ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಂಟ್ವಾಳದ ಟ್ವೆಕಾಂಡೋ ವಿದ್ಯಾರ್ಥಿಗಳ ಪದಕ ಸಾಧನೆ

ಮಿನಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಪಾಣೆಮಂಗಳೂರಿನ ಟ್ವೆಕಾಂಡೋ ವಿದ್ಯಾರ್ಥಿಗಳು

 

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಿಂಪಿಕ್ ಕ್ರೀಡಾಕೂಟಗದಲ್ಲಿ ಭಾಗವಹಿಸಿದ್ದ ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮತ್ತು ಮಾರ್ಶಲ್ ಆರ್ಟ್ಸ್ ಸಂಸ್ಥೆಯ ಟ್ವೆಕಾಂಡೋ ಕ್ರೀಡಾಪಟುಗಳಿಗೆ 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆಲ್ಲುವ ಮೂಲಕ ಸಾಧನೆಗೈದಿದ್ದಾರೆ.

 

ಮುಝಮ್ಮಿರುಲ್ ಅಮೀನ್ 31 ಕೆ ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಮುಹಮ್ಮದ್ ಹಿಶಾಂ 27 ಕೆ ಜಿ ವಿಭಾಗದಲ್ಲಿ, ಮುಹಮ್ಮದ್ ಶಾಕಿಬ್ 21 ಕೆ ಜಿ ವಿಭಾಗದಲ್ಲಿ ಹಾಗೂ ಮುಹಮ್ಮದ್ ಅಯಾನ್ 48 ಕೆ ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ತರಬೇತುದಾರ ಇಸಾಕ್ ನಂದಾವರ ತರಬೇತಿ ನೀಡಿದ್ದಾರೆ.

 

ಫೆ 7,8 ಹಾಗೂ 9 ರಂದು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಒಲಿಂಪಿಕ್ ಸಂಸ್ಥೆ ಇವುಗಳ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...