ವಿಟ್ಲ : ಟೆಂಟ್ ಹಾಕಿ ಜೀವಿಸುತ್ತಿರುವ 6 ಕುಟುಂಬದ 21 ಸದಸ್ಯರಿಗೆ ರಶೀದ್ ವಿಟ್ಲ ನೇತೃತ್ವದಲ್ಲಿ ಆಹಾರ ಸಾಮಾಗ್ರಿ ವಿತರಣೆ

(www.vknews.com) : ವಿಟ್ಲ ಸಮೀಪದ ಕುಡ್ತಮುಗೇರು ಆಟದ ಮೈದಾನದಲ್ಲಿ ಟೆಂಟ್ ಹಾಕಿ ಜೀವಿಸುತ್ತಿರುವ ಹುಣಸೂರು, ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಭಾಗದ 6 ಕುಟುಂಬದ 21 ಸದಸ್ಯರಿಗೆ ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ನೇತೃತ್ವದಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ವಿಟ್ಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ರೆಡ್ಡಿ ಅವರ ಸೂಚನೆ ಮೇರೆಗೆ ದಿನಸಿ ಸಾಮಾಗ್ರಿ ವಿತರಿಸಿದೆ.

ಇದೀಗಾಗಲೇ ನಾಲ್ಕು ದಿವಸದಲ್ಲಿ ವಿಟ್ಲ ಪರಿಸರದ ಉಕ್ಕುಡ, ಕಾನತ್ತಡ್ಕ, ಬೈರಿಕಟ್ಟೆ, ಕನ್ಯಾನ, ಅಳಿಕೆ, ಕೊಳಂಬೆ, ಮಂಗಲಪದವು, ಕುಡ್ತಮುಗೇರು, ಮಂಕುಡೆ ಮೊದಲಾದ ಪ್ರದೇಶಗಳ ಸುಮಾರು 79 ಅಶಕ್ತ ಕುಟುಂಬಗಳಿಗೆ ಜಾತಿ ಮತ ಬೇಧವಿಲ್ಲದೇ ತಲಾ ಒಂದು ತಿಂಗಳ ರೇಶನ್ ವಿತರಿಸಲಾಗಿದೆ. ಈ ಸೇವೆ ಇನ್ನೂ ಮುಂದುವರಿಯಲಿದೆ. ರಶೀದ್ ವಿಟ್ಲ ಜೊತೆಗೆ ನೌಶೀನ್ ಬದ್ರಿಯಾ ಹಾಗೂ ಇಸಾಕ್ ವಿಟ್ಲ ಸಹಕರಿಸಿದರು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...