ಮಲ್ನಾಡ್ ಗಲ್ಫ್ ಅಸೋಸಿಯೇಷನ್ (ಯಂಜಿಎ)-2020ರ ಸಾಲಿನ ವಾರ್ಷಿಕ ಮಹಾಸಭೆ


ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಮಲ್ನಾಡ್ ಗಲ್ಫ್ ಅಸೋಸಿಯೇಷನ್ ನ ವಾರ್ಷಿಕ ಮಹಾಸಭೆ ದಿನಾಂಕ 6/03/2020 ರಂದು ದಮ್ಮಾಮಿನ ಹೋಲಿಡೇಸ್ ಹೋಟೆಲಿನಲ್ಲಿ ಶಾಫೀ ಝೈನಿ ಕೊಡಗುರವಲ ರವರ ದುವಾ ಆಶೀರ್ವಚನ ಮತ್ತು ರಶೀದ್ ಅಹ್ಮದ್ ರವರ ಪವಿತ್ರ ಖುರ್ಆನ್ ಪಠಣದೊಂದಿಗೆ ಆರಂಭಗೊಂಡಿತು.ಅಬ್ದುಲ್ ಸತ್ತಾರ್ ಕ್ಲೌಡ್-7 ಸ್ವಾಗತ ಭಾಷಣವನ್ನು ನಿರ್ವಹಿಸಿದರು . ನಾಲ್ಕು ಘಟಕಗಳ ಲೆಕ್ಕ ಪತ್ರವನ್ನು ಆಯಾ ಘಟಕಗಳ ಕಾರ್ಯದರ್ಶಿಗಳು ಸವಿವರವಾಗಿ ಸಭೆಯಲ್ಲಿ ಮಂಡಿಸಿದರು. ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಜ. ಆಸ್ಗರ್ ಇಬ್ರಾಹಿಮ್ ತಲಗೂರು ಸಂಕ್ಷಿಪ್ತವಾಗಿ ಎಲ್ಲಾ ಲೆಕ್ಕ ಪತ್ರ ವರದಿಯನ್ನು ಮಂಡಿಸಿದರು.

ಜಿದ್ದಾ ಘಟಕದ ಅಧ್ಯಕ್ಷರಾದ ಮುಶ್ತಾಕ್ ಅಹ್ಮದ್, ರಿಯಾದ್ ಘಟಕದ ಅಧ್ಯಕ್ಷರಾದ ಜುನೈದ್ ಇಸ್ಮಾಯಿಲ್, ಜುಬೈಲ್ ಘಟಕದ ಅಧ್ಯಕ್ಷರಾದ ಶಮೀಮ್ ಅಹ್ಮದ್ ಇಪಿಸಿಸಿ ಮತ್ತು ದಮ್ಮಾಮ್-ಕೋಬರ್ ಘಟಕದ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಯಂಜಿಎಯ ದೈನಂದಿನ ಚಟುವಟಿಕೆ ಮತ್ತು ಏಳಿಗೆಯ ಕುರಿತು ಸಂಪೂರ್ಣ ಮನಗತ ಮಾಡಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜ. ಬಷೀರ್ ಬಾಳ್ಳುಪೇಟೆ ತನ್ನ ಜವಾಬ್ದಾರಿಯನ್ನು ಸರ್ವಾನುಮತಗಳಿಂದ ಹೊಸತಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶರೀಫ್ ಕಳಸ ರವರಿಗೆ ಹಸ್ತಾಂತರ ಮಾಡಿದರು. 2020 ರ ಸಾಲಿನ ರಮದಾನ್ ಕಿಟ್ಟ್ ಸಂಗ್ರಹಣೆಗಾಗಿ ರಮದಾನ್ ಕಿಟ್ ಸ್ಲಿಪ್ಪಿನ ಪ್ರತಿಯನ್ನು ಈಗಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜ. ಶರೀಫ್ ಕಳಸ ಮತ್ತು ಜ. ಬಷೀರ್ ಬಾಳ್ಳುಪೇಟೆ ಅನಾವರಣಗೊಳಿಸಿದರು.ಹೊಸತಾಗಿ ರಚನೆಗೊಂಡ ಕೇಂದ್ರ ಸಮಿತಿಯ ವಿವರಗಳು ಇಂತಿದೆ. :

