ಕೊರೊನಾವನ್ನು ಮಾನವೀಯತೆಯಿಂದ ತಡೆಗಟ್ಟಬಹುದೇ ಹೊರತು ಲಾಠಿ ಯಿಂದಲ್ಲ: ಇಕ್ಬಾಲ್ ಬೆಳ್ಳಾರೆ

ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಪ್ರಪಂಚದಾದ್ಯಂತ ಕಳೆದ ಹಲವು ದಿನಗಳಿಂದ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಕೊರೊನಾ ವೈರಸ್ ನ ಕಾರಣದಿಂದ ಜನರು ಆತಂಕ ಮತ್ತು ಭಯದಿಂದ ಜೀವಿಸುತ್ತಿದ್ದಾರೆ.

ಈ ಮಾರಕ ರೋಗದಿಂದ15000 ಕ್ಕೂ ಅಧಿಕ ಮಂದಿ ಜೀವವನ್ನು ಕಳೆದುಕೊಂಡರು, ಐದು ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರಾಗಿ ಜೀವನ್ಮರಣ ಹೋರಾಟದಲ್ಲಿ ಇದ್ದಾರೆ, ಇನ್ನು ಅದೆಷ್ಟೋ ಮಂದಿ ಮನೆಯೊಳಗೆ ನಿಗಾಃ ದಲ್ಲಿರುವಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ಪ್ರಪಂಚ ಇದೆ.

ಭಾರತದಲ್ಲಿ ಕೂಡ ದಿನನಿತ್ಯ ಈ ಅಪಾಯಕಾರಿ ವೈರಸ್ ಹೆಚ್ಚಳವಾಗುತ್ತಿದೆ.
ಅದೇ ರೀತಿ ದೇಶದಲ್ಲಿ ಈಗಾಗಲೇ ಇಪ್ಪತ್ತೊಂದು ದಿವಸಗಳ ಕಾಲ ಲಾಕ್ ಡೌನ್ ಹೇರಳಾಗಿದ್ದು, ಈ ಒಂದು ಕರ್ಫ್ಯೂನಿಂದ ಜನರು ಹಲವಾರು ಸಂಕಷ್ಟಗಳನ್ನು ಎದುರಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಈ ವೈರಸ್ ನ್ನು ತಡೆಗಟ್ಟಬೇಕಾದರೆ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹಾಗೆಯೇ ಸಂಕಷ್ಟದಲ್ಲಿ ಇರುವ ಜನರಿಗೆ ದಿನಬಳಕೆಯ ದಿನಸಿ ಮೆಡಿಕಲ್ ಮುಂತಾದ ಸಾಮಾಗ್ರಿಗಳನ್ನು ಜನರಿಗೆ ಮುಟ್ಟಿಸಬೇಕಾದ ಕರ್ತವ್ಯ ಕೂಡ ಆಡಳಿತ ನಡೆಸುವ ಸರ್ಕಾರಕ್ಕೆ ಇದೆ.

ಆದರೆ ಇದನ್ನು ಯಾವುದನ್ನೂ ಮಾಡದ ಸರಕಾರ ಜನರು ದಿನನಿತ್ಯದ ಸಾಮಗ್ರಿಗಳಿಗಾಗಿ ಬೀದಿಗೆ ಬಂದಂತಹ ಸಂದರ್ಭದಲ್ಲಿ ಅವರನ್ನು ಯಾವುದೇ ರೀತಿಯಲ್ಲಿ ವಿಚಾರಿಸದೇ ಕೆಲವು ಪೋಲಿಸರು ಕರ್ತವ್ಯ ದುರ್ಬಳಕೆ ಮಾಡಿಕೊಂಡು ರಕ್ತ ಬರುವಂತಹ ರೀತಿಯಲ್ಲಿ ಮನುಷ್ಯ ಜೀವಿ ಎಂಬ ಕನಿಕರವಿಲ್ಲದೇ ಲಾಠಿಯಿಂದ ಬಡಿಯುವಂತಹ ಹಾಗೂ ಗೋಲಿಬಾರ್ ನಡೆಸುವಂತಹ ಬಹಳಷ್ಟು ಅಮಾನವೀಯ ಕ್ರೌರ್ಯಗಳು ರಾಜ್ಯದಲ್ಲಿ ನಡೆಯುತ್ತಾ ಇದೆ.

