಡ್ಯಾರ್ ಬರಾಕಾ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮಾ ಇಶ್ರತ್ ಅವರು ಮಿನಿ ಒಲಿಂಪಿಕ್ ಕ್ರೀಡಾಕೂಟದ ಟ್ವೆಕಾಂಡೋ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟೇಕ್ವಾಂಡೋ ತರಬೇತುದಾರ ಇಸಾಕ್ ನಂದಾವರ ತಿಳಿಸಿದ್ದಾರೆ.