ಅಧ್ಯಕ್ಷರು : . ಶರೀಫ್ ಕಳಸ
ಗೌರವಾಧ್ಯಕ್ಷರು: ಬಷೀರ್ ಬಾಳ್ಳುಪೇಟೆ
ಅಂತಾರಾಷ್ಟ್ರೀಯ ಸಂಯೋಜಕರು : ಅಬ್ದುಲ್ ಸತ್ತಾರ್ – ಕ್ಲೌಡ್-7
ಪ್ರಧಾನ ಕಾರ್ಯದರ್ಶಿ : ರಷೀದ್ ಅಹ್ಮದ್- ಬೆಂಗಳೂರು

ಸಂಘಟನೆಯು ಹಮ್ಮಿಕೊಂಡಿರುವ 2020ದ ಧ್ಯೇಯಗಳು. ಮಲೆನಾಡಿನ ಭಾಗದಲ್ಲಿ 3 ಎಕರೆ ಸ್ಥಳ ಖರೀದಿ. ಮಲೆನಾಡಿನಾದ್ಯಾಂತ ಬಡತನದಿಂದ ಹಿಂದುಳಿದಿದ್ದು
ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಹಾಯಕರಾದ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಆರ್ಥಿಕವಾಗಿ ನೆರವು ನೀಡುವುದು. ಪ್ರಕ್ರತಿ ವಿಕೋಪಕ್ಕೆ ತುತ್ತಾದವರಿಗೆ ತುರ್ತಾಗಿ ಸಹಾಯ ನೀಡುವುದು. ಮದುವೆ, ವಿಧವೆಯರಿಗೆ ಹಾಗೆ ವೈದ್ಯಕೀಯ. ಮಲೆನಾಡಿನ ನಾಲ್ಕು ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ರಮದಾನ್ ಕಿಟ್ಟ್ ವಿತರಿಸುವುದು ಮತ್ತು ಇನ್ನು ಹಲವು ಸಮುದಾಯಕ್ಕೆ ಸಹಾಯಕವಾಗುವ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದೆ.

ಹೊಸತಾಗಿ ಸೆಂಟ್ರಲ್ ಕಮಿಟಿ ಮತ್ತು ಕೋರ್ ಕಮಿಟಿ ವಾಟ್ಸಾಪ್ ಗ್ರೂಪುಗಳನ್ನು ರಚಿಸಲಾಯಿತು. ನೆರೆದಂತಹ ಗಣ್ಯ ವ್ಯಕ್ತಿಗಳಿಗೆ ಮತ್ತು ಘಟಕಗಳ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. MGA ಯ ಏಳಿಗೆಗಾಗಿ ಶ್ರಮಿಸುವ ಎಲ್ಲಾ ಕಾರ್ಯಕರ್ತರಿಗೆ ಮತ್ತು ರಿಯಾದ್, ಜುಬೈಲ್, ಜಿದ್ದಾ, ದಮ್ಮಾಂ ಮತ್ತು ಕೋಬರ್ ನಿಂದ ಕೇಂದ್ರೀಯ ಸಭೆಗೆ ಆಗಮಿಸಿದಂತಹ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಧನ್ಯವಾದಗಳೊಂದಿಗೆ ಮುಕ್ತಾಯ ಗೊಳಿಸಲಾಯಿತು.ಅಬ್ದುಲ್ ಸತ್ತಾರ್ ಕ್ಲೌಡ್-7 ಕಾರ್ಯಕ್ರಮ ನಿರೂಪಿಸಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...