ಲಾಠಿಯ ದರ್ಪದಿಂದ ಅಥವಾ ಈ ರೀತಿಯಾದಂತಹ ಕಠೋರತೆಯನ್ನು ತೋರಿಸುವುದರ ಮೂಲಕ ಕೊರೊನಾ ವೈರಸ್ ಅಥವಾ ಇನ್ನಾವುದೇ ವೈರಸ್ ನ್ನು ತಡೆಗಟ್ಟುಲು ಖಂಡಿತವಾಗಿಯು ಸಾದ್ಯವಿಲ್ಲ.ಈ ಒಂದು ವೈರಸ್ ನ್ನು ತಡೆಗಟ್ಟಬೇಕಾದರೆ ಪೋಲಿಸರು ಕೂಡ ಬಹಳಷ್ಟು ಮುಂಜಾಗ್ರತೆಯಿಂದ, ಮಾನವೀಯತೆಯಿಂದ,ವಿವೇಕದಿಂದ ವರ್ತಿಸಿದರೆ ಮಾತ್ರ ಸಾದ್ಯವಿರುವುದು.

ಸರ್ಕಾರದ ವೈಫಲ್ಯತೆಯಿಂದ ಜನರಿಗೆ ದಿನನಿತ್ಯದ ದಿನಸಿ ಸಾಮಾಗ್ರಿಗಳು,ಮೆಡಿಕಲ್, ವೈದ್ಯಕೀಯ ವ್ಯವಸ್ಥೆ ಇದು ಯಾವುದು ಕೂಡ ದೊರಕದಂತಹ ಸಂದರ್ಭದಲ್ಲಿ ಜನರು ಹಸಿವಿನಿಂದ ಬೀದಿಗೆ ಬರುವಂತಹದು ಸರ್ವೇ ಸಾಮಾನ್ಯ. ಆದ್ದರಿಂದ ಈಗಾಗಲೇ ಕೊರೊನಾ ವೈರಸ್ ನಿಂದ 21 ದಿವಸಗಳ ಲಾಕ್ ಡೌನ್ ವಿಧಿಸಿ ಒಂದು ವಾರ ಕಳೆದರು ಸರಕುಗಳು ಬರ್ತಾ ಇಲ್ಲ, ಅಂಗಡಿಗಳಲ್ಲಿ ಬೇಕಾದಷ್ಟು ಸಾಮಾಗ್ರಿಗಳಿಲ್ಲ ಇಂತಹ ಸಂದರ್ಭದಲ್ಲಿ ಇದನ್ನು ತರಿಸಿಕೊಂಡು ಜನರಿಗೆ ಮುಟ್ಟಿಸಬೇಕಾದದ್ದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಯಾಗಿದೆ.ಆದರೆ ಸರಕಾರದ ಕೈಕೆಳಗಡೆ ಇರುವ ಪೋಲಿಸರನ್ನು ಬಳಸಿಕೊಂಡು ಈ ರೀತಿಯಲ್ಲಿ ಜನರನ್ನು ಭಯ ಹುಟ್ಟಿಸುವಂತಹ ಮತ್ತು ಜನರು ಅಗತ್ಯ ಸಾಮಾಗ್ರಿಗಳಿಗೆ, ಮೆಡಿಕಲ್ ಗಳಿಗೆ ಯಾವುದಕ್ಕೂ ಕೂಡ ಬರಬಾರದಂತಹ ರೀತಿಯಲ್ಲಿ ವರ್ತಿಸ್ತಾ ಇರುವುದು ಬಹಳಷ್ಟು ಖಂಡನೀಯವಾಗಿದೆ.

ಸರಕಾರ ಪ್ಯಾಕೇಜನ್ನು ಅಥವಾ ಯೋಜನೆಯನ್ನು ಘೋಷಣೆ ಮಾಡಿ ಕೇವಲ ಕಾಗದಕ್ಕೆ ಸೀಮಿತಗೊಳಿಸಿದರೆ ಹೇಗೆ…? ಅದನ್ನು ಕಾರ್ಯಗತಗೊಳಿಸಲು ವಿಫಲವಾಗಿದೆ. ಸಾರ್ವಜನಿಕರು ಕೂಡ ಸರಕಾರ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನು ಆದೇಶ ನೀಡಿದೆಯೋ ಅದನ್ನು ಮನೆಯಲ್ಲೇ ಇದ್ದು ಪಾಲಿಸಬೇಕು. ಕಾರಣ ವೈರಸ್ ತಡೆಯಲಿರುವ ಮದ್ದು ಅದು ಮಾತ್ರ.ಆದುದರಿಂದ ಈ ಆದೇಶವನ್ನು ಕೂಡ ಬಹಳಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರ ನಿಗದಿಪಡಿಸಿದ ಸಮಯವನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕೂಡ ಒಂದಕ್ಕಿಂತ ಹೆಚ್ಚು ಜನ ಬಂದು ಅಂಗಡಿ ಮತ್ತು ಇತರ ಕಡೆಗಳಲ್ಲಿ ನಿಲ್ಲುವುದು ಕೂಡ ಸರಿಯಲ್ಲ. ಆದ್ದರಿಂದ ಸರ್ಕಾರ,ಜಿಲ್ಲಾಡಳಿತ, ಪೊಲೀಸ್,ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರು ಎಲ್ಲಾರು ಒಂದೇ ಕೊಂಡಿಯಾಗಿ ಪರಸ್ಪರ ಅನ್ಯೋನ್ಯತೆ ಯಿಂದ ಮಾನವೀಯತೆ ಯಿಂದ ಸಾಗಿದರೆ ಮಾತ್ರ ಈ ವೈರಸ್ ನ್ನು ತಡೆಗಟ್ಟಲು ಸಾದ್ಯ ವಿರುವುದು.

ಅದು ಬಿಟ್ಟು ಲಾಠಿಯನ್ನು ತೋರಿಸಿ ದರ್ಪವನ್ನು ತೋರಿಸಿದರೆ ಮುಂದಿನ ದಿನಗಳಲ್ಲಿ ಜನರೆಲ್ಲರು ಆಕ್ರೋಶಭರಿತರಾಗಿ ಬೀದಿಗಿಳಿಯುವಂತಹ ಸನ್ನಿವೇಶ ಗಳು ಕಂಡುಬರಬಹುದು.ಇದಕ್ಕೆ ಆಸ್ಪದ ಕೊಡದೇ ಸರ್ಕಾರ ಇಂತಹ ಪೊಲೀಸರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಬೇಕು.ಈ ವೈರಸ್ ನಿಂದ ಜನರನ್ನು ಮುಕ್ತಿಗೊಳಿಸಬೇಕಾದರೆ ಇದಕ್ಕಿರುವ ಒಂದೇ ಒಂದು ಮಾರ್ಗೋಪಾಯವಾಗಿದೆ ಸ್ವಯಂ ರಕ್ಷಣೆ.
ಸಹನೆ ,ತಾಳ್ಮೆ,ಮಾನವೀಯತಯೆ ಮೌಲ್ಯದಿಂದ ಮಾತ್ರ ವೈರಸನಿಂದ ಮುಕ್ತಿಹೊಂದಿ ಯಶಸ್ಸಿಯಾಗಲು ಸಾದ್ಯ.
ಸರ್ವ ಶಕ್ತನಾದ ಸೃಷ್ಟಿಕರ್ತನು ನಮ್ಮೆಲ್ಲರನ್ನು ಸಂರಕ್ಷಿಸಲೀ…ಆಮೀನ್.

STAY HOME
         SAVE LIVES

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...